Advertisement
ಸ್ವಾಮಿ ವಿವೇಕಾನಂದ ಅವರ ಚಿಕಾಗೋ ಸಮ್ಮೇಳನ ಭಾಷಣದ 125ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಯುವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಜೀವನದಲ್ಲಿ ಸಫಲತೆ ಸಾಧಿಸಲು ಎಲ್ಲರ ಸೇವೆಯಲ್ಲಿಯೂ ಶಿವ ಸ್ವರೂಪ ಕಾಣಬೇಕು. ಪರರ ಸೇವೆಯಲ್ಲಿ ಭಗವಂತನ ಸೇವೆ ಮಾಡಬೇಕು. ಆತ್ಮವಿಶ್ವಾಸ ಮತ್ತು ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಬೇಕು. ನನಗಿಂತಲೂ ಸಹಸ್ರಪಟ್ಟು ಸಾಧಿ ಸಲು ಎಲ್ಲರಲ್ಲಿಯೂ ಶಕ್ತಿ ಇದೆ ಎಂದು ವಿವೇಕರು ಸಂದೇಶ ಸಾರುತ್ತಿದ್ದರು.
ವಿವೇಕಾನಂದರ ಸಂದೇಶಗಳಲ್ಲಿ ಅದ್ಭುತ ವ್ಯಕ್ತಿತ್ವ ಮತ್ತು ಮನೋಸಾಮರ್ಥ್ಯ ವೃದ್ಧಿಸುತ್ತದೆ ಎಂದು ಹೇಳಿದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವು ವಿಶ್ವಕ್ಕೆ ಭಾರತದ ಸಂಸ್ಕೃತಿ ಹಾಗೂ ಭವ್ಯತೆಯನ್ನು ಸಾರಿತು. ವಿವೇಕಾನಂದರ ಪ್ರತಿಯೊಂದು ನುಡಿಯು ವಿಶ್ವದ ಎಲ್ಲರನ್ನು ಆಶ್ಚಯ ಚಕಿತರನ್ನಾಗಿ ಮಾಡಿಸಿತ್ತು ಎಂದು ಹೇಳಿದರು.
ಸದೃಢ ದೇಶದ ನಿರ್ಮಾಣಕ್ಕೆ ಯುವಜನರೇ ಶಕ್ತಿ ಎಂಬುದು ವಿವೇಕಾನಂದರ ಅದ್ಭುತ ಪರಿಕಲ್ಪನೆ. ಯುವಜನರಲ್ಲಿ ಜಾಗೃತಿ ಮೂಡಿಸಲು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಯುವಜನತೆ ಗುರಿಯಾಗಿಸಿ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ರಾಮಕೃಷ್ಣ ಮಠಗಳು ಯುವಜನರಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಬಿತ್ತುವಲ್ಲಿ ಮಾಡುತ್ತಿರುವ ಕಾರ್ಯ ಅಭಿನಂದನೀಯ. ರಾಮಕೃಷ್ಣ ಮಠದ ಸ್ವಾಮೀಜಿಗಳು ವಿವೇಕಾನಂದರ ಜೀವನಚರಿತ್ರೆಯ ಪ್ರತಿಯೊಂದು ಸಂದೇಶಗಳನ್ನು ತಲುಪಿಸುವ ಕಾರ್ಯ ಮಾಡುತ್ತಿವೆ ಎಂದರು.
ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಕಾರ್ಯದರ್ಶಿ ಪರಮೇಶ್ವರ ಭಟ್ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಮತ್ತು ಚಿಕಾಗೋ ಸಮ್ಮೇಳನದಲ್ಲಿ ನೀಡಿರುವ ಸಂದೇಶಗಳನ್ನು ಯುವಜನರಿಗೆ ತಲುಪಿಸುವುದೇ ಸಮ್ಮೇಳನದ ಆಶಯ ಎಂದು ತಿಳಿಸಿದರು. ಸಂಸದ ಬಿ.ವೈ.ರಾಘವೇಂದ್ರ ಅವರು “ವಿವೇಕ ಮಾರ್ಗದರ್ಶಿ’ ಪುಸ್ತಕ ಲೋಕಾರ್ಪಣೆಗೊಳಿಸಿದರು. ಸಮನ್ವಯ ಕಾಶಿ ಕಾರ್ಯಕ್ರಮ ರೂಪಿಸಿದರು. ಶಿವಮೊಗ್ಗ ನಗರದ ವಿವಿಧ ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾಮಿ ಜಿತಕಾಮಾನಂದಜೀ ಮಹಾರಾಜ್, ಸ್ವಾಮಿ ಮುಕ್ತಿದಾನಂದಜೀ, ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್, ಸ್ವಾಮಿ ಭೋದಸ್ವರೂಪಾನಂದಜೀ ಮಹಾರಾಜ್, ಸ್ವಾಮಿ ಮಂಗಳಾನಾಥನಂದ್‌ಜೀ ಸಾನ್ನಿಧ್ಯ ವಹಿಸಿದ್ದರು. ಶ್ರೀ ಶಾರದಾ ಅಂಧರ ವಿಕಾಸ ಕೇಂದ್ರದ ಅಧ್ಯಕ್ಷ ಡಾ| ಎಚ್.ವಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಪೆಸಿಟ್ ಟ್ರಸ್ಟಿ ಎಸ್.ವೈ. ಅರುಣಾದೇವಿ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ| ಎಂ.ಕೆ. ನಾಯ್ಕ ಮತ್ತಿತರರು ಇದ್ದರು.