Advertisement
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದ ಸೋಂಕಿತರು ಒಳಪ್ರವೇಶಿಸದಂತೆ ತಡೆಹಿಡಿಯಲಾಗಿದೆ. ಜಿಲ್ಲೆಯಲ್ಲಿ ಪ್ರತಿ ದಿನ ಶಂಕಿತರ ಗಂಟಲು ದ್ರವ ಮಾದರಿ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಮಂಗನಕಾಯಿಲೆ ಉಲ್ಬಣಗೊಳ್ಳುತ್ತಿದ್ದರೂ ಕೋವಿಡ್ ಸೋಂಕು ಕಾಣಿಸಿಕೊಳ್ಳದಿರುವುದು ಕೊಂಚ ನಿರಾಳಭಾವ ಮೂಡಿಸಿದೆ.
Related Articles
Advertisement
ಕೋವಿಡ್ -19 ಲಕ್ಷಣ ಇರುವ ರೋಗಿಗಳ ಬಗ್ಗೆ ಜಿಲ್ಲಾಡಳಿತಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅಂತವರನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಯಲ್ಲಿರಿಸಿ ಪ್ರಾಥಮಿಕ ತಪಾಸಣೆ ನಡೆಸಲಾಗುತ್ತದೆ. ನಂತರ ಲ್ಯಾಬ್ ವರದಿಗೆ ಕಾಯಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ: ಜಿಲ್ಲೆಯ ಗಡಿಭಾಗದ 17 ಕಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಹೊರಗಿನಿಂದ ಬಂದವರನ್ನು ಚೆಕ್ ಮಾಡಿ ಪಾಸ್ ಇದ್ದವರಿಗೆ ಒಳಗೆ ಬಿಡಲಾಗುತ್ತದೆ. ಬಿಡುವ ಮುಂಚೆ ಸ್ಥಳದಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅನುಮತಿ ಇಲ್ಲದೇ ಯಾರಿಗೂ ಪ್ರವೇಶವಿಲ್ಲ. 6 ಚೆಕ್‌ಪೋಸ್ಟ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಉಳಿದ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಸಲಾಗಿದೆ.
ನಗರ ಪ್ರದೇಶಗಳಲ್ಲಿ ಸೆಕ್ಟರ್ ಲಾಕ್ ಮಾಡಲಾಗಿದೆ. ಒಂದು ಏರಿಯಾದವರು ಇನ್ನೊಂದು ಏರಿಯಾಗೆ ಹೋಗದಂತೆ ತಪಾಸಣೆ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ಪೂರೈಸಲಾಗಿದೆ. ಜಿಲ್ಲೆಯ 2 ಸಾವಿರಕ್ಕೂ ಅಧಿಕ ಪೊಲೀಸರು 12 ಗಂಟೆ ಅವಧಿಯ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತರಕಾರಿ, ದಿನಸಿ ಮಾರಾಟಕ್ಕೆ ಮಧ್ಯಾಹ್ನ 12 ಗಂಟೆವರೆಗೂ ಅವಕಾಶ ನೀಡಲಾಗಿದ್ದು, ನಂತರ ಬಾಗಿಲು ಹಾಕಿಸುವ ಕೆಲಸವನ್ನು ಮಾಡಲಾಗಿದೆ.
ಫುಡ್ ಕಿಟ್, ಸಹಾಯ: ಬಡವರು, ನಿರ್ಗತಿಕರು, ಅಸಹಾಯಕರಿಗೆ ಪ್ರತಿ ದಿನ 700 ಜನರಿಗೆ ನೇರವಾಗಿ ಜಿಲ್ಲಾಡಳಿತ ಆಹಾರ ಪೂರೈಸುತ್ತಿದೆ. ಮಹಾನಗರ ಪಾಲಿಕೆ ಪ್ರತಿ ವಾರ್ಡ್‌ಗೆ ಸಾವಿರ ಫುಡ್‌ಕಿಟ್ ಕೊಡುತ್ತಿದೆ. ಸಂಘ ಸಂಸ್ಥೆಗಳು ಆಹಾರ, ದಿನಸಿ ರೂಪದಲ್ಲಿಸಾವಿರಾರು ಜನರಿಗ ಸಹಾಯ ಮಾಡುತ್ತಿವೆ. ಜಿಲ್ಲಾಡಳಿತ, ಸಂಘಸಂಸ್ಥೆಗಳ ಮೂಲಕ ಮುಂದೆ ಬಂದಿರುವ ಸ್ವಯಂಸೇವಕರಿಂದ ಫುಡ್‌ಕಿಟ್, ಹಾಲು ವಿತರಣೆ ಕೆಲಸ ಮಾಡಲಾಗುತ್ತಿದೆ. ಪ್ರತಿ ಗ್ರಾಪಂ ಐವರು ಸಿಬ್ಬಂದಿ ಹಾಗೂ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮೆಗ್ಗಾನ್ ಸಜ್ಜು: ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡವನ್ನು ಕೋವಿಡ್-19 ಆಸ್ಪತ್ರೆಗೆ ಮೀಸಲಿಡಲಾಗಿದೆ. 250 ಬೆಡ್‌ಗಳು ರೆಡಿ ಇದ್ದು, 500 ಸಂಖ್ಯೆಗೆ ಹೆಚ್ಚಿಸಬಹುದಾಗಿದೆ. ಅದಲ್ಲದೇ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಕುರಿತು ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಪ್ರತಿ ಆರೋಗ್ಯ ಸಿಬ್ಬಂದಿಗೂ ಮಾಸ್ಕ್, ಸ್ಯಾನಿಟೈಸರ್ ಕೊಡಲಾಗುತ್ತಿದ್ದು, ಮಾಸ್ಕ್ ಪೂರೈಸಲು ಜಿಲ್ಲೆಯ ಎರಡು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಹೆಲ್ಪ್ಲೈನ್: ಜಿಲ್ಲಾಡಳಿತ ತೆರೆದಿರುವ ಹೆಲ್ಪ್ಲೈನ್ ಮೂಲಕವೂ ಸಹಾಯಹಸ್ತ ಚಾಚಲಾಗುತ್ತಿದೆ. ಪ್ರಮುಖವಾಗಿ ಪಾಸ್ ಸಂಬಂಧ ನೂರಾರು ಮಂದಿ ಕರೆ ಮಾಡುತ್ತಿದ್ದು ಅವರಿಗೆ ತಿಳಿಹೇಳಲಾಗುತ್ತಿದೆ. ಊಟ ಸಿಗದವರು, ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡವರಿಗೂ ನೆರವು ನೀಡಲಾಗುತ್ತಿದೆ. ನೂರಾರು ಬೈಕ್ ವಶ: ಲಾಕ್‌ಡೌನ್ ನಿಯಮ ಮೀರಿ ಓಡಾಡುತ್ತಿರುವ ಯುವಕರು, ಸಾರ್ವಜನಿಕರಿಗೆ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ. ಪ್ರತಿ ದಿನ ಸುಖಾಸುಮ್ಮನೆ ಓಡಾಡುವವರ ವಿರುದ್ಧ ಪ್ರಕರಣ ದಾಖಲಿಸಿ 500 ರೂ. ದಂಡ ವಿ ಧಿಸಲಾಗುತ್ತಿದೆ. ದಂಡ ಕಟ್ಟಿ ಬಿಡಿಸಿಕೊಂಡು ಹೋಗುವವರಿಗೆ ತಿಳಿವಳಿಕೆ ಹೇಳಲಾಗುತ್ತಿದೆ. ಪ್ರತಿ ದಿನ ನೂರಾರು ಬೈಕ್‌ಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಲಾಗುತ್ತಿದೆ. ಬ್ಯಾನರ್ ಮೂಲಕ ಜಾಗೃತಿ: ನಗರದ ಪ್ರಮುಖ ಸ್ಥಳಗಳಲ್ಲಿ ಕೊರೊನಾ ವೈರಸ್ ಬಗ್ಗೆ ಬ್ಯಾನರ್‌ಗಳನ್ನು ಪೊಲೀಸ್ ಇಲಾಖೆ ಹಾಕಿದ್ದು, ಜನಜಾಗೃತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಶಿವಮೊಗ್ಗ ವಿನೋಬನಗರ, ಅಶೋಕ ವೃತ್ತ, ಗೋಪಿ ವೃತ್ತ, ಕುಂಸಿ, ಸೊರಬ, ಸಿದ್ದಾಪುರ ಗಡಿ ಭಾಗ ಹೀಗೆ ವಿವಿಧೆಡೆ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಹಾಕಲಾಗಿದೆ. ಜತೆಗೆ, ರಂಗೋಲಿ ಬಿಡಿಸಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯ ಮಾಡಲಾಗುತ್ತಿದೆ. ಕೋವಿಡ್ -19 ವಿರುದ್ಧ ಜಿಲ್ಲಾಡಳಿತ ಹಗಲಿರುಳು ಶ್ರಮವಹಿಸಿ ಕೆಲಸ ಮಾಡುತ್ತಿದೆ. ಯಾವುದೇ ಸಿಬ್ಬಂದಿಗೂ, ಸಾರ್ವಜನಿಕರಿಗೂ ಸಮಸ್ಯೆಯಾಗದಂತೆ ಕೆಲಸ ನಿರ್ವಹಿಸಲಾಗುತ್ತಿದೆ. ಏ.20ರ ನಂತರ ಸರಕಾರದ ಸೂಚನೆಯಂತೆ ವಿನಾಯಿತಿ ನೀಡಲಾಗುವುದು.
ಕೆ.ಬಿ.ಶಿವಕುಮಾರ್,
ಜಿಲ್ಲಾಧಿಕಾರಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಲು ಸಿಬ್ಬಂದಿಗೆ ತಿಳಿಹೇಳಿದ್ದೇವೆ. ಯಾವುದೇ ಸಂದರ್ಭದಲ್ಲೂ ನಾವು ಅವರ ಜತೆ ಇರುತ್ತೇವೆ. ಸಿಬ್ಬಂದಿಗೆ ಧನ್ಯವಾದ, ಪ್ರಶಂಸೆ ವ್ಯಕ್ತಪಡಿಸುತ್ತೇವೆ.
ಕೆ.ಎಂ.ಶಾಂತರಾಜು, ಎಸ್‌ಪಿ ಶರತ್ ಭದ್ರಾವತಿ