Advertisement
ತೆಂಕ ಎರ್ಮಾಳು ಅದಮಾರು ಮಠದ ಬಳಿಯ ನಿವಾಸಿ ಕೇಶವ (43) ಬಾವಿಗೆ ಬಿದ್ದವರು. ಇವರು ಪತ್ನಿಯೊಂದಿಗೆ ಜಗಳವಾಡಿ ಶಿರ್ವಕ್ಕೆ ಬಂದು ಬಂಗ್ಲೆ ಮೈದಾನ ಕ್ರಾಸ್ ರಸ್ತೆ ಬಳಿಯ ಮನೆಯ ಗೇಟ್ ಹಾರಿ ಬಾವಿಯ ಬಳಿಗೆ ಹೋಗಿದ್ದ. ದಂಡೆಯ ಮೇಲೆ ಕುಳಿತಿದ್ದವ ಆಯತಪ್ಪಿ ಬಾವಿಗೆ ಬಿದ್ದು ರಾತ್ರಿಯಿಡೀ ಪಂಪ್‌ಸೆಟ್‌ನ ಹಗ್ಗ ಹಿಡಿದು ಜೀವ ಉಳಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗಿನ ಜಾವ ಅವರ ಬೊಬ್ಬೆ ಕೇಳಿ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಘಟನೆ ನಡೆದ ಮನೆಮಂದಿ 2 ದಿನಗಳ ಹಿಂದೆ ಮನೆ ಹಾಗೂ ಗೇಟ್‌ಗೆ ಬೀಗ ಹಾಕಿ ಮುಂಬಯಿಗೆ ತೆರಳಿದ್ದರು. ಈತ ಬುಧವಾರ ಸಂಜೆ ವೇಳೆ ಆ ಪ್ರದೇಶದಲ್ಲಿ ಅಡ್ಡಾಡಿ ಕೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಾವಿಯಲ್ಲಿರುವ ಪಂಪ್‌ಸೆಟ್ ಕದಿಯಲು ಹೋಗಿ ಒಳಗೆ ಬಿದ್ದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.