ಪಣಜಿ: ಮುಂಬೈನಿಂದ ಗೋವಾಕ್ಕೆ ಸುಮಾರು 2000 ಪ್ರವಾಸಿಗರನ್ನು ಕರೆತಂದಿದ್ದ ಕಾರ್ಡೆಲಿಯಾ ಕ್ರೂಜ್ ಹಡಗಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
Advertisement
ಈ ಹಿನ್ನೆಲೆಯಲ್ಲಿ ಈ ಹಡಗು ಬಂದರಿಗೆ ಪ್ರವೇಶಿಸುವುದನ್ನು ನಿರಾಕರಿಸಿ ಸಮುದ್ರದಲ್ಲಿಯೇ ಇರಿಸಲಾಗಿದೆ.
ಹಡಗಿನಲ್ಲಿದ್ದ ಎಲ್ಲ ಪ್ರವಾಸಿಗರ ಆರ್ ಟಿಪಿಸಿಆರ್ ತಪಾಸಣೆ ನಡೆಸಿ ಎಲ್ಲ ಪ್ರವಾಸಿಗರ ವರದಿ ಬಂದ ನಂತರವೇ ಪ್ರವೇಶ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.