Advertisement

ಶಿರಸಿ: ಬಾಯಾರಿದ ಜೀವಕ್ಕೆ”ಜಲ’ ಕೊಡುತ್ತಿದೆ ಕಾರ್ಯಪಡೆ

01:37 PM May 29, 2023 | Team Udayavani |

ಶಿರಸಿ: ಕಳೆದ ಏಳು ವರ್ಷಗಳಿಂದ ವರ್ಷಕ್ಕೆ ಕನಿಷ್ಠ ಐದಾರು ಕೆರೆಗಳ ಅಭಿವೃದ್ದಿ ಮಾಡುತ್ತಿರುವ ಶಿರಸಿಯ ಜೀವಜಲ ಕಾರ್ಯ ಪಡೆ ಕೇವಲ ಕೆರೆಯ ಹೂಳೆತ್ತಿವಿಕೆ ಮಾತ್ರವಲ್ಲ, ನೀರಿಲ್ಲದ ಜನರಿಗೆ ಕುಡಿಯುವ ನೀರನ್ನು ಮನೆ ಬಾಗಿಲಿಗೆ ಕೊಡುವ ಕಾಯಕ ಮಾಡುತ್ತಿದೆ.

Advertisement

ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್‌ ಅವರ ಕನಸಿನ ನೆರವಿನ ಹಸ್ತದ ಯೋಜನೆಯಾಗಿದೆ. “ಬಾಯಾರಿದವರಿಗೆ ಶುದ್ಧ ಕುಡಿಯುವ ನೀರು ಕೊಡುವ ಕಾಯಕ’ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.

ಮೊದ ಮೊದಲು ಅಲ್ಲಿ ಇಲ್ಲಿ ಬೇರೆ ಬೇರೆ ಟ್ಯಾಂಕರ್‌ ಮೂಲಕ ನೀರು ಕೊಡುತ್ತಿದ್ದ ಕಾರ್ಯಪಡೆಯ ಹೆಬ್ಬಾರರು ನಂತರ ಕಾರ್ಯಪಡೆಗೆ ನೀರಿ ಟ್ಯಾಂಕರ್‌ ವಾಹನ ಖರೀದಿಸಿ ನೀರು ಬೇಕೆಂದವರಿಗೆ ಧಾರಾಳವಾಗಿ ನೀಡುವ ವ್ಯವಸ್ಥೆ ಮಾಡಿದ್ದಾರೆ.
ಈ ವರ್ಷದ ಬಿರು ಬೇಸಗೆಯ ಕಾರಣದಿಂದ ಶಿರಸಿಗೆ ನೀರು ಪೂರೈಸುವ ಕೆಂಗ್ರೆ ಹಾಗೂ ಮಾರಿಗದ್ದೆಯ ಹಳ್ಳದಲ್ಲೂ ನೀರಿನ ಕೊರತೆ ಆಗಿದ್ದು ನಗರಸಭೆ ಎರಡು ದಿನಗಳಿಗೊಮ್ಮೆ ನೀರು ಬಿಡುತ್ತಿದೆ. ಕೆಲವಡೆ ಬಾವಿ ನೀರು ಆಶ್ರಯಸಿಕೊಂಡವರಿಗೆ ತಳ ಕಂಡಿದೆ.

ಹೀಗಾಗಿ ನಗರದ ಮರಾಠಿಕೊಪ್ಪ ಸೇರಿದಂತೆ ಹಲವಡೆ ನೀತಿನ ತುಟಾಗ್ರತೆ ಉಂಟಾಗಿದೆ. ಈ ತುಟಾಗ್ರತೆಯನ್ನು ಜೀವ ಜಲ ಕಾರ್ಯಪಡೆ ನೀಗಿಸುತ್ತಿದೆ. ಬೆಳಗಿನಿಂದ ಸಂಜೆಯ ತನಕ ನೀರು ಬೇಕಾದವರಿಗೆ ಒಂದೇ ಒಂದು ರೂಪಾಯಿ ಕೂಡ ಪಡೆಯದೇ ನೀಡುತ್ತಿದೆ. ಶಿರಸಿ ನಗರ ಹಾಗೂ ಸುತ್ತಲಿನ 5 ಕಿಮಿ ವ್ಯಾಪ್ತಿಯಲ್ಲಿ ತನ್ನ ಸೇವಾ ಕೈಂಕರ್ಯ ನಡೆಸುತ್ತಿದೆ. ನಗರದ ಮರಾಠಿಕೊಪ್ಪ ಅಂಜನಾದ್ರಿ ದೇವಸ್ಥಾನದ ಬಳಿ ತೆಗೆಯಲಾದ ಬೋರ್‌ವೆಲ್‌ನಲ್ಲಿ ಗುಣಮಟ್ಟದ ನೀರಿದ್ದು, ಅದನ್ನು ಅಗತ್ಯ ಉಳ್ಳವರಿಗೆ
ನೀಡುತ್ತಿದೆ. ಜಲ ಸಂರಕ್ಷಣೆ ಜೊತೆಗೆ ಕಾರ್ಯಪಡೆ ಜಲ ನೀಡಿ ದಾಹ ಕಡಿಮೆ ಮಾಡುತ್ತಲಿದೆ.

ಭೂಮಿಯ ಒಡಲಿನ ದಾಹಕ್ಕೆ ಕೆರೆ ಮದ್ದಾದರೆ, ಜನರ ದಾಹಕ್ಕೆ ಕಾರ್ಯಪಡೆಯ ಟ್ಯಾಂಕರ್‌ ಮೂಲಕ ಉಚಿತವಾಗಿ ಸ್ಪಂದಿಸುತ್ತಿದೆ. ಕಾರ್ಯಪಡೆಯ ಸಮಾಜಮುಖಿ ನಡಿಗೆ ಹಲವರ ಶ್ಲಾಘನೆಗೆ ಕಾರಣವಾಗಿದೆ.

Advertisement

ಜೀವಜಲ ಕಾರ್ಯಪಡೆ ಟ್ಯಾಂಕರ್‌ ನೀರು ನಮ್ಮ ಬೇಸಗೆಯ ಜಲ ಸಂಕಷ್ಟ ನಿವಾರಿಸುತ್ತಿದೆ. ನೆಂಟರಿಷ್ಟರು ಬಂದಾಗ ಮರ್ಯಾದೆ ಉಳಿಸಿದೆ.
*ಗಿರಿಜಾ, ಮರಾಠಿಕೊಪ್ಪದ ಮಹಿಳೆ

ಐದು ಕಿಮಿ ವ್ಯಾಪ್ತಿಯಲ್ಲಿ ಯಾರಿಗೇ ಕುಡಿಯುವ ನೀರಿನ ಸಮಸ್ಯೆ ಆದರೂ ನೆರವಾಗಬೇಕು ಎಂಬ ಆಶಯದಲ್ಲಿ ಕೆಲಸ ಮಾಡಲಾಗುತ್ತಿದೆ. ಜನರ ಬಾಯಾರಿಕೆ ನೀಗಿಸುವ ಖುಷಿಗಿಂತ ದೊಡ್ಡದೇನಿಲ್ಲ.
ಶ್ರೀನಿವಾಸ ಹೆಬ್ಬಾರ್‌, ಅಧ್ಯಕ್ಷರು ಜೀವ ಜಲ ಕಾರ್ಯಪಡೆ

*ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next