Advertisement

ಹೈಕೋರ್ಟ್ ಆದೇಶ: ಶಿರ್ವ ಮಾಣಿಬೆಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲ ಪ್ರಭಾರ ಹಸ್ತಾಂತರ

06:16 PM Feb 21, 2022 | Team Udayavani |

ಶಿರ್ವ: ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಉಡುಪಿ ಜಿಲ್ಲೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರ (ಪ್ರಭಾರ)ಪರವಾಗಿ ಕಚೇರಿ ಅಧೀಕ್ಷಕಿ ಕೆ. ಕಾವ್ಯ ಅವರು ಮಾಬೆಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ಸ್ವಾಧೀನತೆಯನ್ನು ಆಡಳಿತ ಮೊಕ್ತೇಸರ ಮಾಬೆಟ್ಟು ಅರಂತಡೆ ಮೋಹನದಾಸ ಹೆಗ್ಡೆಯವರಿಗೆ ಫೆ. 21 ರಂದು ಹಸ್ತಾಂತರಿಸಿದರು.

Advertisement

ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳು ಕಾಪು ತಾ| ಶಿರ್ವ ಗ್ರಾಮದ ಮಾಣಿಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನ್ಯಾಯಾಲಯದ ಓ.ಎಸ್‌.ನಂ. 605/2014ರಂತೆ 2017ರ ಜ.4ರಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರನ್ನು ದೇಗುಲದ ರಿಸೀವರ್‌ ಆಗಿ ನೇಮಿಸಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಉಚ್ಛ ನ್ಯಾಯಾಲಯ ರಿಟ್‌ ಪಿಟೀಷನ್‌ ನಂ. 17521/2018 ಮತ್ತು ರಿಟ್‌ ಪಿಟೀಷನ್‌ ನಂ. 25168/2018ರ ಆದೇಶದಂತೆ ರದ್ದುಪಡಿಸಿ, ದೇವಸ್ಥಾನದ ಸ್ವಾಧೀನತೆಯನ್ನು ಮೋಹನದಾಸ ಹೆಗ್ಡೆ ಅವರಿಗೆ ನೀಡುವಂತೆ ಆದೇಶ ನೀಡಿತ್ತು.

ಉಚ್ಛ ನ್ಯಾಯಾಲಯದ ಸಿಸಿಸಿ ನಂ. 37/2022ರ ಫೆ.9ರ ಆದೇಶದಂತೆ ದೇಗುಲದ ರಿಸೀವರ್‌ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರ ಸುಪರ್ದಿಯಲ್ಲಿರುವ ಎಲ್ಲಾ ಪ್ರಭಾರವನ್ನು ಆಡಳಿತ ಮೊಕ್ತೇಸರ ಮೋಹನದಾಸ ಹೆಗ್ಡೆಯವರಿಗೆ ಸೋಮವಾರ ಹಸ್ತಾಂತರಿಸಲಾಗಿದೆ.

ಇಲಾಖೆಯ ಸಹಾಯಕ ಆಯುಕ್ತರ ಕಚೇರಿಯ ಸಿಬಂದಿ ಸುಜಾತಾ, ಶಿರ್ವ ಗ್ರಾಮ ಕರಕ ವಿಜಯ್‌,ಸಹಾಯಕ ಭಾಸ್ಕರ್‌, ಶಿರ್ವ ಮಾಬೆಟ್ಟು ಅರಂತಡೆ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next