Advertisement
ಮೇಯರ್ ಆಕಾಂಕ್ಷಿಗಳಾದ ಸುವರ್ಣ ಶಂಕರ್ ಮೀಸಲಾತಿ ಕಳೆದುಕೊಂಡಿದ್ದಾರೆ. ಅನಿತಾರವಿಶಂಕರ್ ಭವಿಷ್ಯ ಡೋಲಾಯಮಾನವಾಗಿದೆ. 35 ವಾರ್ಡ್‌ಗಳ ಪಾಲಿಕೆಯಲ್ಲಿ 20 ಸ್ಥಾನ
ಪಡೆಯುವ ಮೂಲಕ ಬಿಜೆಪಿ ಅಧಿಕಾರಕ್ಕೇರಿತ್ತು. ಮೊದಲ ಅವ ಧಿಯಲ್ಲಿ ಎಸ್‌ಸಿ ಮಹಿಳಾ
ಮೀಸಲಾತಿಯಲ್ಲಿ ಲತಾ ಗಣೇಶ್, ಸಾಮಾನ್ಯ ಮೀಸಲಾತಿಯಲ್ಲಿ ಚನ್ನಬಸಪ್ಪ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು. ಎರಡನೇ ಅವಧಿಗೆ ಬಿಸಿಎಂ “ಬಿ’ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು, ಬಿಜೆಪಿಯ ಇಬ್ಬರು ಆಕಾಂಕ್ಷಿಗಳು ಕಣದಲ್ಲಿದ್ದರು.
ಸ್ಥಾನಕ್ಕೆ ತೀವ್ರ ಪೈಪೋಟಿ ಒಡ್ಡಿದ್ದರು. ಮೂರು ಬಾರಿ ಗೆದ್ದ ಸುವರ್ಣ ಶಂಕರ್, ಮೊದಲನೇ ಬಾರಿ ಗೆದ್ದಿರುವ ಅನಿತಾ ರವಿಶಂಕರ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಬದಲಾದ ಸನ್ನಿವೇಶದಲ್ಲಿ ಇಬ್ಬರ ಮೀಸಲಾತಿ ವಿಷಯ ಈಗ ಉಪ ವಿಭಾಗಾಧಿಕಾರಿ ಕಚೇರಿ ಮೆಟ್ಟಿಲೇರಿದೆ. ಸುವರ್ಣ ಶಂಕರ್ ಕಣದಿಂದ ಔಟ್: ಅನಿತಾ ರವಿಶಂಕರ್ ಅವರು ತೆರಿಗೆದಾರರಾಗಿದ್ದು
ಅವರು ಜಾತಿ ಪ್ರಮಾಣ ಪತ್ರಕ್ಕೆ ಅರ್ಹರಲ್ಲ ಎಂದು ಖಾಸಗಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಅದೇ ರೀತಿ ಸುವರ್ಣ ಶಂಕರ್ ಅವರು ಸಾಮಾನ್ಯ ಮೀಸಲಾತಿಯಲ್ಲಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದು ಅವರು ಕೂಡ ತೆರಿಗೆದಾರರಾಗಿದ್ದಾರೆ. ಅವರಿಗೆ ಬಿಸಿಎಂ “ಬಿ’ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ದೂರು ದಾಖಲಾಗಿತ್ತು. ಎರಡೂ ದೂರುಗಳ ವಿಚಾರಣೆ ನಡೆಸಿರುವ ಅಧಿ ಕಾರಿಗಳು ಸುವರ್ಣ ಶಂಕರ್ ಅವರ ಈಚೆಗೆ ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದ್ದಾರೆ.
Related Articles
ಈಗ ಬಿಸಿಎಂ “ಬಿ’ ಪ್ರಮಾಣ ಪತ್ರಕ್ಕೆ ಅರ್ಹರಾಗುವುದಿಲ್ಲ ಎಂದು ಮೂಲಗಳು
ಸ್ಪಷ್ಟಪಡಿಸಿವೆ. ಇನ್ನು ಅನಿತಾ ರವಿಶಂಕರ್ ಅವರು ಬಿಸಿಎಂ “ಬಿ’ ಮೀಸಲಾತಿಯಲ್ಲೇ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಅವರ ವಿರುದ್ಧದ ದೂರು ಮಾನ್ಯವಾಗಿಲ್ಲ. ಈ ಹಂತದಲ್ಲಿ ಅವರ ಮೀಸಲಾತಿ ರದ್ದು ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
Advertisement
ಜಾತಿ ಪ್ರಮಾಣ ಪತ್ರಕ್ಕೆ ಅರ್ಹತೆಗಳುಸಂಬಂಧಿ ಸಿದ ವ್ಯಕ್ತಿ, ಅವರ ಕುಟುಂಬಸ್ಥರು ಯಾರೂ ಆದಾಯ ತೆರಿಗೆ, ಮಾರಾಟ ತೆರಿಗೆ
ಹಾಗೂ ವೃತ್ತಿ ತೆರಿಗೆ ಪಾವತಿದಾರರಾಗಿರಬಾರದು. ಒಟ್ಟು ಕುಟುಂಬದ ಹಿಡುವಳಿ ಮಿತಿ 8 ಹೆಕ್ಟೇರ್ ಗಿಂತ ಜಾಸ್ತಿ ಇರಬಾರದು. ಬಿಜೆಪಿ ಪಾಳಯದಲ್ಲಿ ಆತಂಕ
ಮೇಯರ್ ಆಕಾಂಕ್ಷಿಗಳ ವಿರುದ್ಧ ದಾಖಲಾಗಿರುವ ದೂರು ಮಾನ್ಯಗೊಂಡರೆ ಇಬ್ಬರೂ ಸಹ
ಕಣದಿಂದ ಹಿಂದುಳಿಯಬೇಕಾಗುತ್ತದೆ. ಆಗ ಮೇಯರ್ ಸ್ಥಾನ ಅನಾಯಾಸವಾಗಿ ಕಾಂಗ್ರೆಸ್ ಪಾಲಾಗಾಲಿದೆ. ಈಗಾಗಲೇ ಸುವರ್ಣ ಶಂಕರ್ ಜಾತಿ ಪ್ರಮಾಣ ಪತ್ರ ರದ್ದಾಗಿದ್ದು, ಅನಿತಾ
ರವಿಶಂಕರ್ ಮೀಸಲಾತಿಯನ್ನು ಚುನಾವಣಾ ಆಯೋಗದಲ್ಲಷ್ಟೇ ಪ್ರಶ್ನಿಸಲು ಸಾಧ್ಯವಿದೆ. ಒಂದು ವೇಳೆ ಚುನಾವಣಾ ಆಯೋಗ ದೂರು ಸ್ವೀಕಾರ ಮಾಡಿದರೆ ತೀರ್ಪು ಬರುವವರೆಗೂ ಚುನಾವಣೆ ಮುಂದೂಡಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ. ಶರತ್ ಭದ್ರಾವತಿ