Advertisement

ಮತದಾರರ ಪಟ್ಟಿಯಲ್ಲಿ ಶಿರ್ಡಿ ಸಾಯಿಬಾಬಾ ಹೆಸರು ಪತ್ತೆ, ಕೇಸು ದಾಖಲು

11:42 AM Aug 30, 2018 | Team Udayavani |

ಶಿರ್ಡಿ : ಅಹ್ಮದ್‌ನಗರ ಜಿಲ್ಲೆಯ ಸ್ಥಳೀಯ ಅಸೆಂಬ್ಲಿ ಕ್ಷೇತ್ರದ ಮತದಾರರ ಪಟ್ಟಿಗೆ ಚುನಾವಣಾ ಆಯೋಗದ ಆನ್‌ಲೈನ್‌ ವ್ಯವಸ್ಥೆಯ ಮೂಲಕ ಶಿರ್ಡಿ ಸಾಯಿಬಾಬಾ ಹೆಸರನ್ನು ಸೇರಿಸಲು ಅಪರಿಚಿತ ವ್ಯಕ್ತಿಯೋರ್ವ ಯತ್ನಿಸಿರುವ ವಿಲಕ್ಷಣಕಾರಿ ಮತ್ತು ಆಘಾತಕಾರಿ ಘಟನೆ ವರದಿಯಾಗಿದೆ.

Advertisement

ಆನ್‌ಲೈನ್‌ ಫಾರ್ಮುಗಳ ಪರಿಶೀಲನೆಯ ವೇಳೆ ಇದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಒಡನೆಯೇ ಪೊಲೀಸರನ್ನು ಸಂಪರ್ಕಿಸಿದರು. ಅರ್ಜಿಯಲ್ಲಿ ಸಾಯಿ ಬಾಬಾ ಅವರ ವಿಳಾಸವಾಗಿ ಶಿರ್ಡಿ ದೇವಾಲಯದ ವಿಳಾಸವನ್ನು ನಮೂದಿಸಲಾಗಿರುವುದು ಕಂಡು ಬಂದಿದೆ. 

ಮತದಾರರ ಸೇರ್ಪಡೆಯ ಆನ್‌ಲೈನ್‌ ಅರ್ಜಿ ಪರಿಶೀಲನೆಯ ವೇಳೆ ಇದು ಪತ್ತೆಯಾದಾಗ ಚುನಾವಣಾ ಶಾಖೆಯ ನಯಾಬ್‌ ರಹತಾ ತಹಶೀಲ್ದಾರ್‌ ಸಚಿನ್‌ ಮಾಸ್ಕೆ ಅವರು ಪೊಲೀಸರಿಗೆ ದೂರು ನೀಡಿದರು. 

ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಟಿ ಕಾಯಿದೆಯ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಈ ಕೇಸನ್ನು ಅಹ್ಮದ್‌ನಗರ್‌ ಜಿಲ್ಲೆಯ ಸೈಬರ್‌ ಕ್ರೈಮ್‌ ಶಾಖೆಗೆ ವರ್ಗಾಯಿಸಲಾಗಿತ್ತು. ಆದರೆ ಅನಂತರ ಅದನ್ನು ರಹತಾ ಪೊಲೀಸರಿಗೆ ಮರಳಿಸಲಾಯಿತು. ಪರಿಣಾಮವಾಗಿ ಪ್ರಕರಣದ ತನಿಖೆಯಲ್ಲಿ ವಿಳಂಬವಾಯಿತು 

Advertisement

Udayavani is now on Telegram. Click here to join our channel and stay updated with the latest news.

Next