Advertisement

ಸಂಡೇ ಕರ್ಫ್ಯೂಗೆ ಎಲ್ಲೆಡೆ ಥಂಡಾ

07:07 PM Apr 26, 2021 | Shreeraj Acharya |

ಶಿವಮೊಗ್ಗ: ಕೊರೊನಾ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ವಿಧಿ ಸಲಾಗಿರುವ ವಾರಾಂತ್ಯ ಕರ್ಫ್ಯೂ ಎರಡನೇ ದಿನವೂ ಶಿವಮೊಗ್ಗ ಭಾಗಶಃ ಸ್ತಬ್ಧವಾಗಿತ್ತು. ಆಸ್ಪತ್ರೆ, ಔಷಧ ಮಾರಾಟ ಮಳಿಗೆ ಬಿಟ್ಟರೆ ಉಳಿದಂತೆ ಎಲ್ಲಾ ವ್ಯಾಪಾರ, ವ್ಯವಹಾರ ಸಂಪೂರ್ಣ ಬಂದ್‌ ಆಗಿದ್ದವು. ಜನರು ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆವರೆಗೂ ಹೊರಗೆ ಅಡ್ಡಾಡಿದರು.

Advertisement

ಮಹಾವೀರ ಜಯಂತಿ ಪ್ರಯುಕ್ತ ಮಾಂಸ ಖರೀದಿಗೆ ಬಂದವರಿಗೆ ನಿರಾಸೆ ಉಂಟಾಗಿದ್ದು ಬಿಟ್ಟರೆ ಉಳಿದಂತೆ ಹಿಂದಿನ ದಿನದಂತೆ ಕರ್ಫ್ಯೂ ಮುಂದುವರಿದಿತ್ತು. ಬೆಳಗ್ಗೆ 10 ಗಂಟೆ ನಂತರ ನಗರದೆಲ್ಲೆಡೆ ಸ್ವಯಂ ಘೋಷಿತ ಬಂದ್‌ ವಾತಾವರಣ ಕಂಡುಬಂತು. ಕೇವಲ ಮುಖ್ಯ ರಸ್ತೆಗಳಲ್ಲದೆ ನಗರದ ವಿವಿಧ ಬಡಾವಣೆಗಳಲ್ಲಿಯೂ ಕೂಡ ದಿನಸಿ ಅಂಗಡಿ ಸೇರಿದಂತೆ ಟೀ ಅಂಗಡಿ, ಹಣ್ಣು, ತರಕಾರಿ, ಹೂವಿನ ವ್ಯಾಪಾರ ಯಾವುದೂ ಇರಲಿಲ್ಲ. ರಸ್ತೆಯಲ್ಲಿ ಜನರ ಓಡಾಟ ತುಂಬಾ ವಿರಳವಾಗಿತ್ತು. ಬಸ್‌, ಆಟೋ ಸಂಚಾರ ಕಡಿಮೆಯಿತ್ತು. ನಗರದ ವಿವಿಧ ಬಡಾವಣೆಗಳಲ್ಲಿ ಪೊಲೀಸ್‌ ವಾಹನಗಳು ಸಂಚರಿಸಿದವು. ಕೆಲವೆಡೆ ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.

ಕರ್ಫ್ಯೂ ಹಿನ್ನೆಲೆಯಲ್ಲಿ ಇಡೀ ನಗರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಭಾನುವಾರ ಇದ್ದ ಕಾರಣ ಬಾಡೂಟಕ್ಕೆ ಜನ ಹಾತೊರೆದಿದ್ದರು. ಆದರೆ ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿತ್ತು. ಇದರಿಂದ ಬಹಳಷ್ಟು ಜನ ಮೀನು ಖರೀದಿಗೆ ಮುಂದಾದರು. ಇದರಿಂದ ಲಷ್ಕರ್‌ ಮೊಹಲ್ಲಾದ ಮೀನು ಮಾರುಕಟ್ಟೆಯಲ್ಲಿ ಜನಜಂಗುಳಿ ಉಂಟಾಗಿತ್ತು. ಜನ ಹೆಚ್ಚಾದ ಕಾರಣ ಮೀನು ದರವೂ ದಿಢೀರ್‌ ಏರಿಕೆ ಕಂಡಿತು. ಪ್ರತಿದಿನ ಪ್ರತಿ ಕೆ.ಜಿ.ಗೆ 140 ರೂ.ಗೆ ಮಾರಾಟವಾಗುತ್ತಿದ್ದ ಕಾಟ್ಲಾ 200 ರೂ., ರಘು ಮೀನಿಗೆ 250 ರೂ., ಚೈನಾ ಪಾಂಪ್ರಟ್‌ 210 ರೂ., ಬಂಗಡೆ ಮೀನಿಗೆ 200 ರೂ., ಗೌರಿ ಮೀನಿಗೆ 250 ರೂ., 100 ರೂ. ಇದ್ದ ತಾರ್ಲೆ ಮೀನು 200 ರೂ.ಗೆ ಮಾರಾಟವಾಯಿತು. ಬೆಲೆ ಏರಿಕೆಯಾಗಿದ್ದರೂ ಜನ ಅನಿವಾರ್ಯವಾಗಿ ಖರೀದಿ ಮಾಡಿದರು.

ಸಿಐಡಿ ಎಡಿಜಿಪಿ ಉಮೇಶ್‌ ಕುಮಾರ್‌ ನಾಲ್ಕು ಜಿಲ್ಲೆ ಭದ್ರತೆ ಉಸ್ತುವಾರಿ ನೀಡಿದ್ದು ಭಾನುವಾರ ಶಿವಮೊಗ್ಗಕ್ಕೆ ಆಗಮಿಸಿದ್ದರು. ಅವರಿಗೆ ಎಸ್‌ಪಿ ಬಿ.ಎಂ. ಲಕೀÒ$¾ಪ್ರಸಾದ್‌ ಸಾಥ್‌ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next