ಶಿವಮೊಗ್ಗ: ಕಲ್ಲಗಂಗೂರಿನ ಸ್ಪೋಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಅಲ್ಲದೇ, ಆ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಆಗ ಮಾತ್ರ ಸತ್ಯ ಹೊರಗೆ ಬರಲು ಸಾಧ್ಯ. ಈ ವಿಷಯವನ್ನು ವಿಧಾನಸಭೆ ಅ ಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಗಂಗೂರಿನ ಸರ್ವೇ ನಂ.2ರ ಪಟ್ಟ ಜಮೀನಿನಲ್ಲಿ ಕ್ರಷರ್ ನಡೆಯುತ್ತಿದೆ. ಅದು ಕುಲಕರ್ಣಿ ಎನ್ನುವವರಿಗೆ ಸೇರಿದ್ದು, ಸುಧಾಕರ್ ಎಂಬುವರು ಲೀಸ್ ಗೆ ಪಡೆದು ಕ್ರಷರ್ ನಡೆಸುತ್ತಿದ್ದಾರೆ. 2019ರ ಏ.12ರಂದು ಲೈಸೆನ್ಸ್ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಸ್ಫೋಟ ನಡೆದದ್ದು ಜ.21ರಂದು. ಅದು ಹೇಗೆ ಆಗಿದೆ ಎಂದು ಈವರೆಗೆ ಅಧಿಕಾರಿಗಳಿಗೆ ಗೊತ್ತಿಲ್ಲ.
ಪೊಲೀಸರು ಜಿಲೆಟಿನ್ ಆಂಧ್ರದಿಂದ ಇಲ್ಲಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಸ್ಪೋಟಕಗಳನ್ನು ಮಾರಾಟ ಮಾಡಲು ಲೈಸೆನ್ಸ್ ಇರಬೇಕು. ಸ್ಪೋಟಕ ತರಿಸಿಕೊಂಡ ಸುಧಾಕರ್ ಕಂದಾಯ ಅಧಿ ಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿ ಕಾರಿಗಳಿಗೆ ಹಾಗೂ ಪೊಲೀಸರಿಗೂ ಮಾಹಿತಿ ಕೊಟ್ಟಿಲ್ಲ. ಅಷ್ಟೊಂದು ಬೃಹತ್ ಪ್ರಮಾಣದ ಸ್ಪೋಟಕ ತರುವುದರ ಹಿಂದಿನ ಉದ್ದೇಶವೇನು? ಈ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ ಎಂದರು.
ಕಲ್ಲಗಂಗೂರಿನಲ್ಲಿ ಅಧಿ ಕಾರಿಗಳು ಹೇಳುವಂತೆ, ಕಳೆದ ಐದಾರು ವರ್ಷಗಳಿಂದ ಅಕ್ರಮವಾಗಿ ಕ್ವಾರಿ, ಕ್ರಷರ್ ನಡೆಯುತ್ತಿವೆ. ಆದರೆ, ಅಲ್ಲಿಯ ಜನರನ್ನು ವಿಚಾರಿಸಿದಾಗ 15-20 ವರ್ಷಗಳಿಂದ ನಡೆಯುತ್ತಿವುದಾಗಿ ಹೇಳಿದ್ದಾರೆ. ಸ್ಪೋಟಗೊಂಡ ಕ್ವಾರಿ ಪಕ್ಕವೇ ಒಂದು ಅಕ್ರಮ ಕ್ವಾರಿ ಇದೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ. ಐದಾರು ವರ್ಷ ದಿಂದ ನಡೆಯುತ್ತಿರಬಹುದು ಎಂದು ಹೇಳಿ ದ್ದಾರೆ.
ಆ ಜಾಗ ನೋಡಿದರೆ ಅದು ಇಪ್ಪತ್ತು ವರ್ಷದಿಂದ ನಡೆಯುತ್ತಿರಬಹುದು. ಅದು ಅಕ್ರಮ ಎಂದು ಗೊತ್ತಿದ್ದರೂ ಏಕೆ ತಡೆದಿಲ್ಲ. ಅಂತಹ ಕ್ರಷರ್ ಮತ್ತು ಕ್ವಾರಿ ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸ ಲಾಗುತ್ತಿದೆಯೇ ವಿನಃ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ರಾಜಕೀಯ ವ್ಯಕ್ತಿಗಳ ಪ್ರಭಾವ ವಿಲ್ಲದೇ ಇಷ್ಟೊಂದು ರಾಜಾರೋಷವಾಗಿ ಗಣಿಗಾರಿಕೆ ನಡೆಸಲು ಸಾಧ್ಯವೇ ಇಲ್ಲ. ನನಗೆ ಲಭ್ಯ ಮಾಹಿತಿ ಪ್ರಕಾರ, ಆಡಳಿತರೂಢ ಪಕ್ಷದ ಕ್ವಾರಿಗಳೇ ಅಧಿ ಕ ಸಂಖ್ಯೆಯಲ್ಲಿವೆ ಎಂದು ಆರೋಪಿಸಿದರು.
ಘಟನೆ ನಡೆದು ಇಷ್ಟು ದಿನಗಳಾಗಿದ್ದು, ಜಿಲ್ಲಾ ಧಿಕಾರಿಗಳು ನಾಳೆಯಿಂದ ಗಣಿಗಾರಿ ಕೆಗಳ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿ ಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊ ಳ್ಳಬೇಕು. ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿರುವುದಾಗಿ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದ ಸತ್ಯ ಹೊರ ಬರಬೇಕು. ಜತೆಗೆ, ಬೇನಾಮಿ ಗಣಿಗಾರಿಕೆಗಳ
ಕುರಿತ ಅಂಶಗಳು ಗೊತ್ತಾಗಬೇಕು ಎಂದರು.
ಓದಿ :
“ಮಕ್ಕಳಿಗ್ಯಾಕವ್ವ ಮದುವೆ’ ಬೀದಿ ನಾಟಕ ಪ್ರದರ್ಶನ