Advertisement
ನವಮಂಗಳೂರು ಬಂದರಿನಿಂದ 20 ಮೈಲು ದೂರ ಸಮುದ್ರದಲ್ಲಿ ಮಾ. 29ರಂದು ಮಧ್ಯರಾತ್ರಿ ಸಿಂಗಾಪುರಕ್ಕೆ ಸೇರಿದ ಎಂ.ವಿ. ಚೀನಯ ನರೀ ಎಂಬ ಹಡಗು ಮೀನುಗಾರಿಕೆ ನಿರತ “ಜಲಪದ್ಮಾವತಿ’ ದೋಣಿಗೆ ಢಿಕ್ಕಿ ಹೊಡೆದಿದೆ. ಹಡಗು ಸಿಂಗಾಪುರದಿಂದ ಕೊಲಂಬೋಕ್ಕೆ ಹೊರಟಿತ್ತು. ಘಟನೆ ಬಗ್ಗೆ ಕರಾವಳಿ ಕಾವಲು ಪಡೆಯ ಮಂಗಳೂರು ಪೊಲೀಸರು ತನಿಖೆ ನಡೆಸಿದ್ದಾರೆ.
ಈ ರೀತಿ ಸಮುದ್ರದಲ್ಲಿ ಅನಾಹುತಗಳು ಸಂಭವಿಸದಂತೆ ಎಲ್ಲ ಮೀನು ಗಾರಿಕೆ ದೋಣಿಗಳು ಆಟೋಮೆಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್ ಅಳವಡಿಸಬೇಕು, ಎರಡೂ ಬದಿಗಳಲ್ಲಿ ನೇವಿಗೇಶನ್ ದೀಪ ಅಳವಡಿಸಬೇಕು. ಹಡಗುಗಳು ಓಡಾಡುವ ದಾರಿಯಲ್ಲಿ ಬೋಟುಗಳು ಅಡ್ಡ ಸಾಗದಂತೆ ಎಚ್ಚರ
ವಹಿಸಬೇಕು, ಎಲ್ಲ ಬೋಟುಗಳಲ್ಲಿ ಎಐಎಸ್ ಟ್ರಾನ್ಸ್‌ಪಾಂಡರ್ ಅಳವಡಿಸಿಕೊ ಳ್ಳಬೇಕು. ತುರ್ತು ಸಂದರ್ಭದಲ್ಲಿ ಸಿಎಸ್‌ಪಿ ಕಂಟ್ರೋಲ್ ರೂಂ 1093ಕ್ಕೆ ಕರೆ ಮಾಡಬಹುದಾಗಿದೆ ಎಂದು ಸಿಎಸ್‌ಪಿಯ ಎಸ್‌ಪಿ ತಿಳಿಸಿದ್ದಾರೆ.