Advertisement

ವಾರಾಂತ್ಯ ಕರ್ಫ್ಯೂ; ಸಂಪೂರ್ಣ ಸ್ತಬ್ಧ

06:17 PM Apr 25, 2021 | Shreeraj Acharya |

ಶಿವಮೊಗ್ಗ: ಕೊರೊನಾ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ವಿಧಿ ಸಲಾಗಿರುವ ವಾರಾಂತ್ಯ ಕಫೂìÂಗೆ ಶಿವಮೊಗ್ಗ ನಗರದಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಆಸ್ಪತ್ರೆ, ಔಷ ಧ ಮಾರಾಟ ಮಳಿಗೆ ಬಿಟ್ಟರೆ ಉಳಿದಂತೆ ಎಲ್ಲಾ ವ್ಯಾಪಾರ, ವ್ಯವಹಾರ ಸಂಪೂರ್ಣ ಬಂದ್‌ ಆಗಿದ್ದವು.

Advertisement

ಬೆಳಗ್ಗೆ 10 ಗಂಟೆ ನಂತರ ನಗರದೆಲ್ಲೆಡೆ ಸ್ವಯಂ ಘೋಷಿತ ಬಂದ್‌ ವಾತಾವರಣ ಕಂಡುಬಂತು. ಕೇವಲ ಮುಖ್ಯ ರಸ್ತೆಗಳಲ್ಲದೆ ನಗರದ ವಿವಿಧ ಬಡಾವಣೆಗಳಲ್ಲಿಯೂ ಕೂಡ ದಿನಸಿ ಅಂಗಡಿ ಸೇರಿದಂತೆ ಟೀ ಅಂಗಡಿ, ಹಣ್ಣು, ತರಕಾರಿ, ಹೂವಿನ ವ್ಯಾಪಾರ ಯಾವುದೂ ಇರಲಿಲ್ಲ. ರಸ್ತೆಯಲ್ಲಿ ಜನರ ಓಡಾಟ ತುಂಬಾ ವಿರಳವಾಗಿತ್ತು. ಕೆಲವು ಖಾಸಗಿ ಬಸ್‌ಗಳು ಬೆಳಿಗ್ಗೆ ಸಂಚರಿಸಿದರೂ ಮಧ್ಯಾಹ್ನದ ನಂತರ ಸಂಚರಿಸಿಲ್ಲ. ಬೆರಳೆಣಿಕೆಯ ಸರ್ಕಾರಿ ಬಸ್‌ ಗಳು ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿತ್ತು. ಆಟೋಗಳ ಸಂಚಾರ ಕಡಿಮೆಯಿತ್ತು. ಆಸ್ಪತ್ರೆ, ಕಚೇರಿ ಮತ್ತಿತರ ತುರ್ತು ಕೆಲಸಗಳಿಗೆ ಹೋಗುವವರು ಮಾತ್ರ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂತು. ಬಹುತೇಕ ಮಂದಿ ಮನೆಯಲ್ಲಿಯೇ ಉಳಿದಿದ್ದರು. ನಗರದ ವಿವಿಧ ಬಡಾವಣೆಗಳಲ್ಲಿ ಪೊಲೀಸ್‌ ವಾಹನಗಳು ಸಂಚರಿಸಿದವು. ಕೆಲವೆಡೆ ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.

ಕರ್ಫ್ಯೂ ಹಿನ್ನೆಲೆಯಲ್ಲಿ ಇಡೀ ನಗರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಮದ್ಯ ಮಾರಾಟವೂ ಸಂಪೂರ್ಣವಾಗಿ ಬಂದ್‌ ಆಗಿತ್ತು. ಬೆಳಿಗ್ಗೆ ಒಂದಿಷ್ಟು ದಿನಸಿ, ಹಾಲಿನ ಅಂಗಡಿ, ಮಾಂಸದ ಅಂಗಡಿಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡಿದ್ದು ಬಿಟ್ಟರೆ ಉಳಿದಂತೆ ಅಂತಹ ಜನ ಸಂದಣಿ ಎಲ್ಲೂ ಕಂಡು ಬರಲಿಲ್ಲ. ಎಪಿಎಂಸಿ ಮಾರ್ಕೆಟ್‌ಗೆ ಶನಿವಾರ ರಜೆ ಇರುವುದರಿಂದ ಬಂದ್‌ ಆಗಿತ್ತು. ಕೆಲವೆಡೆ ತರಕಾರಿ ವ್ಯಾಪಾರಿಗಳು 10 ಗಂಟೆಯ ವರೆಗೂ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡಿದರು. ಒಟ್ಟಾರೆ ವಾರಾಂತ್ಯದ ಕರ್ಫ್ಯೂಗೆ ಜನ, ವ್ಯಾಪಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಕೊರೊನಾ ಭಯ ಎಲ್ಲರನ್ನೂ ಕಟ್ಟಿ ಹಾಕಿತ್ತು. ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಮುಂದುವರೆಯಲಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next