Advertisement

Shimogga: ತೀರ್ಥಹಳ್ಳಿಯಲ್ಲಿ ಆಂಗ್ಲ ಭಾಷೆಯ ಬೋರ್ಡ್‌ಗೆ ಕಪ್ಪು ಮಸಿ ಬಳಿದ ಕರವೇ

05:06 PM Dec 23, 2023 | Team Udayavani |

ತೀರ್ಥಹಳ್ಳಿ : ಪ್ರತಿಯೊಂದು ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಬೋರ್ಡ್ ಹಾಕಬೇಕು ಎಂಬ ಎಚ್ಚರಿಕೆಯನ್ನು ಈಗಾಗಲೇ ಕೊಡುತ್ತ ಬಂದಿದ್ದೇವೆ. ಆದರೆ ಇವತ್ತು ಆಂಗ್ಲ ಭಾಷೆಯಲ್ಲಿ ಇದ್ದ ಬೋರ್ಡ್ ತೆಗೆಯಲು ಹೇಳಿದರೆ ದುರಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ. ಒಳ್ಳೆಯ ರೀತಿಯಲ್ಲಿ ಹೇಳಿದರೂ ಕೇಳದೆ ಇದ್ದ ಕಾರಣಕ್ಕೆ ಬೋರ್ಡ್ ಗೆ ಕಪ್ಪು ಮಸಿ ಬಳಿಯುವ ಕಾರ್ಯಕ್ರಮ ಮಾಡಿದ್ದೇವೆ. ಇನ್ನು ಮುಂದೆ ಯಾವುದೇ ಅಂಗಡಿ ಬೋರ್ಡ್ ಗಳಲ್ಲಿ ಆಂಗ್ಲ ಪದ ದೊಡ್ಡದಾಗಿ ಇದ್ದರೆ ಅದಕ್ಕೆ ಕಪ್ಪು ಮಸಿ ಬಳಿಯುತ್ತೇವೆ ಎಂದು ಕರವೇ ತಾಲೂಕು ಅಧ್ಯಕ್ಷರಾದ ಸುರೇಂದ್ರ ಯಡೂರು ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಗಾಂಧಿಚೌಕದಲ್ಲಿ ಆಂಗ್ಲ ಪದದಲ್ಲಿ ಇದ್ದ ಫ್ಲೆಕ್ಸ್ ವೊಂದಕ್ಕೆ ಕಪ್ಪು ಮಸಿ ಬಳಿದು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಡಿ.27 ರಂದು ಬೆಂಗಳೂರಿನಲ್ಲಿ 224 ವಿಧಾನಸಭಾ ಕ್ಷೇತ್ರಗಳ ಕರವೇ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಂತರದಲ್ಲಿ ತೀರ್ಥಹಳ್ಳಿಯಲ್ಲೂ ಆಂಗ್ಲ ಭಾಷೆಯಲ್ಲಿರುವ ಬೋರ್ಡ್ ಗಳಿಗೆ ಮಸಿ ಬಳಿಯುವ ಕಾರ್ಯಕ್ರಮ ಮಾಡಲಿದ್ದೇವೆ ಎಂದರು.

ಈಗಾಗಲೇ ಪಟ್ಟಣ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರು ಅದರ ಬಗ್ಗೆ ಗಮನವಹಿಸಿಲ್ಲ. ಇನ್ನು ಮುಂದೆಯೂ ಸರಿಪಡಿಸದಿದ್ದರೆ ತಾಲೂಕು ಕಚೇರಿ ಎದುರು ಹಾಗೂ ಪಟ್ಟಣ ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ನೆಡೆಸಲಿದ್ದೇವೆ. ಇನ್ನು ಮುಂದೆ ಆಂಗ್ಲ ಭಾಷೆಯ ಬೋರ್ಡ್ ಇದ್ದರೆ ಮಸಿ ಬಳಿಯುವ ಕೆಲಸ ಪ್ರತಿದಿನ ನೆಡೆಯುತ್ತದೆ ಎಂದರು.

ಬ್ಯಾಂಕ್ ಗಳಲ್ಲಿ ಕೆಲಸ ನಿರ್ವಹಿಸುವ ಬೇರೆ ಭಾಷೆಯ ಸಿಬ್ಬಂದಿಗಳ ಬಗ್ಗೆ ಪ್ರೆಶ್ನೆ ಮಾಡಿದ್ದಕ್ಕೆ ಉತ್ತರಿಸಿದ ಅವರು ಈಗಾಗಲೇ ಆ ವಿಚಾರವಾಗಿ ಕೆನರಾ, ಕರ್ನಾಟಕ, ಹಾಗೂ ಕಾರ್ಪುರೇಶನ್ ಬ್ಯಾಂಕ್ ಗಳಿಗೆ ನುಗ್ಗಿ ಪ್ರತಿಭಟನೆ ನೆಡೆಸಿದ್ದೇವೆ. ಪ್ರತಿಭಟನೆ ನಂತರ ಕಾರ್ಪುರೇಶನ್ ಬ್ಯಾಂಕ್ ಗೆ ಇಬ್ಬರು ಕನ್ನಡ ಮಾತನಾಡುವ ಸಿಬ್ಬಂದಿಗಳು ಬಂದಿದ್ದರು. ಕನ್ನಡ ಮಾತನಾಡುವ ಸಿಬ್ಬಂದಿಗಳು ಬೇಕು ಎಂದು ಗಲಾಟೆ ಮಾಡಿದ ನಂತರದಲ್ಲಿ ಎಸ್ ಬಿ ಐ ಬ್ಯಾಂಕ್ ಗೆ ಕನ್ನಡ ಮಾತನಾಡುವವರು ಬಂದಿದ್ದಾರೆ. ಹಳ್ಳಿಯ ಜನರಿಗೆ ಬೇರೆ ಭಾಷೆ ಅರ್ಥವಾಗುವುದಿಲ್ಲ ಹಾಗಾಗಿ ಕನ್ನಡದಲ್ಲೇ ಮಾತನಾಡಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾದ ಮಂಡ್ಯ ಯುವಕರು!

Advertisement

ಪಟ್ಟಣದ ಗಾಂಧಿಚೌಕದಲ್ಲಿ ಕರವೇ ಪ್ರತಿಭಟನೆ ನೆಡೆಸುವ ವೇಳೆ ಪ್ರವಾಸಕ್ಕೆ ಬಂದಿದ್ದ ಮಂಡ್ಯದ ಯುವಕರು ಕನ್ನಡದ ಶಾಲು ಹಾಕಿಕೊಂಡು ಪ್ರತಿಭಟನೆಗೆ ಸಾಥ್ ನೀಡಿದರು ಈ ವೇಳೆ ರೇವಣ್ಣ ಕುಮಾರ್ ಎಂಬುವರು ಮಾತನಾಡಿ ಹೊರಗಡೆ ಇಂದ ಕರ್ನಾಟಕಕ್ಕೆ ಬರುತ್ತಾರೆ. ಬರಲಿ ಇಲ್ಲಿ ಬದುಕನ್ನ ಕಟ್ಟಿಕೊಳ್ಳಲಿ. ಇಲ್ಲಿ ಬಂದವರು ಕನ್ನಡವನ್ನು ಕಲಿತು ಕನ್ನಡದ ಸಂಸ್ಕೃತಿಯನ್ನು ಉಳಿಸಬೇಕು. ಮೊದಲಿಗೆ ಕನ್ನಡ, ಇಂಗ್ಲಿಷ್, ಹಿಂದಿ ಇರುತ್ತಿತ್ತು ಈಗ ಹಿಂದಿ, ಇಂಗ್ಲಿಷ್ ಇದೆ ಕನ್ನಡ ಇಲ್ಲ. ಕಾರಣ ಕರ್ನಾಟಕ ಸರ್ಕಾರಕ್ಕೆ ಇದರ ಅವಶ್ಯಕತೆ ಇಲ್ಲ.ಕರ್ನಾಟಕದಲ್ಲಿ ಕನ್ನಡದವರು ಉಳಿಯಬೇಕು ಎಂದರೆ ಪ್ರತಿಯೊಬ್ಬ ಕನ್ನಡಿಗ ಏಳಬೇಕು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು ಎಂದರು.

ಇದನ್ನೂ ಓದಿ: Hair Dryer ಬಳಸುವಾಗ ಬೆಂಕಿ: ಪಿಜಿ ಪೀಠೊಪಕರಣಗಳಿಗೆ ಹಾನಿ

Advertisement

Udayavani is now on Telegram. Click here to join our channel and stay updated with the latest news.

Next