Advertisement

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

05:42 PM Jan 28, 2022 | Team Udayavani |

ಮಂಗಳೂರು: ಯಾವುದೇ ಅಭಿವೃದ್ಧಿ ಕಾರ್ಯಗಳ ಸಂದರ್ಭದಲ್ಲಿ ಹಾಲಿ ವ್ಯವಸ್ಥೆಗಳಿಗೆ ಒಂದಷ್ಟು ಸಮಸ್ಯೆ, ಅಡಚಣೆಗಳು ಸಹಜ.  “ಎವಿರಿ ಪೆಯಿನ್‌, ದೇರಿಸ್‌ ಎ ಗೆಯಿನ್‌’ ಎಂಬ ಇಂಗ್ಲಿಷ್‌ ನಾಣ್ಣುಡಿಯಂತೆ ಶಿರಾಡಿಘಾಟಿಯಲ್ಲಿ ಹಲವು ದಶಕಗಳಿಂದ ಇರುವ ಸಂಚಾರ ಸಮಸ್ಯೆಗೆ ಚತುಷ್ಪಥ ರಸ್ತೆ ಪರಿಹಾರ ಕಲ್ಪಿಸಬಹುದು. ಆದರೆ, ಈ ಸಂದರ್ಭದಲ್ಲಿ ಆಗುವ ಅಡಚಣೆಗಳಿಗೆ ರಾಷ್ಟ್ರೀಯ ಹೆದ್ದಾರಿ, ತಂತ್ರಜ್ಞರು, ಆಡಳಿತ ಒಟ್ಟು ಸೇರಿ ವ್ಯವಸ್ಥೆ  ಪರ್ಯಾಯ ಪರಿಹಾರ ಗಳನ್ನು ರೂಪಿಸುವುದರಿಂದ ಸಾರ್ವ ಜನಿಕರಿಗೆ, ಸಂಚಾರ ವ್ಯವ ಸ್ಥೆಗೆ ಆಗುವ ಸಮಸ್ಯೆ ಯನ್ನು ಕನಿಷ್ಠಗೊಳಿಸಬಹುದಾಗಿದೆ.

Advertisement

ಪರ್ಯಾಯ ಮಾರ್ಗಗಳು ಮತ್ತು ವಸ್ತುಸ್ಥಿತಿ :

ಚಾರ್ಮಾಡಿ ಘಾಟಿ, ಸಂಪಾಜೆ, ಘಾಟಿ, ಮಾಳ ಘಾಟಿ (ಕುದುರೆಮುಖ), ಬಿಸಿಲೆ ಘಾಟಿ, ಹುಲಿ ಕಲ್‌ ಅಥವಾ ಬಾಳೇಬರೆ ಘಾಟಿ, ಅಗುಂಬೆ ಘಾಟಿ, ದೇವಿಮನೆ (ಶಿರಸಿ), ಅರಬೈಲ್‌ ಘಾಟಿ (ಅಂಕೋಲಾ) ಶಿರಾಡಿ ಘಾಟಿಗೆ ಪರ್ಯಾಯ ಸಾಧ್ಯತೆಗಳಾಗಿ ಇರುವಂತವು. ಸಾಮಾನ್ಯವಾಗಿ ಶಿರಾಡಿ ಘಾಟಿಯಲ್ಲಿ  ದುರಸ್ತಿ ಅಥವಾ ಭೂಕುಸಿತ ಸಂಭವಿಸಿದಾಗ ಇದರಲ್ಲಿ  ಚಾರ್ಮಾಡಿ , ಸಂಪಾಜೆ, ಮಾಳ ಘಾಟಿ, ಬಾಳೇಬರೆ ಘಾಟಿ, ಆಗುಂಬೆ ಘಾಟಿಯನ್ನು ಪರ್ಯಾಯ ಮಾರ್ಗಗಳಾಗಿ ಹೆಚ್ಚು  ಸೂಚಿಸಲಾಗುತ್ತಿದೆ. ಆದರೆ ಇದರಲ್ಲಿ ಚಾರ್ಮಾಡಿ ಘಾಟಿ ಹಾಗೂ ಸಂಪಾಜೆ ಘಾಟಿ ರಸ್ತೆಗಳು ಇಕ್ಕಟ್ಟು ಹಾಗೂ ಭೂಕುಸಿತ ಸಮಸ್ಯೆಗಳಿಂದ ಭಾರೀ ವಾಹನ ಗಳ ಸಂಚಾರಕ್ಕೆ ಪೂರಕವಾಗಿಲ್ಲ.

ಆಗುಂಬೆ ಘಾಟಿಯು ಮಿನಿಬಸ್‌ಗಳು ಹಾಗೂ ಲಘುವಾಹನಗಳಿಗೆ ಮಾತ್ರ ಸಂಚಾರ ಅವಕಾಶ ಗಳನ್ನು ಹೊಂದಿದೆ. ಉಳಿದಂತೆ ಬಾಳೇಬರೆ ಘಾಟಿ, ಅರಬೈಲ್‌ ಘಾಟಿ ಮೂಲಕ ಭಾರೀ ವಾಹನಗಳು ಸಂಚರಿಸಬಹುದಾ ಗಿದೆ. ಆದರೆ ಇದು ಕೇವಲ ಸೀಮಿತ ಅವಧಿಯ ವರೆಗೆ ಮಾತ್ರ ಪರ್ಯಾಯ ವಾಗಬಲ್ಲದೇ ಹೊರತು ರಸ್ತೆಯ ಸ್ಥಿತಿ, ವಾಹನ ದಟ್ಟಣೆ ಹಾಗೂ ಆರ್ಥಿಕತೆಯ ದೃಷ್ಠಿ ಯಿಂದ  ದೀರ್ಘ‌ ಅವಧಿಗೆ ಪರಿಹಾರವಾಗಲಾರದು.

ಪರ್ಯಾಯ ಸಾಧ್ಯತೆಗಳು :

Advertisement

ಶಿರಾಡಿಘಾಟಿ ರಸ್ತೆಯಲ್ಲಿ ಪ್ರಸ್ತಾವಿತ ಚತುಷ್ಪಥ ಕಾಮಗಾರಿ ವೇಳೆ ಸಮಸ್ಯೆಗಳನ್ನು ಕನಿಷ್ಠಗೊಳಿಸಿ ಕಾಮಗಾರಿ ನಡೆಸಲು ಸಾಧ್ಯವೇ ಎಂಬುದನ್ನು ಪರಿ ಶೀಲಿಸ ಬೇಕಾಗಿದೆ ಎಂಬ ಅಭಿಪ್ರಾಯಗಳು ಸಂಚಾರ ಕ್ಷೇತ್ರ, ವಾಣಿಜ್ಯ ಮತ್ತು  ಉದ್ದಿಮೆಗಳ ವಲಯಗಳಿಂದ  ವ್ಯಕ್ತವಾಗಿದೆ.

ಶಿರಾಡಿ ಘಾಟಿ ರಸ್ತೆಯಲ್ಲಿ  2015 ರಿಂದ ಈ ವರೆಗೆ ಕಾಮಗಾರಿ ಹಾಗೂ ಭೂಕುಸಿತಕ್ಕೆ ಸಂಬಂಧಿಸಿ ದಂತೆ 5ಕ್ಕೂ ಹೆಚ್ಚು ಬಾರಿ ಸಂಚಾರ ಸ್ಥಗಿತಗೊಂಡಿದೆ. ಇದರಲ್ಲಿ ಒಂದೆರಡು ಬಾರಿ ಹೊರತುಪಡಿಸಿದರೆ ಉಳಿದಂತೆ ನಿಗದಿತ ಅವಧಿಯಲ್ಲಿ  ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿಲ್ಲ. ಈ ಬಾರಿ ಪ್ರಸ್ತಾವನೆ ಯಲ್ಲಿರುವ ಆರು ತಿಂಗಳ ಅವಧಿಯೊಳಗೆ ಕಾಮ ಗಾರಿ ಮುಕ್ತಾಯಗೊಳ್ಳುವ ಬಗ್ಗೆ ಸಂದೇಹ ಸಾರ್ವ ಜನಿಕ ವಲಯದಿಂದ ಕೇಳಿಬಂದಿದೆ.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ  ಒಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಿ ಕಾಮಗಾರಿ ನಡೆಸುವುದು ಅಥವಾ ಆರು ತಿಂಗಳ ಬದಲಿಗೆ ಕಾಮಗಾರಿಗೆ ವೇಗ ನೀಡಿ ಇದನ್ನು ಕನಿಷ್ಠ ಅವಧಿ ಯಲ್ಲಿ  ಪೂರ್ಣಗೊಳಿಸುವ ಸಾಧ್ಯತೆಗಳನ್ನು ಪರಿ ಶೀಲಿಸ ಬೇಕು ಎನ್ನುವ ಸಲಹೆಗಳು ವ್ಯಕ್ತವಾಗಿವೆ. ಹೊಸ ಎರಡು ಲೇನ್‌ನ ರಸ್ತೆ ನಿರ್ಮಿಸುವಾಗ ಹಾಲಿ ಇರುವ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡ ಬೇಕು. ಹೊಸ ರಸ್ತೆ ಕಾಮಗಾರಿ ಪೂರ್ಣಗೊಂಡು ಅದರಲ್ಲಿ  ಸಂಚಾರಕ್ಕೆ ಅವಕಾಶ ನೀಡಿದ ಬಳಿಕ ಹಾಲಿ ಇರುವ ರಸ್ತೆಯಲ್ಲಿ  ಕಾಮಗಾರಿ ಕೈಗೆತ್ತಿಕೊಳ್ಳಬಹುದಾ ಗಿದೆ. ಈ ಕ್ರಮ ಸಾಧ್ಯವಾದರೆ ಶಿರಾಡಿಘಾಟಿಯನ್ನು ಸಂಚಾರ ವ್ಯವಸ್ಥೆಗೆ ಪೂರ್ಣವಾಗಿ ಮುಚ್ಚುವ ಅವ ಶ್ಯಕತೆ ಇಲ್ಲ ಎಂಬುದು ತಂತ್ರಜ್ಞರೋರ್ವರ ಸಲಹೆ.

ಶಿರಾಡಿ ಘಾಟಿಯನ್ನು  ಸಂಪೂರ್ಣವಾಗಿ ಮುಚ್ಚುವುದರಿಂದ ಆರು ತಿಂಗಳು ಕರಾವಳಿಯ ವಾಣಿಜ್ಯೋದ್ಯಮ, ಆರ್ಥಿಕತೆ, ಸಂಚಾರ, ಜೀವನಾವಶ್ ವಸ್ತುಗಳ ಸಾಗಾಟಕ್ಕೆ  ಧಕ್ಕೆಯಾಗಲಿದೆ. ಆದುದರಿಂದ ಕಾಮಗಾರಿ ಸಮಯದಲ್ಲಿ ಒಂದು ಲೇನ್‌ನಲ್ಲಿ  ಸಂಚಾರಕ್ಕೆ ಅವಕಾಶ ನೀಡಬೇಕು. ಇದರಿಂದ ಕಾಮ ಗಾರಿಯೂ ನಡೆಯತ್ತದೆ. ಕರಾವಳಿಗೂ ಹೆಚ್ಚಿನ ಸಮಸ್ಯೆ ಆಗಲಾರದು ಎಂಬುದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ  ಶಶಿ ಧರ ಪೈ ಮಾರೂರು ಅವರು ಸಲಹೆ ಮಾಡಿದ್ದಾರೆ.

ಸರಾಸರಿ 13 ಸಾವಿರ ವಾಹನಗಳ ಸಂಚಾರ :

ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಕಾರ ಶಿರಾಡಿ ಘಾಟಿ ಮೂಲಕ ಕರಾವಳಿಗೆ ದಿನವೊಂದಕ್ಕೆ ಸುಮಾರು 13000 ವಾಹನಗಳ ಆಗಮನ- ನಿರ್ಗಮನ ಇರುತ್ತದೆ. ಈ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿದರೆ ಈ ವಾಹನಗಳ ದಟ್ಟಣೆ ಪರ್ಯಾಯ ರಸ್ತೆಗಳಿಗೆ ವರ್ಗಾವಣೆ ಯಾಗುತ್ತದೆ. ಪ್ರಸ್ತುತ ಪ್ರಮುಖವಾಗಿ ಸೂಚಿಸುವ ಪರ್ಯಾಯ ರಸ್ತೆಗಳಾದ ಚಾರ್ಮಾಡಿ, ಸಂಪಾಜೆ, ಬಾಳೇಬರಿ ಘಾಟಿಗಳಲ್ಲಿ  ವಾಹನ ದಟ್ಟಣೆ  ಸಮಸ್ಯೆ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ:
ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?-  https://bit.ly/354VPOy
ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ –https://bit.ly/3qTX4Zp
ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ-https://bit.ly/3fUDfed
ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ-https://bit.ly/34bJ5oO

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next