Advertisement

ಗ್ರಾಮ ಸಭೆ: ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೈಜೋಡಿಸಿ;ಪಾಟ್ಕರ್‌

05:58 PM Jul 19, 2021 | Team Udayavani |

ಶಿರ್ವ : ಕಾಪು ತಾಲೂಕಿನ ಏಕೈಕ ಸಮುದಾಯ ಆರೋಗ್ಯ ಕೇಂದ್ರವಾದ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆ  ಸೇವೆ ನೀಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರಬರೆಯಲಾಗಿದ್ದು, ಸೇವೆ ಸಿಗದಿದ್ದಲ್ಲಿ  ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಿ ಉತ್ತಮ ಸೇವೆ ಸಿಗಲು ಪ್ರಯತ್ನಿಸಬೇಕಿದೆ. ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳು ಜನರ ತೆರಿಗೆಯಿಂದಲೇ ನಡೆಯಬೇಕಿದ್ದು , ಗ್ರಾಮಸ್ಥರು ಸಕಾಲದಲ್ಲಿ ತೆರಿಗೆ ಪಾವತಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕಿದೆ. ಎಂದು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಹೇಳಿದರು.

Advertisement

ಅವರು ಸೋಮವಾರ ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆ ಬಳಿಯ ಮಹಿಳಾ ಸೌಧದಲ್ಲಿ ನಡೆದ ಶಿರ್ವ ಗ್ರಾಮ ಪಂಚಾಯತ್‌ನ 2021-22ನೇ ಸಾಲಿನ ಪ್ರಥಮ ಗ್ರಾಮ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೋಡಲ್‌ ಅಧಿಕಾರಿ ಕಾಪು ತಾ.ಪಂ.ಲೆಕ್ಕಸಹಾಯಕ ಸುಂದರ ನಾಯಕ್‌ ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ  ಗ್ರಾಮಸ್ಥರ ಸಹಕಾರ ಅತೀ ಅಗತ್ಯ ಎಂದು ಹೇಳಿದರು. ಪಂಚಾಯತ್‌ ಕಾರ್ಯದರ್ಶಿ ಮಂಗಳಾ ಜೆ.ವಿ.ವಾರ್ಡ್‌ ಸಭೆಯ ವರದಿ ಮಂಡಿಸಿದರು. ದ್ವಿತೀಯ ದರ್ಜೆ ಸಹಾಯಕಿ ಚಂದ್ರಮಣಿ 2020-21ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.

ಉಡುಪಿ ಜಲಜೀವನ್‌ ಮಿಷನ್‌ನ ಗಿರೀಶ್‌ ಟಿ.ವಿ.,ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ರಾವ್‌,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಶೈಲಾ, ಪಶು ವೈದ್ಯಾಧಿಕಾರಿ ಡಾ| ಅರುಣ್‌ ಹೆಗ್ಡೆ,ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ರಾಘವೇಂದ್ರ ನಾಯಕ್‌, ತೋಟಗಾರಿಕೆ ಇಲಾಖೆಯ ಅಮಿತ್‌, ಮೆಸ್ಕಾಂ ಇಲಾಖಾಧಿಕಾರಿ ಕೃಷ್ಣ, ಗ್ರಾಮ ಕರಣಿಕ ವಿಜಯ್‌ ಇಲಾಖಾ ಮಾಹಿತಿ ನೀಡಿದರು.

ಉಡುಪಿ ಅಮೂಲ್ಯ ಸಾಕ್ಷರತಾ ಕೇಂದ್ರದ ಸಂತೋಷ್‌ಕುಮಾರ್‌ ವಿಮಾ ಸೌಲಭ್ಯದ ಬಗ್ಗೆ,,ಕೆನರಾ ಬ್ಯಾಂಕ್‌ ಮಣಿಪಾಲ ಸೊÌàದ್ಯೋಗ ಸಂಸ್ಥೆಯ ಶ್ರೇಯಾ ಸೊÌàದ್ಯೋಗ ತರಬೇತಿ ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಿರ್ವ ಶಾಖೆಯ ಪ್ರಬಂಧಕ ಅಭಿನಂದನ್‌ ಬಾಯಿರಿ ಬ್ಯಾಂಕಿಂಗ್‌ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

Advertisement

ಕೆರೆ ದುರಸ್ತಿ,ಬೀದಿನಾಯಿಗಳ ವ್ಯಾಕ್ಸಿನೇಷನ್‌, ವಿದ್ಯುತ್‌ ಸಮಸ್ಯೆ ,ಶಿರ್ವಸಮುದಾಯ ಆರೋಗ್ಯ ಕೇಂದ್ರದ 24 ಗಂಟೆಗಳ ಸೇವೆ ಸೇರಿದಂತೆ ಇತರ ಗ್ರಾಮದ ಜನರ ಸಮಸ್ಯೆ, ಅರ್ಜಿ ಅಹವಾಲುಗಳನ್ನು ಸ್ವೀಕರಿಸಿ,ಜನರ ಪ್ರಶ್ನೆಗಳಿಗೆ ಇಲಾಖೆಯ ಅಧಿಕಾರಿಗಳು ಉತ್ತರಿಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾಡೋìಜಾ ಮಾತನಾಡಿದರು. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ  ವನಿತಾ ಮತ್ತು ಗ್ರಾ. ಪಂ. ಸದಸ್ಯರು ವೇದಿಕೆಯಲ್ಲಿದ್ದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್‌ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪಂಚಾಯತ್‌ ಸಿಬಂದಿ ದಿನೇಶ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಗ್ರಾಮಸಭೆಯ ನೇರ ಪ್ರಸಾರ:

ಹೊಸಕಲ್ಪನೆಯೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಯೂ ಟೂಬ್‌ ಚಾನೆಲ್‌ ಮೂಲಕ  ಗ್ರಾಮಸಭೆಯ ಕಲಾಪಗಳನ್ನು ನೇರ ಪ್ರಸಾರ ಮಾಡಲಾಗಿತ್ತು. ಗ್ರಾಮಸಭೆಯಲ್ಲಿ ಭಾಗವಹಿಸಲು ಅಸಾಧ್ಯವಾದ ಗ್ರಾಮಸ್ಥರು ಮತ್ತು ದೇಶ ವಿದೇಶಗಳಲ್ಲಿ ನೆಲೆಸಿರುವ ಗ್ರಾಮಸ್ಥರು ಮನೆಯಲ್ಲಿಯೇ ಕುಳಿತು ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next