Advertisement
ನಾಟಕದ ಮಧ್ಯಾಂತರದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕುಲ್ ಬೆಟ್ಟು, ಕೊರೊನಾ ಲಾಕ್‌ಡೌನ್ ಬಳಿಕ ಪುಣೆಯಲ್ಲಿ ನಾಟಕ, ಯಕ್ಷಗಾನದಂತಹ ಕಾರ್ಯಕ್ರಮಗಳು ನಡೆದಿರಲಿಲ್ಲ. ಇಂದು ನಮ್ಮ ಸಭಾಭವನದಲ್ಲಿ “ಶಿವಧೂತೆ ಗುಳಿಗೆ’ ನಾಟಕ ಪ್ರದರ್ಶನ ನಡೆದಿರುವುದು ನಮ್ಮ ಯೋಗವೇ ಸರಿ. ತುಳು ರಂಗಭೂಮಿಯನ್ನು ಶ್ರೀಮಂತಗೊಳಿಸಿದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ದಕ್ಷ ನಿರ್ದೇಶನದಲ್ಲಿ ಈ ನಾಟಕ ಅಭೂತಪೂರ್ವ ಯಶಸ್ಸನ್ನು ಕಂಡಿರುವುದಲ್ಲದೆ ಅವರ ಪೂರ್ಣ ತಂಡದ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಕೊಡಿಯಾಲ್‌ಬೈಲ್ ತುಳು ರಂಗಭೂಮಿಯಲ್ಲಿ ಆವಿಷ್ಕಾರ ಮಾಡಿ ಹೊಸತನದ ಸ್ಪರ್ಶ ನೀಡಿ ಕಲಾಭಿಮಾನಿಗಳ ಹೃದಯವನ್ನು ಗೆದ್ದವರು ಎಂದು ತಿಳಿಸಿದರು.
Related Articles
Advertisement
ಕಾಯಕ್ರಮದ ಮೊದಲು ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ನಿಧನ ಹೊಂದಿದ ರಕ್ಷಣಾ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ದಂಪತಿ ಹಾಗೂ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಭವನದ ಮಹಾದಾನಿ ಮೆಕಾಯ್ ಕಂಪೆನಿಯ ಸಿಎಂಡಿ ಕೆ. ಎಂ. ಶೆಟ್ಟಿ, ಕಲಾಸಂಗಮದ ರೂವಾರಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಬಂಟರ ಸಂಘ ಪುಣೆ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ, ಬಂಟರ ಸಂಘ ದಕ್ಷಿಣ -ಪೂರ್ವ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶೇಖರ್ ಸಿ. ಶೆಟ್ಟಿ, ಸುಭಾಷ್ ಎ. ಶೆಟ್ಟಿ, ಕಾರ್ಯದರ್ಶಿ ಸುಧಾಕರ ಸಿ. ಶೆಟ್ಟಿ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಸುಧಾಕರ ಸಿ. ಶೆಟ್ಟಿ ಸ್ವಾಗತಿಸಿದರು. ಪುಷ್ಪರಾಜ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಕಿರಣ್ ಬಿ. ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಪಾಲ್ಗೊಂಡಿದ್ದರು.
ನನ್ನ ಜನ್ಮಭೂಮಿ ಪುಣೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿ ರಂಗಭೂಮಿ, ಸಿನಿಮಾ ರಂಗಗಳಲ್ಲಿ ತೊಡಗಿಕೊಂಡಿದ್ದೇನೆ. ಎರಡು ಮರಾಠಿ ನಾಟಕಗಳನ್ನು ತುಳುವಿಗೆ ಭಾಷಾಂತರಿಸಿದ್ದೇನೆ. ಮರಾಠಿ ಸಿನೆಮಾವೊಂದು ತೆರೆ ಕಾಣಲು ಸಿದ್ಧವಾಗಿದೆ. ಶಿವದೂತೆ ಗುಳಿಗೆ ನಾಟಕ ಇಂದು 234ನೇ ಪ್ರದರ್ಶನ ಕಾಣುತ್ತಿದ್ದು, ನಾಟಕ ಕ್ಷೇತ್ರದಲ್ಲಿ ಹೊಸ ಇತಿಹಾಸ ರಚಿಸುವತ್ತ ದಾಪುಗಾಲಿಡುತ್ತಿದೆ. ಪ್ರದರ್ಶನಕ್ಕೆ ಅವಕಾಶ ನೀಡಿದ ಪುಣೆ ಬಂಟರ ಸಂಘದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿಗೆ ಕೃತಜ್ಞತೆಗಳು.–ವಿಜಯಕುಮಾರ್ ಕೊಡಿಯಾಲ್‌ಬೈಲ್, ಕಲಾಸಂಗಮದ ರೂವಾರಿ
ನನ್ನ ಮೇಲೆ ಪ್ರೀತಿಯಿಟ್ಟು ಗೌರವಿಸಿದ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ನಾನು ಚಿರಋಣಿ. ನಾವು ಜೀವನದಲ್ಲಿ ಸತ್ಯ, ಧರ್ಮ, ನ್ಯಾಯ, ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಬದುಕು ಸಾರ್ಥಕವಾಗುತ್ತದೆ. ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿದ್ದು, ಇದೀಗ ಪ್ರದರ್ಶನಗೊಳ್ಳುತ್ತಿರುವ ಶಿವಧೂತೆ ಗುಳಿಗೆ ನಾಟಕ ದೈವಗಳ ಮೇಲಿನ ನಂಬಿಕೆಗಳನ್ನು ಮತ್ತಷ್ಟು ಬಲಪಡಿಸುವ ಸಂದೇಶ ನೀಡುತ್ತದೆ. ಅವರು ಭವಿಷ್ಯದಲ್ಲಿ ಇನ್ನಷ್ಟು ಕಲಾಸೇವೆ ಮಾಡುವಂತಾಗಲಿ.–ಪ್ರವೀಣ್ ಶೆಟ್ಟಿ ಪುತ್ತೂರು, ಸಮ್ಮಾನಿತರು
ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವಾಗಿದೆ. ಸಂತೋಷ್ ಶೆಟ್ಟಿಯವರು ಸಂಘದ ಪದಾಧಿಕಾರಿಗಳೆಲ್ಲರ ಸಹಕಾರದೊಂದಿಗೆ ಪುಣೆ ಬಂಟರ ಸಂಘದ ಯಶಸ್ಸಿಗೆ ಅಪಾರವಾಗಿ ಶ್ರಮಿಸಿ¨ªಾರೆ. ಅವರು ಸಮಾಜದ ಆಸ್ತಿಯಾಗಿದ್ದಾರೆ. ಅವರ ಸಮಾಜಹಿತದ ಕಾರ್ಯಕ್ಕೆ ನನ್ನ ಸಹಾಯ, ಸಹಕಾರ ಸದಾ ಇದೆ.–ಕೆ. ಎಂ. ಶೆಟ್ಟಿ, ಮಹಾದಾನಿ, ಸಮಾಜ ಸೇವಕರು