ಶಿರ್ವ: ಶಂಕರಪುರದ ಬ್ಲಾಕ್ ಫ್ಯಾಕ್ಟರಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಶೋಭಾ ಅವರು ಜ. 9ರಂದು ಕೆಲಸ ಬಿಟ್ಟು ಮನೆಗೆ ಬಂದ ಬಳಿಕ ಅಡುಗೆ ಮಾಡುತ್ತಿದ್ದ ಸಂದರ್ಭ ಗಂಡ ರವಿ ಕುಲಾಲ್(55) ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ.
Advertisement
ತಲೆ, ಕೈಗಳಿಗೆ ಗಾಯವಾಗಿದ್ದ ಅವರನ್ನು ಪುತ್ರ ಶರತ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಟೆಂಪೋದವರು ಜಲ್ಲಿ ಅನ್‌ಲೋಡ್ ಮಾಡಿದ್ದನ್ನು ನೋಡಿದ ಗಂಡ ರವಿ ಕುಲಾಲ್ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಶೋಭಾ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.