Advertisement

ಶಿರಸಿ: ಲಯನ್ಸ್ ಶಾಲಾ ಮಕ್ಕಳೊಂದಿಗೆ ಕವಯತ್ರಿ ಭಾಗೀರಥಿ ಹೆಗಡೆ ಸಂವಾದ

12:00 PM Feb 05, 2022 | Team Udayavani |

ಶಿರಸಿ: ಲಯನ್ಸ್ ಶಾಲೆಯ ಮಕ್ಕಳಿಗೆ ಒಂದು ಅಪರೂಪದ ಕಾರ್ಯಕ್ರಮ ನಡೆಯಿತು. ಮಕ್ಕಳು ಓದುವ ಪಠ್ಯದ ಕವಿಗಳೊಂದಿಗೆ ಮುಖಾಮುಖಿ ಸಂವಾದ ನಡೆಸುವ ಅವಕಾಶ. ಕವನ ರಚಿಸುವ ಹಂಬಲದ ಮಕ್ಕಳ ಗೊಂದಲಗಳಿಗೆ ಉತ್ತರ ಸಿಕ್ಕಿದ ಸಂಭ್ರಮ. ತಮ್ಮ ಪಠ್ಯದಲ್ಲಿನ ಕವಿಗಳನ್ನು ಕಂಡು ವಿದ್ಯಾರ್ಥಿಗಳು ಪುಳಕಿತರಾದರು.

Advertisement

ಶಿರಸಿ ಲಯನ್ಸ್  ಶಾಲೆಯಲ್ಲಿ ಹಿರಿಯ ಕವಯಿತ್ರಿ ಭಾಗೀರಥಿ ಹೆಗಡೆ ಅವರು, ಮಕ್ಕಳೊಡನೆ ಸಂವಾದ ನಡೆಸಿದರು. ಇವರದೇ ರಚನೆಯ ಕನ್ನಡಮ್ಮ ಕವನವನ್ನು ವಿದ್ಯಾರ್ಥಿಗಳು ರಾಗಬದ್ದವಾಗಿ ಹಾಡಿದರು.

ಕನ್ನಡಮ್ಮ ಕವನ ರಚನೆಯ ಹಿನ್ನೆಲೆಯನ್ನು ಮಕ್ಕಳಿಗೆ ತಿಳಿಸುತ್ತಾ ತಮ್ಮ ಕವನ ರಚನೆಯ ಸ್ಪೂರ್ತಿಯಾದ ತಾಯಿ ಗಣಪಿ ಹೆಗಡೆ ಅವರನ್ನು ಭಾಗೀರಥಿ ಹೆಗಡೆ  ಸ್ಮರಿಸಿದರು. ನಿರಂತರ ಓದು, ಪರಿಶ್ರಮ, ಆಸಕ್ತಿ, ನಾಡಿನ ಕುರಿತು ಪ್ರೀತಿ, ದೇಶಪ್ರೇಮದ ಕುರಿತು iಕ್ಕಳೊಂದಿಗೆ ಮಕ್ಕಳಾಗಿ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ತುಂಬಾ ಆಸಕ್ತಿಯಿಂದ ಪಾಲ್ಗೊಂಡು ಪ್ರಶ್ನೆಗಳನ್ನು ಕೇಳಿದರು. ಮಕ್ಕಳ ಕುರಿತಾಗಿ ತಾವೇ ರಚಿಸಿದ ’ಗುಂಡ’ಕವನ ವಾಚಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ, ಕನ್ನಡ ಶಿಕ್ಷಕರಾದ ಸೀತಾ ಭಟ್, ಪದ್ಮಲತಾ ಶೆಟ್ಟಿ ಈ ಸಂದರ್ಭದಲ್ಲಿ ಮಕ್ಕಳೊಡನೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next