Advertisement

ರಿಷಬ್‌ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಚಿತ್ರಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ

12:22 PM Nov 29, 2022 | Team Udayavani |

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ಮಾಣ ಮಾಡಿರುವ ʼಶಿವಮ್ಮʼ ಚಿತ್ರಕ್ಕೆ ಬೂಸಾನ್ ಚಿತ್ರೋತ್ಸವದ ಪ್ರತಿಷ್ಠಿತ “ನ್ಯೂ ಕರೆಂಟ್ಸ್” ಪ್ರಶಸ್ತಿಯ ಲಭಿಸಿದ್ದು ಗೊತ್ತೇ ಇದೆ. ಈಗ ಚಿತ್ರ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Advertisement

ಯುರೋಪಿನ ಪ್ರತಿಷ್ಠಿತ ಫೆಸ್ಟಿವಲ್‌ 3 ಡೆಸ್ ಕಾಂಟಿನೆಂಟ್ಸ್ ನ ( Festival des 3 Continents) 44 ನೇ ಆವೃತ್ತಿಯಲ್ಲಿ ʼಯಂಗ್‌ ಜ್ಯೂರಿ ಆವಾರ್ಡ್‌ʼ ನ್ನು ಪಡೆದುಕೊಂಡಿದೆ. ಈ ವಿಷಯವನ್ನು ಸ್ವತಃ ನಿರ್ಮಾಪಕ ರಿಷಬ್‌ ಶೆಟ್ಟಿಯವರೇ ಹಂಚಿಕೊಂಡಿದ್ದಾರೆ.

ʼಶಿವಮ್ಮʼ ಸಿನಿಮಾವನ್ನು ಜೈಶಂಕರ್‌ ಆರ್ಯರ್‌ ನಿರ್ದೇಶಿಸಿದ್ದು, ಶರಣಮ್ಮ ಛೆಟ್ಟಿ ಹಾಗೂ ಚೆನ್ನಮ್ಮ ಅಬ್ಬೆಗೆರೆ ಅಭಿನಯಿಸಿದ್ದಾರೆ.ಮಧ್ಯಮ ವಯಸ್ಸಿನ ಬಡ ಹೆಣ್ಣು ಮಗಳೊಬ್ಬಳು ಪಾನೀಯದ ಕಂಪನಿಗೆ ಮಾರಾಟ ಪ್ರತಿನಿಧಿಯಾಗಿ ಅನುಭವಿಸುವ ಅನುಭವಗಳ ಕಥೆ ಈ ಸಿನಿಮಾದಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next