Advertisement
ಹಳಿಯ ಮೇಲಿನ ಕಲ್ಲು ಮಣ್ಣುಗಳ ತೆರವು ಶನಿವಾರ ಪೂರ್ತಿ ಗೊಂಡಿದ್ದು ಗೂಡ್ಸ್ ರೈಲನ್ನು ಪ್ರಯೋಗಾರ್ಥವಾಗಿ ಓಡಿಸಿ ಮಾರ್ಗ ಸಂಚಾರಕ್ಕೆ ಯೋಗ್ಯವಾಗಿರುವುದನ್ನು ಖಾತರಿಪಡಿಸಿಕೊಳ್ಳಲಾಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಕಲ್ಲು ಮಣ್ಣು ತೆರವು ಕಾರ್ಯಾಚರಣೆಯನ್ನು ನೂರಾರು ಕಾರ್ಮಿಕರು ಮತ್ತು ಯಂತ್ರಗಳನ್ನುಬಳಸಿ ನಡೆಸಲಾಗಿತ್ತು. ಮೈಸೂರು ರೈಲ್ವೇ ವಿಭಾಗದ ವಿಭಾಗೀಯ ಪ್ರಬಂಧಕಿ ಅಪರ್ಣಾ ಗರ್ಗ್ ಸ್ಥಳಕ್ಕೆ ನಿರಂತರ ಭೇಟಿ ನೀಡಿ ಕಾರ್ಯಾ ಚರಣೆಯ ಪ್ರಗತಿ ಪರಿಶೀಲಿಸಿದ್ದರು. ಇದಲ್ಲದೆ ನೈಋತ್ಯ ರೈಲ್ವೇಯ ಮಹಾಪ್ರಬಂಧಕ ಎ.ಕೆ. ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಇದೇವೇಳೆ ಮಂಗಳೂರು ಜಂಕ್ಷನ್- ಸುರತ್ಕಲ್ ರೈಲು ಮಾರ್ಗದ ಕುಲಶೇಖರದಲ್ಲಿ ಭೂಕುಸಿತದಿಂದ ಹಳಿ ಮೇಲೆ ಬಿದ್ದಿರುವ ಮಣ್ಣು ತೆರವು ಮತ್ತು ತಡೆಗೋಡೆ ನಿರ್ಮಾಣ ರವಿವಾರವೂ ನಡೆದಿದೆ. ಕಾಮಗಾರಿಯಿಂದಾಗಿ ಈ ಮಾರ್ಗದಲ್ಲಿ ಸೋಮವಾರವೂ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ಆದರೆ ಸೋಮವಾರ ಸಂಜೆಯ ವೇಳೆಗೆ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸೋಮವಾರ ಎರಡು ರೈಲುಗಳ ಸಂಚಾರವನ್ನು ಕೊಂಕಣ ರೈಲು ಮಾರ್ಗದಲ್ಲಿ ಪ್ರಕಟಿಸಲಾಗಿದೆ.
Related Articles
Advertisement