Advertisement
ಶಿರಿಯಾರದಿಂದ ಕೊರ್ಗಿ, ಹೆಸ್ಕತ್ತೂರು, ಚಾರುಕೊಟ್ಟಿಗೆಗೆ ಸಂಚರಿಸುವ ಪ್ರಮುಖ ಮಾರ್ಗ ಇದಾಗಿದ್ದು, ನಿತ್ಯ ನೂರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ.
ಈ ಮಾರ್ಗದುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ಬಾಯ್ದೆರೆದುಕೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಅದರಲ್ಲೂ ಈಗ ಮಳೆಗೆ ರಸ್ತೆಯಿಡೀ ನೀರು ನಿಂತಿದ್ದು, ರಸ್ತೆಯಲ್ಲಿ ಎಲ್ಲಿ ಹೊಂಡ ಇದೆ, ಎಲ್ಲಿ ರಸ್ತೆ ಸರಿ ಇದೆ ಎನ್ನುವುದೇ ತಿಳಿಯದ ಸ್ಥಿತಿ. ರಸ್ತೆ ಸರಿ ಇದೆ ಎಂದು ವಾಹನ ಚಲಾಯಿಸಿದರೆ ಗುಂಡಿಗೆ ಬಿದ್ದು, ಎಡವಿ ಬೀಳುವ ಸಂಭವವೂ ಇದೆ. ಗುಡ್ಡಟ್ಟುಗೆ ಸಂಪರ್ಕ ರಸ್ತೆ
ಕೊರ್ಗಿಯಿಂದ ಇದೇ ಮಾರ್ಗವಾಗಿ ಪುರಾಣ ಪ್ರಸಿದ್ಧ ಗುಡ್ಡಟ್ಟು ಗಣಪತಿ ದೇವಸ್ಥಾನಕ್ಕೆ ತೆರಳಲು ಹತ್ತಿರದ ರಸ್ತೆ ಇದಾಗಿದೆ.
Related Articles
ಶಿರಿಯಾರದಿಂದ ಹೆಸ್ಕಾತ್ತೂರು ಮೂಲಕವಾಗಿ ಇದೇ ಮಾರ್ಗದಲ್ಲಿ ನಿತ್ಯ ಬಸ್‌ಗಳು ಸಂಚರಿಸುತ್ತಿದ್ದು, ಈ ಹೊಂಡ -ಗುಂಡಿಗಳ ರಸ್ತೆಯಲ್ಲಿ ಬಸ್‌ಗಳು ಸಂಚರಿಸುವುದೇ ಕಷ್ಟಕರವಾಗಿದೆ.
Advertisement
ದುರಸ್ತಿಗೆ ಮನವಿ ಸಲ್ಲಿಕೆಕೊರ್ಗಿ, ಹೆಸ್ಕಾತ್ತೂರು, ಚಾರುಕೊಟ್ಟಿಗೆಗೆ ಸಂಚರಿಸುವ ರಸ್ತೆ ಅಭಿವೃದ್ಧಿಗೆ ಶಾಸಕರು ಅನುದಾನ ಮಂಜೂರು ಮಾಡಿಸಿದ್ದು, ಟೆಂಡರ್ ಕೂಡ ಕರೆಯಲಾಗಿದೆ. ಮಳೆ ಕಡಿಮೆಯಾದ ಬಳಿಕ ಕಾಮಗಾರಿ ಆರಂಭವಾಗಬಹುದು.
– ಶ್ರೀಲತಾ ಸುರೇಶ್ ಶೆಟ್ಟಿ, ಸ್ಥಳೀಯ ಜಿ.ಪಂ. ಸದಸ್ಯರು ತೇಪೆ ಆದರೂ ಹಾಕಲಿ
ನಾವು ಇದೇ ಮಾರ್ಗವಾಗಿ ದಿನಾಲೂ ಸಂಚರಿಸಬೇಕಾಗುತ್ತದೆ. ಹೊಂಡ – ಗುಂಡಿಗಳಿರುವ ಈ ರಸ್ತೆಯಲ್ಲಿ ಬೈಕ್ ಚಲಾಯಿಸುವುದೇ ಸವಾಲಿನ ಸಂಗತಿ. ರಾತ್ರಿ ವೇಳೆ ಅಂತೂ ನೀರು ನಿಂತು, ಹೊಂಡ, ಗುಂಡಿಗಳು ಇರುವುದು ತಿಳಿಯುವುದೇ ಇಲ್ಲ. ಈಗ ಮಳೆಗಾಲದಲ್ಲಿ ಕನಿಷ್ಠ ತೇಪೆ ಕಾರ್ಯವಾದರೂ ಮಾಡಲಿ ಎನ್ನುವುದಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.