Advertisement
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಂತೆ ಬಾಕಿ ಇರುವ ಹಲವು ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಅಲ್ಲದೆ ಮನವಿ ಸಲ್ಲಿಸಿದ್ದು, ಸಚಿವರು ಪರಿಶೀಲಿಸಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಸಿವಿಲ್ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ಬೀರೂರು- ಶಿವಮೊಗ್ಗ ನಡುವಿನ ರೈಲ್ವೆ ಡಬ್ಲಿಂಗ್ ಕಾರ್ಯವನ್ನು ತ್ವರಿತಗತಿಗಯಲ್ಲಿ ಅನುಷ್ಠಾನಗೊಳಿಸುವಂತೆಯೂ ಆಗ್ರಹಿಸಿದರು. ಶಿವಮೊಗ್ಗ- ರೇಣಿಗುಂಟ ಮತ್ತು ಶಿವಮೊಗ್ಗ-ಚೆನ್ನೈ ತತ್ಕಾಲ್ ವಿಶೇಷ ರೈಲುಗಳನ್ನು ನಿರಂತರ
ರೈಲುಗಳನ್ನಾಗಿ (ರೆಗ್ಯುಲರ್ ಟ್ರೈನ್) ಮಾಡುವುದು ಹಾಗೂ ವಾರದಲ್ಲಿ ಎರಡು ದಿನದಂತೆ ಚಲಿಸುವಂತೆ ಮನವಿ ಸಲ್ಲಿಸಲಾಗಿದೆ. ವಾರದಲ್ಲಿ ಮೂರು ದಿನ ಚಲಿಸುತ್ತಿರುವ 16579/80 ಯಶವಂತಪುರ- ಶಿವಮೊಗ್ಗ- ಯಶವಂತಪುರ ರೈಲನ್ನು ಪ್ರತಿನಿತ್ಯ ಸಂಚರಿಸುವಂತೆ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಬೈಂದೂರು ವಿಧಾನಸಭಾ
ಕ್ಷೇತ್ರದಡಿ ಬರುವ ಬೈಂದೂರು(ಮೂಕಾಂಬಿಕ) ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆ ರೈಲುಗಳಿಗೆ ನಿಲುಗಡೆ ಮಾಡುವಂತೆಯೂ ಮನವಿ ಮಾಡಲಾಗಿದೆ ಎಂದ ತಿಳಿಸಿರುವ ಅವರು, ಮುಂದಿನ ಕೆಲವೇ ವರ್ಷಗಳಲ್ಲಿ ಜನರ ನಿರೀಕ್ಷೆಯ ಈ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡು ಜಿಲ್ಲೆಯ ಚಿತ್ರಣ ಬದಲಾಗಲಿದೆ ಎಂದು ತಿಳಿಸಿದ್ದಾರೆ.
Related Articles
ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ. ವಿಮಾನ ನಿಲ್ದಾಣದಂತ ಸಂಪರ್ಕಗಳು ತ್ವರಿತಗತಿಯಲ್ಲಿ ದೊರೆತಲ್ಲಿ ರಾಷ್ಟ್ರದ ಬೇರೆ-ಬೇರೆ ಭಾಗಗಳಿಂದ ಜಿಲ್ಲೆಗೆ ಆಗಮಿಸುವ ಬಂಡವಾಳಸ್ಥರ ಸಂಖ್ಯೆ ಹೆಚ್ಚಳವಾಗಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಬಹು ಸಂಖ್ಯೆ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕಿಸಿಕೊಡುವ ಆಶಾಭಾವನೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
Advertisement