Advertisement

ಮುಪ್ಪು ಮರಣದ ಮಹಾದ್ವಾರ: ಶಿಮುಶ

10:16 PM Jan 03, 2022 | Team Udayavani |

ಚಿತ್ರದುರ್ಗ: ಮುಪ್ಪು ಮರಣದ ಮಹಾದ್ವಾರ. ಅದು ಅನಿವಾರ್ಯ ಹಾಗೂ ನಿಸರ್ಗದ ನಿಯಮವೂಕೂಡ. ಹಾಗಾಗಿ ಸಮಯವನ್ನು ಬಳಸಿಕೊಂಡು ಸಾಧನೆ ಮಾಡುತ್ತಾ ಸಾಗಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಜಮುರಾ ರಾಷ್ಟ್ರೀಯ ನಾಟಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನನ ವ್ಯತ್ಯಾಸ ಮಾಡಬಹುದು, ಆದರೆ ಮರಣ ವ್ಯತ್ಯಾಸ ಮಾಡುವುದಿಲ್ಲ. ನಶ್ವರವಾದ ಈ ಶರೀರವನ್ನು ನಾವೆಲ್ಲ ಪಡೆದುಕೊಂಡಿವೆ . ಮಾನವ ಬದುಕಿನಲ್ಲಿ ಸಾಧನೆ ಶಾಶ್ವತವಾದು.

ವಿಚಾರಗಳಲ್ಲಿ ಅಪ್ರತಿಮವಾದ ಶಕ್ತಿ ಇದೆ. ವಿಚಾರಗಳು ಜಗತ್ತನ್ನು ಆಳುತ್ತವೆ ಎಂದರು. ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ನಾಟಕ ಸಮಾಜದ ಅಂಕುಡೊಂಕುಗಳನ್ನು ತಿ¨ುªವ ‌ ಕೆಲಸ ಮಾಡುತ್ತದೆ. ಬದುಕನ್ನು ಅರ್ಥ ಮಾಡಿಕೊಂಡು ಸಾಗುತ್ತದೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಮುರುಘಾ ಶರಣರು ಎಲ್ಲ ರಂಗದಲ್ಲೂ ಕೆಲಸ ಮಾvುತ್ತಿ¨ ‌ ಾªರೆ ಎಂದು ಬಣ್ಣಿಸಿದರು.

ರಂಗ ಸಂಘಟಕ ಚಿಕ್ಕಮ ಗಳೂರು ಗುಂಡಣ್ಣ ಮಾತನಾಡಿ, ರಂಗಭೂಮಿಜಾತಿ ಮತಗಳಗೋಡೆಗಳನ್ನುಕೆಡವಿಸಮಾಜವನ್ನು ಒಂದುಗೂಡಿಸುತ್ತದೆ ಎಂದರು. ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಮಾತನಾಡಿದರು. ಪಟೇಲ್‌ ಶಿವಕುಮಾರ್‌ ವೇದಿಕೆಯಲ್ಲಿದ್ದರು. ನಂತರ ಮಹಂತೇಶ್‌ ರಾಮದುರ್ಗ ರಚನೆ ಹಾಗೂ ನಿರ್ದೇಶನದ “ಸೋರುತಿಹುದು ಸಂಬಂಧ’ ನಾಟಕವನ್ನು ಜಮುರಾ ಸುತ್ತಾಟ ತಂಡದವರು ಮನೋಜ್ಞವಾಗಿ ಅಭಿನಯಿಸಿದರು .‌

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next