Advertisement

ಕಾಂತಮಂಗಲದಲ್ಲಿ ಘಮ ಘಮಿಸಿದ ಶಿವಳ್ಳಿ ತಿಂಡಿ ಮೇಳ

12:15 AM Jul 22, 2019 | sudhir |

ಸುಳ್ಯ: ಶಿವಳ್ಳಿ ಸಂಪನ್ನ ತಾಲೂಕು ಘಟಕದ ಆಶ್ರಯದಲ್ಲಿ ಪ್ರತೀ ವರ್ಷದಂತೆ ಆಯೋಜಿಸಿದ ತಿಂಡಿ ಮೇಳ-2019 ಕಾಂತಮಂಗಲ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆಯಿತು.

Advertisement

ವಸಂತಿ ಪಡ್ಡಿಲಾಯ ಕಾರ್ಯಕ್ರಮ ಉದ್ಘಾಟಿಸಿದರು. ಬೃಂದಾವನ ಸೇವಾ ಟ್ರಸ್ಟ್‌ ಅಧ್ಯಕ್ಷ ಎಂ.ಎನ್‌. ಶ್ರೀಕೃಷ್ಣ, ಶಿವಳ್ಳಿ ಸಂಪನ್ನ ತಾಲೂಕು ಸಮಿತಿ ಗೌರವಾಧ್ಯಕ್ಷ ರಮೇಶ ಸೋಮಯಾಗಿ, ಅಧ್ಯಕ್ಷ ಮುರಳೀಕೃಷ್ಣ ಕಣ್ಣರಾಯ, ಸಂಘಟನ ಕಾರ್ಯದರ್ಶಿ ಗಿರೀಶ ಕೇಕುಣ್ಣಾಯ, ಕಾರ್ಯದರ್ಶಿ ರಾಮ್‌ ಕುಮಾರ್‌ ಹೆಬ್ಟಾರ್‌, ಕೋಶಾಧಿಕಾರಿ ಶಶಿಧರ ಕೇಕುಣ್ಣಾಯ, ಯುವ ಘಟಕದ ಅಧ್ಯಕ್ಷ ಪ್ರಥಮ ಮೂಡಿತ್ತಾಯ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮೂಡಿತ್ತಾಯ, ಕಾರ್ಯದರ್ಶಿ ಸೌಮ್ಯಾ ಬಾಲಕೃಷ್ಣ ಭಾಗವಹಿಸಿದ್ದರು. ಪಿ.ಎಸ್‌. ನಾರಾಯಣ ಕೆದಿಲಾಯ ಮೆಕ್ಲು ಅವರನ್ನು ಸಮ್ಮಾನಿಸಲಾಯಿತು.

ತಿಂಡಿ ಮೇಳದಲ್ಲಿ ಲೀಲಾವತಿ, ಲಕ್ಷ್ಮೀ ಪ್ರವೀಣ, ಮಮತಾ ಎಂ.ಜೆ., ಅನು ಬಾಲಕೃಷ್ಣ ವೈಲಾಯ, ರೂಪ ಕಿರಣ್‌ ಕಣ್ಣಾರಾಯ, ಉಷಾ ಪಾಂಗಣ್ಣಾಯ, ಸುಮಂಗಲಾ ನಾವಡ, ಶೋಭಾ ಕೇಕುಣ್ಣಾಯ, ಪ್ರವೀಣ ಸೋಮಯಾಗಿ, ಸುಮಂಗಲಾ ಕೊಳತ್ತಾಯ, ಚಿತ್ರಾ ಮಟ್ಟಿ, ಶರ್ಮಿಳಾ ಹೆಬ್ಟಾರ್‌, ಲೀಲಾ ರಮೇಶ್‌, ಪ್ರಸನ್ನಾ ಮಹೇಶ್‌, ರಾಜೇಶ್ವರಿ, ಆಶಾ ನವೀನ್‌, ರಂಜಿನಿ, ಹೇಮಾ ವೈಲಾಯ, ಮೋಹಿಣಿ, ಗಾಯತ್ರಿ ಸೋಮಯಾಗಿ, ಸವಿತಾ ಸೋಮಾಯಾಗಿ, ಸವಿತಾ ಆಚಾರ್‌, ಶ್ರೀಲತಾ ಪೆರ್ಲತ್ತಾಯ, ಕವಿತಾ ಕೇಕುಣ್ಣಾಯ ಭಾಗವಹಿಸಿದರು.

ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದ ತಿನಿಸುಗಳನ್ನು ಉಣ ಬಡಿಸಲಾಯಿತು. ಮೊಸರೊಡೆ, ಹೆಸರುಬೇಳೆ ಪಂಚಕಜ್ಜಾಯ, ಮೆಂತೆಸೊಪ್ಪು ಪಲಾವ್‌, ದಹಿಪೂರಿ, ರಾಗಿ ಹಾಲುಬಾಯಿ, ಮಾವಿನಕಾಯಿ ಪಾನಕ, ಎಲೆ ವಡೆ, ಪತ್ರೋಡೆ, ಖಾರ ಪೊಂಗಲ್, ಕಸಿ ಹಲಸು, ಗೋಭಿ ಮಂಚೂರಿ, ಬೀಟ್ರೂಟ್ ಹಲ್ವ, ಸುಕ್ಕ, ಮಸಾಲೆ ಪುರಿ, ಪಾನಿಪೂರಿ, ಬಿಸಿಬೇಳೆ ಬಾತ್‌, ಭೇಲ್ ಪೂರಿ, ಬೇಬಿ ಕಾರ್ನ್ ಮಂಚೂರಿ, ಬಾಕ್ರ ವಡೆ, ನುಚ್ಚಿನ ಉಂಡೆ ಹೀಗೆ ಹತ್ತಾರು ಬಗೆಯ ತಿನಿಸು ಉದರ ತಣಿಸಿದವು.

ಬಗೆ ಬಗೆಯ ತಿಂಡಿ ಗಮ್ಮತ್ತು

Udayavani is now on Telegram. Click here to join our channel and stay updated with the latest news.

Next