ಮುಂಬಯಿ: ದೇಶದ ಜನರ ಮನದಲ್ಲಿದ್ದ ಗುಲಾಮಗಿರಿ ಮನಃಸ್ಥಿತಿಯನ್ನು ಕೊನೆಗೊಳಿಸಿ ಸ್ವರಾಜ್ಯ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು ಛತ್ರಪತಿ ಶಿವಾಜಿ ಮಹಾರಾಜರೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮರಾಠ ಸಾಮ್ರಾಜ್ಯ ಸಂಸ್ಥಾಪಕರಾದ ಶಿವಾಜಿ ಮಹಾರಾಜರು ಪಟ್ಟಾಭಿಷಿಕ್ತರಾದ 350ನೇ ವಾರ್ಷಿಕೋತ್ಸವದ ಹಿನ್ನೆಲೆ ಶಿವಾಜಿ ಮಹಾರಾಜರಿಗೆ ಪ್ರಧಾನಿ ಮೋದಿ ಶುಕ್ರವಾರ ಗೌರವ ನಮನ ಸಲ್ಲಿಸಿದ್ದಾರೆ. ಶಿವಾಜಿ ಆಡಳಿತದ ಕುರಿತು ವೀಡಿಯೋದಲ್ಲಿ ಮಾತನಾಡಿರುವ ಪ್ರಧಾನಿ ಧೈರ್ಯ ಮತ್ತು “ಶೌರ್ಯಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ದಾರಿದೀಪ’ ಎಂದು ಬಣ್ಣಿಸಿದ್ದಾರೆ.
Advertisement