ಕಟ್ಟಿಕೊಂಡಿರುವ ಎಲ್ಲರೂ ಕನ್ನಡ ಭಾಷೆ ಕಲಿತು ಬಾಳಬೇಕು. ಕವಿ ಸಾಹಿತಿಗಳ ಲೇಖನಗಳನ್ನು ಓದುವುದರಿಂದ ಮಾತ್ರ ಕನ್ನಡ ಬಾರದು. ಕನ್ನಡ ಅನುಷ್ಠಾನಗೊಳ್ಳುವುದರಿಂದ ಭಾಷೆ ಸದೃಢವಾಗುತ್ತದೆ ಎಂದು ನ್ಯೂಟೌನ್ ಈಶ್ವರಮ್ಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು| ಬಿ.ಮೇಘ ಹೇಳಿದರು.
Advertisement
ನ್ಯೂಟೌನ್ ಎಸ್‌ಎವಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜುಗಳು ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ 8ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಹಲವಾರು ವರ್ಷಗಳಿಂದ ಕನ್ನಡದ ನೆಲದಲ್ಲಿ ಬಾಳುತ್ತಿರುವ ಅನೇಕ ಕನ್ನಡೇತರರು ಇಲ್ಲಿ ಎಲ್ಲವನ್ನು ಉಂಡರು ಕನ್ನಡ ಮಾತನಾಡಲು, ಬರೆಯಲು, ಓದಲು ಬರುವುದಿಲ್ಲ. ತಮ್ಮ ಬದುಕಿಗೆ ಬೇಕಾರದಷ್ಟು ಮಾತ್ರ ಕನ್ನಡ ಕಲಿತಿದ್ದಾರೆ. ಕನ್ನಡಿಗರೂ ಸಹ ಅಷ್ಟೇ ಔದಾರ್ಯದಿಂದ ಅವರನ್ನು ಅಪ್ಪಿಕೊಳ್ಳುತ್ತೇವೆ. ಶಾಲೆಗಳಲ್ಲೂ ಕನ್ನಡ ಕಸ್ತೂರಿ ಭಾಷೆ ಕ್ಷೀಣಿಸುವಂತಾಗಿದೆ. ಅದನ್ನು ಸರಿಪಡಿಸಿ ಕನ್ನಡದ ಕಂಪು ಪ್ರಜ್ವಲಿಸುವಂತಾಗಬೇಕು.
ಮಾತನಾಡಿ, ಕನ್ನಡ ಭಾಷಾ ಚಟುವಟಿಕೆಗಳು ಹೆಚ್ಚಾಗಬೇಕು. ಕನ್ನಡಿಗರಲ್ಲದವರಿಂದ ಕನ್ನಡ ಕ್ಷೀಣಿಸುತ್ತಿದೆ. ಕನ್ನಡಿಗರಿಗೆ ಸೂಕ್ತ ಸ್ಥಾನಮಾನಗಳು ಸಿಗಬೇಕಾಗಿದೆ. ಕನ್ನಡ ಸಾಹಿತ್ಯ ಮತ್ತು ಚಿತ್ರಗಳಿಗೆ ಹೆಚ್ಚು ಪ್ರಾಶಸ್ತ ದೊರೆಯಬೇಕಾಗಿದೆ. ಕನ್ನಡ ನಾಡಿನಲ್ಲಿ
ಕನ್ನಡಿಗರಿಗೆ ರಕ್ಷಣೆ ನೀಡಬೇಕಾಗಿದೆ ಎಂದರು. ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಆಶಯ ನುಡಿಗಳನ್ನಾಡಿ, 14 ವರ್ಷಗಳ ಹಿಂದೆ ಎಸ್ ಎಸ್‌ಎಲ್‌ಸಿ ಫಲಿತಾಂಶ ಕಳಪೆಯಾಗಿದ್ದರಿಂದ ಚಿಂತನೆ ಹೊತ್ತ ನಾವು ಮತ್ತು ಶ್ರೀಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿ ಕಾರಿ ಗಳೊಂದಿಗೆ ಮಾತುಕತೆ ಮಾಡಿ ಮಕ್ಕಳಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣವೇ ನೆಂದು ಚಿಂತಿಸುವ ಹಾಗು ಮಕ್ಕಳಲ್ಲಿ ಓದುವ, ಬರೆಯುವ, ಸಾಹಿತ್ಯಾಭಿರುಚಿ ಮುಡಿಸುವ ಜ್ಞಾನ ಬಂಡಾರವನ್ನು ತಲೆಗೆ ತುಂಬುವ ಸಮಾವೇಶ ಮತ್ತು ಸಮ್ಮೇಳನಗಳನ್ನು ನಡೆಸುತ್ತಿರುವ ಫಲವಾಗಿ ಇಂದು ಉತ್ತಮ
ಫಲಿತಾಂಶ ದೊರೆಯುವಂತಾಗಿದೆ ಎಂದರು. ಆದಿಚುಮಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಕ್ಕಳಿಗಾಗಿ ಮಾಡುತ್ತಿರುವ ಈ ಸಮ್ಮೇಳನಗಳು ತುಂಬಾ ಉಪಕಾರಿ ಯಾಗಿದೆ ಎಂದರು. ವೇದಿಕೆಯ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಡಾ|ಹರಿಣಾಕ್ಷಿ ಸ್ವಾಗತಿಸಿ, ವಿದ್ಯಾರ್ಥಿನಿ ಸಿ.ಲೇಖನ ಪ್ರಾರ್ಥಿಸಿ, ಶಾಲಾ ವಿದ್ಯಾರ್ಥಿಗಳು ವೇದ ಪಠಣ ಮತ್ತು ನಾಡಗೀತೆ ಹಾಡಿದರು. ಭೂಮಿಕಾ ಮತ್ತು ಶಿಕ್ಷಕಿ ಗೀತಾ ನಿರೂಪಿಸಿದರು.