ಬೆಳ್ತಂಗಡಿ : ಕಪುಚಿನ್‌ಕೃಷಿಕ್ ಸೇವಾ ಕೇಂದ್ರ ದಯಾಳ್‌ಬಾಗ್ ಗ್ರಾಮಾಭಿವೃದ್ಧಿ ಯೋಜನೆ ವಿಮುಕ್ತಿ ಲಾೖಲ ಹಾಗೂ ಚೈಲ್ಡ್‌ಫಂಡ್ ಇಂಡಿಯಾ ಇವುಗಳ ಆಶ್ರಯದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ವಿಷಯಗಳ ಮೇಲೆ ಹೊಳೆಯುವ ನಕ್ಷತ್ರಗಳು ಎಂಬ ಬೀದಿ ನಾಟಕವನ್ನು ಆಯೋಜಿಸಲಾಯಿತು.
ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ| ವಿನೋದ್ ಮಸ್ಕರೇನ್ಹಸ್, ಸಹ ನಿರ್ದೇಶಕ ರೋಹನ್ ಲೋಬೋ, ದಯಾ ವಿಶೇಷ ಪಾಲನ ಕೇಂದ್ರದ ಸಹ ನಿರ್ದೇಶಕ ಎಡ್ವಿನ್ ಡಿ’ಸೋಜಾ, ಪೊಲೀಸ್ ಇಲಾಖೆಯ ಶ್ವೇತಾ ಭಾಗವಹಿಸಿದ್ದರು.
ಮಕ್ಕಳು ಎದುರಿಸುತ್ತಿರುವ ಸವಾಲುಗಳ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕ ಮತ್ತು ದುರುಪಯೋಗದಿಂದ ರಕ್ಷಿಸಲು ಇರುವ ಕಾನೂನುಗಳ ಕುರಿತು ಬೀದಿ ನಾಟಕ ಹಮ್ಮಿಕೊಳ್ಳಲಾಯಿತು.
2012 ಜೆಜೆ ಕಾಯಿದೆ, 2000 ಬಾಲ ಕಾರ್ಮಿಕತೆ ನಿಷೇಧ ಕಾಯಿದೆ 1986, ಚೈಲ್ಡ್‌ಲೈನ್1098, ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣ ಘಟಕ ಇದು ಮಕ್ಕಳ ರಕ್ಷಣೆಗಾಗಿ ಕೆಲಸ ಮಾಡುತ್ತದೆ ಎಂದು ಬೀದಿ ನಾಟಕದ ಮೂಲಕ ಪ್ರದರ್ಶಿಸಲಾಯಿತು.
ಬೀದಿ ನಾಟಕ ಉಜಿರೆ, ಬೆಳ್ತಂಗಡಿ, ಸಂತಕಟ್ಟೆ, ವಾಣಿ ಶಾಲೆ, ಗುರುವಾಯನಕೆರೆಯಲ್ಲಿ ಪ್ರದರ್ಶಿಸಲಾಯಿತು. ಮಿಲಾಗ್ರಿಸ್ ಕಾಲೇಜು ಉಡುಪಿ ಕಲ್ಯಾಣಪುರ ಇದರ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಬೀದಿ ನಾಟಕವನ್ನು ಪ್ರದರ್ಶಿಸಿದರು. ಮಿಲಾಗ್ರಿಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ವಿಘ್ನೇಶ್ ಹೊಳ್ಳ ನಾಟಕ ರಚಿಸಿ ಸಂಯೋಜಿಸಿದರು. ವಿಮುಕ್ತಿ ಸಿಬಂದಿ ಉಪಸ್ಥಿತರಿದ್ದರು. ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.