Advertisement

ಮೇಯರ್‌ ನೇತೃತ್ವದಲ್ಲಿ ಕೊರೊನಾ ಜಾಗೃತಿ

06:38 PM Apr 22, 2021 | Shreeraj Acharya |

ಶಿವಮೊಗ್ಗ: ನಗರದಲ್ಲಿ ಹೆಚ್ಚುತ್ತಿರುವ ಎರಡನೇ ಹಂತದ ಕೊರೊನಾ ತಡೆಯಲು ಬುಧವಾರ ಮೇಯರ್‌ ನೇತೃತ್ವದ ತಂಡ ಗಾಂಧಿ  ಬಜಾರ್‌ನಲ್ಲಿ ಜಾಗೃತಿ ಸಂಚಾರ ನಡೆಸಿತು.

Advertisement

ಗಾಂ ಧಿ ಬಜಾರಿನ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್ನ್ನು ಕಡ್ಡಾಯ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿತು. ವ್ಯಾಪಾರಿಗಳು ಸ್ವತ್ಛತೆಗೆ ಆದ್ಯತೆ ನೀಡಬೇಕು ಜೊತೆಗೆ ಸ್ಯಾನಿಟೈಸರ್‌ ಬಳಕೆ ಮಾಡಿ ಕೊಳ್ಳಬೇಕು. ಮಾಸ್ಕ್ ಧರಿಸದಿದ್ದರೆ ಕಡ್ಡಾಯವಾಗಿ ಪೊಲೀಸರು ದಂಡ ಹಾಕುತ್ತಾರೆ ಎಂದು ಮೇಯರ್‌ ಸುನಿತಾ ಅಣ್ಣಪ್ಪ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ  ಧೀರರಾಜ್‌ ಹೊನ್ನವಿಲೆ, ಆಯುಕ್ತ ಚಿದಾನಂದ ವಟಾರೆ, ಉಪಮೇಯರ್‌ ಶಂಕರ್‌ಗನ್ನಿ ಇದ್ದರು. ದಂಡ ವಸೂಲಿ: ನಗರದ ಅನೇಕ ಬಡಾವಣೆ, ವೃತ್ತಗಳಲ್ಲಿ ಪೊಲೀಸರು ಬೆಳಗ್ಗಿನಿಂದಲೇ ಮಾಸ್ಕ್ ಧರಿಸದೆ ಇದ್ದವರಿಗೆ ದಂಡ ಹಾಕುವ ಪ್ರಕ್ರಿಯೆಯಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next