Advertisement
ನದಿಯಾಳದಲ್ಲಿ ಸಿಲುಕಿರುವ ಭಾರತ್ ಬೆಂಜ್ ಟ್ರಕ್, ಗ್ಯಾಸ್ ಟ್ಯಾಂಕರ್ ಚೆಸ್ಸಿ ಇರುವ ಜಾಗವನ್ನು ಹುಡುಕಲು ಡ್ರೋನ್ ಯಶಸ್ವಿಯಾದರೂ ಟ್ರಕ್ ಇರುವ ಸ್ಥಳ ತಲುಪಲು ಮುಳುಗು ತಜ್ಞರಿಗೆ ಸಾಧ್ಯವಾಗಲಿಲ್ಲ. ನದಿ ನೀರಿನ ಅಂಡರ್ ಕರೆಂಟ್ 6.6 ನಾಟ್ಸ್ (nots) ವೇಗದ ಕಾರಣ ನದಿ ನೀರಿಗೆ ಧುಮುಕಿ ಟ್ರಕ್ ಇರುವ ಸ್ಥಳ ತಲುಪಲು ನೇವಿ ಮುಳುಗು ತಜ್ಞರಿಗೆ ಸಾಧ್ಯವಾಗಲಿಲ್ಲ. ನದಿ, ಸಮುದ್ರದಲ್ಲಿ ಈಜುವ ನೇವಿ ಪರಿಣಿತರು ಎರಡು ಸಲ ಗಂಗಾವಳಿ ನದಿಯ ಬಳಿಗೆ ಆಗಮಿಸಿ, ನದಿಗೆ ಇಳಿಯಲು ವಿಫಲ ಪ್ರಯತ್ನ ನಡೆಸಿದರು.
Related Articles
Advertisement
ಶಿರೂರು ಹೆದ್ದಾರಿ ಪಕ್ಕದ ಗುಡ್ಡ ಭೂಕುಸಿತದಲ್ಲಿ ಇನ್ನೂ ಮೂವರ ಶವ ದೊರೆಯಬೇಕಿದೆ. ಈಗಾಗಲೇ ದೊರೆತ ಲಕ್ಷ್ಮಣ ನಾಯ್ಕ ಕುಟುಂಬದ ನಾಲ್ವರು ಹಾಗೂ ತಮಿಳು ನಾಡಿನ ಮೂವರು ಲಾರಿ ಚಾಲಕರು ಹಾಗೂ ಸಣ್ಣಿ ಹನುಮಂತ ಗೌಡ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಗುರುವಾರ ಗುರುತು ಪತ್ತೆಯಾದ ಶರವಣನ್ ಕುಟುಂಬದ ಸದಸ್ಯರಿಗೆ ಐದು ಲಕ್ಷ ರೂ. ನೀಡಲಾಗಿದೆ.
ಶಿರೂರು ಹೆದ್ದಾರಿಯ ಎರಡು ಬದಿಗೆ ಬಿದ್ದ ಮಣ್ಣು ತೆರವಿನ ಕಾರ್ಯ ಮುಂದುವರಿದಿದೆ. ಎನ್ಎಚ್ಎಐ ಹಾಗೂ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರಿಂಗ್ ವಿಭಾಗ ಶಿರೂರು ಬಳಿ ಹಲವು ಮುಂಜಾಗ್ರತಾ ಕ್ರಮಗಳನ್ನು ಆರಂಭಿಸಿದೆ.