ಗೋಕರ್ಣ: ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 9 ಜನರ ಶವ ಪತ್ತೆಯಾಗಿದ್ದು, ಇನ್ನಿಬ್ಬರ ಶವ ಪತ್ತೆಯಾಗಬೇಕಿದೆ. ಆದರೆ ಈ ಹಿಂದಿನಿಂದಲೂ ಪ್ರತ್ಯಕ್ಷದರ್ಶಿಗಳ ಪ್ರಕಾರ 15 ಜನರಿಗಿಂತಲೂ ಅಧಿಕ ವ್ಯಕ್ತಿಗಳು ಇಲ್ಲಿ ಸಿಲುಕಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.
Advertisement
ಹಾಗೇ ಸೆ.30 ರಂದು ಕಾರ್ಯಾಚರಣೆಯಲ್ಲಿ ಸಿಕ್ಕ 2 ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದರೂ ಇನ್ನುವರೆಗೂ ಅದರ ವರದಿ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನ್ಯಾಯಾಲಯದ ಮೊರೆ ಹೋಗಿದ್ದರಿಂದಾಗಿ ಜಿಲ್ಲಾಡಳಿತಕ್ಕೆ ಹಾಗೇ ರಾಜ್ಯಕ್ಕೆ ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿತ್ತು. ಗೋವಾದಿಂದ ಬಂದ ಕೋಟಿವೆಚ್ಚದ ಡ್ರೆಜ್ಜಿಂಗ್ ಯಂತ್ರ ಸತತವಾಗಿ ಕಾರ್ಯಾಚರಣೆ ನಡೆಸಿ ಲಾರಿ ಹಾಗೂ ಆತನ ಕಳೆಬರ ಪತ್ತೆಹಚ್ಚಲು ಯಶಸ್ವಿಯಾಗಿದ್ದರು. ಆದರೆ ಈಗ ನಾಪತ್ತೆಯಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಪರವಾಗಿ ಧ್ವನಿ ಎತ್ತುವವರು ಇಲ್ಲದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
Related Articles
Advertisement
ಇನ್ನು 10 ದಿನಗಳ ನಂತರ ವರದಿ ಬರಲಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ವರದಿ ಬಾರದಿರುವುದು ಜನರಲ್ಲಿ ಅನುಮಾನ ಹುಟ್ಟುಹಾಕಿದೆ. ಆರಂಭದಲ್ಲಿಯೇ 15 ಜನರಿಗಿಂತ ಹೆಚ್ಚು ಜನರು ಈ ದುರ್ಘಟನೆಯಲ್ಲಿ ನೀರು ಪಾಲಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಹೀಗೆ ಸೂಕ್ಷ್ಮವಾಗಿ ಗಮನಿಸಿದರೆ 11 ಜನರ ಬದಲಿಗೆ ಈಗ ಸಿಕ್ಕಿರುವ ಮೂಳೆಗಳು 12 ಅಥವಾ 13ನೇ ವ್ಯಕ್ತಿಗಳದ್ದಾ ಎಂಬ ಅನುಮಾನಗಳು ಮೂಡತೊಡಗಿವೆ. ಈ ಕುರಿತು ಜಿಲ್ಲಾಡಳಿತ ಜನರ ಮುಂದೆ ಸ್ಪಷ್ಟನೆ ನೀಡಬೇಕಾಗಿದೆ.
ಜು.16 ರಂದು ನಡೆದ ಘಟನೆಯಲ್ಲಿ ನಮ್ಮ ಸಹೋದರ ನಾಪತ್ತೆಯಾಗಿದ್ದಾನೆ. ಇದುವರೆಗೂ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾರ್ಯಾಚರಣೆ ಸಂದರ್ಭದಲ್ಲಿ ನಾವು ಸ್ಥಳದಲ್ಲಿಯೇ ಇದ್ದರೂ ಕೂಡ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ನಮ್ಮ ಸಹೋದರ ಲೋಕೇಶ ನಾಯ್ಕರ ಅವಶೇಷಗಳು ನಮಗೆ ಲಭ್ಯವಾಗಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಹೋರಾಟಗಳಲ್ಲಿ ನಾನು ಭಾಗವಹಿಸುತ್ತೇನೆ.ವಿನೋದ ನಾಯ್ಕ, ನಾಪತ್ತೆಯಾದ
ಲೋಕೇಶನ ಸಹೋದರ