ಶಿರ್ವ: ಇಲ್ಲಿನ ಆರೋಗ್ಯ ಮಾತಾ (ಸಾವುದ್ ಅಮ್ಮನವರ) ದೇವಾಲಯದಲ್ಲಿ ಜ. 31 ಮತ್ತು ಫೆ.1ರಂದು ದೇವರ ವಾಕ್ಯದ ಸಂಭ್ರಮದೊಂದಿಗೆ ವಾರ್ಷಿಕ ಮಹೋತ್ಸವ ನಡೆಯಲಿದೆ.
ಜ. 29 ಸಹೋದರತೆಯ ರವಿವಾರ ಸಂಜೆ ಪರಮ ಪ್ರಸಾದದ ಮೆರವಣಿಗೆ ನಡೆದು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ| ಮ್ಯಾಕ್ಸಿಂ ನೊರೊನ್ಹಾ ನೇತೃತ್ವದಲ್ಲಿ ಬಲಿಪೂಜೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
ಜ. 31ರ ಸಂಜೆ 6-30ಕ್ಕೆ ಶಂಕರಪುರ ಸಂತ ಎವೆಂಜಲಿಸ್ಟ್ ಚರ್ಚಿನ ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಚರಲ್ ಆಶೀರ್ವಾದದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಿರುವರು.
ಫೆ.1ರಂದು ಬೆಳಿಗ್ಗೆ 10-15ಕ್ಕೆ ತೊಟ್ಟಂ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಡೆನ್ನಿಸ್ ಡೇಸಾ ಅವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಮತ್ತು ವಾರ್ಷಿಕ ಮಹೋತ್ಸವ ಜರಗಲಿದೆ.
ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಆರೋಗ್ಯ ಮಾತೆಯ ಆಶೀರ್ವಾದ ಪಡೆಯಲು ಸರ್ವ ಧರ್ಮದ ಭಕ್ತಾಧಿಗಳಿಗೆ ಹರಕೆ ಸಲ್ಲಿಸಲು ಹಾಗೂ ಮೊಂಬತ್ತಿ ಉರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಚರ್ಚಿನ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ, ಸಹಾಯಕ ಧರ್ಮಗುರುಗಳಾದ ರೆ|ಫಾ| ರೋಲ್ವಿನ್ ಅರಾನ್ಹಾ ಮತ್ತು ರೆ|ಫಾ|ಸ್ಟೀವನ್ ನೆಲ್ಸನ್ ಪೆರಿಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.