Advertisement

ಶಿರಸಿ: ಸಾಗರ ಮಾಲಾ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

02:19 PM Oct 08, 2021 | Team Udayavani |

ಶಿರಸಿ: ಕೇಂದ್ರ ಸರಕಾರದ ಸಾಗರ ಮಾಲಾ ಯೋಜನೆಯಲ್ಲಿ 375 ಕೋಟಿ ರೂಪಾಯಿ‌ ಮೊತ್ತದಲ್ಲಿ ನಿರ್ಮಾಣ ಆಗಬೇಕಿದ್ದ  ಕುಮಟಾ ಶಿರಸಿ ರಸ್ತೆ ಅಭಿವೃದ್ದಿ ಗೆ ನಕಲಿ ಪರಿಸರವಾದಿಗಳ  ಕಾಟ ನಿಲ್ಲಬೇಕು, ಗುತ್ತಿಗೆದಾರ ಕಂಪನಿಗಳು ಶೀಘ್ರ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿ ಹೆಗಡೆಕಟ್ಟ ಕತ್ರಿ ಬಳಿ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಶಿರಸಿ ಕುಮಟಾ ರಸ್ತೆ ಅಗಲೀಕರಣದಿಂದ ಅರಣ್ಯ ನಾಶವಾಗುತ್ತದೆ ಎಂದು ಕೆಲವರು ನ್ಯಾಯಾಲಯದಲ್ಲಿ ಮೂಕದ್ದಮೆ ಹೂಡಿದ್ದರು‌ . ಆದರೆ ಆ ಪರಿಸರ ವಾದಿಗಳಿಗೆ ಇಲ್ಲಿಯ ವಾಸ್ತವ ತಿಳಿದಿಲ್ಲ. ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತೀರಸ್ಕರಿಸಿದೆ. ಆದರೂ ನಕಲಿ ಪರಿಸರವಾದಿಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಯುಪಟೊರಿಯಂ ಗಿಡ ಕೂಡ ಮರಗಳ ಪಟ್ಟಿಯಲ್ಲಿ ಸೇರಿಸಿ 50 ಸಾವಿರ ಮರ ನಾಶ ಆಗುತ್ತಿದೆ ಎಂದಿದ್ದಾರೆ.  ಅಂಥ ನಕಲಿ‌ ಪರಿಸರ ವಾದಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಸಮಗ್ರ ಅಭಿವೃದ್ದಿ ವೇದಿಕೆ ಅಧ್ಯಕ್ಷ ಪರಮಾನಂದ ಹೆಗಡೆ, ರಸ್ತೆ ನಿರ್ಮಾಣದ ದ ಹೊಣೆ ಹೊತ್ತ ಗುತ್ತಿಗೆ ಕಂಪನಿಗಳು ರಸ್ತೆ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ.  ಸದ್ಯ ಶಿರಸಿ ಕುಮಟಾ ರಸ್ತೆ ಯಲ್ಲಿ ಸಂಚರಿಸುವುದೇ ವಾಹನ ಸವಾರರಿಗೆ ದೊಡ್ಡ ಸವಾಲಿಗೆ ಪರಿಣಮಿಸಿದೆ. ರಸ್ತೆ ಕಾಮಗಾರಿ ಆರಂಭ ವಾಗುವವರೆಗೂ ನಮ್ಮ ಹೋರಾಟ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ ಶಿರಸಿ ಕುಮಟಾ ರಸ್ತೆ ಅಗಲೀಕರಣ ವಿಚಾರದಲ್ಲಿ ಎಲ್ಲರೂ ಅವರವರ ಕರ್ತವ್ಯ ವನ್ನು ಪ್ರಾಮಾಣಿಕವಾಗಿ ನಿಭಾಯಿಸಿದರೆ ಕಾಮಗಾರಿ ತಕ್ಷಣ ಪ್ರಾರಂಭವಾಗುತ್ತದೆ. ಆದರೆ ಅನಗತ್ಯ ವಿಳಂಬ ಆಗುತ್ತಿದೆ ಎಂದರು.

ಇದನ್ನೂ ಓದಿ:ಗಟ್ಟಿ ನಾಯಕತ್ವಕ್ಕೆ ಮೋದಿ ಸಾಕ್ಷಿ: ಜಗದೀಶ ಶೆಟ್ಟರ

Advertisement

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ ರಸ್ತೆ ತಡೆಗೆ ಶಿರಸಿಯ ಸಾಕಷ್ಟು ಸಂಘಟನೆಗಳು ಭಾಗವಹಿಸಿದೆ. ಪರಿಸರ ವಾದಿಗಳಿಂದ ಸಾಕಷ್ಟು ತೊಂದರೆಗಳಾಗುತ್ತದೆ. ಈ ಪರಿಸರ ವಾದಿಗಳು ಬೆಂಗಳೂರಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ . ಸಾಗರಮಾಲಾ ಯೋಜನೆ ಅಡಿಯಲ್ಲಿ ಈ ರಸ್ತೆ ಶೀಘ್ರ ವಾಗಿ ಆಗಬೇಕಿದೆ. ಗುತ್ತಿಗೆದಾರರು ಶೀಘ್ರ ವಾಗಿ ಕಾಮಗಾರಿ ನಡೆಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಪರಿಸರವಾದಿಗಳಿಂದ ಅನಗತ್ಯ ವಿಳಂಬ ಆಗಿದೆ ಎಂದರು.

ಮಾಜಿ ಶಾಸಕ ವಿವೇಕಾನಂದ ವೈದ್ಯ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ ಪ್ರಮುಖರಾದ ಜಿ ಎನ್ ಭಟ್ ,   ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ,ಸದಸ್ಯ ಪ್ರದೀಪ ಶೆಟ್ಟಿ, ಎಂ.ಎನ್.ಹೆಗಡೆ,  ಎಸ್.ಕೆ.ಭಾಗವತ, ಎಂ.ಎಂ.ಭಟ ಕಾರೆಕೊಪ್ಪ, ದೀಪಕ ದೊಡ್ಡೂರು, ರಾಜೇಶ ಶೆಟ್ಟಿ, ಅನಿಲ ನಾಯಕ, ರಘು ಕಾನಡೆ, ನಂದಕಿಶೋರ್ ಜೋಗಳೇಕರ್ , ಉಮಾಕಾಂತ ಹರೀಕಾಂತ  ಸೇರಿದಂತೆ ಐವತ್ತಕ್ಕೂ ಅಧಿಕ ಸಂಘಟನೆಗಳ‌ ಐನೂರಕ್ಕೂ ಅಧಿಕ ಜನರು ಇದ್ದರು.

ಆಯುಕ್ತೆ ಆಕೃತಿ ಬನ್ಸಾಲ್, ಪೊಲೀಸ್ ಉಪಾಧೀಕ್ಷಕ ರವಿ ನಾಯ್ಕ, ತಹಸೀಲ್ದಾರ ಎಂ.ಆರ್.ಕುಲಕರ್ಣಿ ಇತರರು ಇದ್ದರು.

ಬಂಡಲದಿಂದ ಶಿರಸಿ ತನಕ ಮಾರ್ಚ್ ತನಕ‌ ಮುಗಿಸುತ್ತೇನೆ ಎಂದಿದ್ದಾರೆ. ಮುಂದಿನದ್ದು ಉಳಿದ ಅಭಿವೃದ್ದಿ ಆಗುತ್ತದೆ. ಪ್ರತಿ ಹತ್ತು ದಿನಕ್ಕೆ ಸಭೆ ನಡೆಸುತ್ತಿದ್ದೇವೆ.

-ಆಕೃತಿ ಬನ್ಸಾಲ್,ಸಹಾಯಕ ಆಯುಕ್ತೆ

ಹೆಚ್ಚುವರಿ ಚಿಕಿತ್ಸೆಗೆ, ಕರಾವಳಿ‌ ಮಲೆನಾಡು ಸಂಪರ್ಕಕ್ಕೆ, ಉತ್ತರ ಕರ್ನಾಟಕದ‌ ಸಂಪರ್ಕಕ್ಕೆ ಪ್ರಮುಖ ದಾರಿ. ಇದು ಬೇಗ ಅಭಿವೃದ್ದಿ ಆಗಬೇಕು. ಅಲ್ಲಿ ತನಕದ ಬದಲಿ ಮಾರ್ಗ ಕೂಡ ವ್ಯವಸ್ಥಿತವಾಗಿರಬೇಕು.

ಶ್ರೀನಿವಾಸ ಹೆಬ್ಬಾರ್, ಗೌರವಾಧ್ಯಕ್ಷರು ಸಮಗ್ರ ಅಭಿವೃದ್ದಿ ವೇದಿಕೆ

ಪರಿಸರ ವಾದಿಗಳಲ್ಲ. ಅಭಿವೃದ್ದಿಗೆ ತೊಡಕಾಗುವವರು ವ್ಯಾದಿಗಳು. 50 ಸಾವ್ರ‌ ಮರ ನಾಶ ಎನ್ನೋರು‌ ಯುಪಟೋರಿಯಂ ಕೂಡ ಸೇರಸಿದಾರೆ.

ಪರಮಾನಂದ ಹೆಗಡೆ, ಹೋರಾಟಗಾರ

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next