Advertisement

Shimoga; ಕಾಂಗ್ರೆಸ್ ತುಷ್ಟೀಕರಣದಿಂದ ಪೊಲೀಸರ ಮಾನಸಿಕ ಸ್ಥಿತಿ ಹಾಳಾಗಿದೆ: ಆರಗ ಜ್ಞಾನೇಂದ್ರ

04:17 PM May 09, 2024 | Team Udayavani |

ಶಿವಮೊಗ್ಗ: ಬುಧವಾರ ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದಾಗಿ ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿ ಹೋಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದುಷ್ಟ ಶಕ್ತಿಗಳು ಬಿಲದಿಂದ ಹೊರ ಬಂದಿದೆ. ಜಿಲ್ಲೆಯ ಜನ ಭಯಭೀತರಾಗಿದ್ದಾರೆ. ಕಾಂಗ್ರೆಸ್ ಆಡಳಿತದಿಂದ ತುಷ್ಟೀಕರಣದ ನೀತಿಯಿಂದ ಪೊಲೀಸರ ಮಾನಸಿಕ ಸ್ಥಿತಿ ಸಹ ಹಾಳಾಗಿದೆ ಎಂದು ಮಾಜಿ‌ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗಿಂತ ಪೊಲೀಸರು ಬೇರೆ ವಿಷಯದಲ್ಲಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಜನ ದೂರು ಕೊಡಲೂ ಹೆದರುತ್ತಾರೆ. ನಮ್ಮದೆ ಸರ್ಕಾರವಿದೆ ಏನು ಆಗಲ್ಲ‌ ಎಂದುಕೊಂಡಿದ್ದಾರೆ. ಮೊದಲ ದಿನವೇ ಪೊಲೀಸರಿಗೆ ಕೊಲೆ ವಿಚಾರ ಗೊತ್ತಿತ್ತು. ಯೋಗ್ಯತೆ ಇರುವ ಪೊಲೀಸರನ್ನು ನಿಯೋಜಿಸಬೇಕಿದೆ. ಗಾಂಜಾ ಹಾವಳಿ ಹೆಚ್ಚಳವಾಗಿದೆ. ಎಸ್ಪಿ ಮೇಲೆಯೂ ನಮಗೆ ಅನುಮಾನವಿದೆ. ಜಿಲ್ಲೆಗೆ ಗಟ್ಸ್ ಇರುವ ಪೊಲೀಸ್ ಅಧಿಕಾರಿಗಳು ಬೇಕಿದೆ ಎಂದರು.

ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕೆಟ್ಟ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಸರ್ಕಾರ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಒಂದು ಹಂತಕ್ಕೆ ಬಂದಿತ್ತು. ನಾವು ಕಣ್ಣುಮುಚ್ಚಿ ಕೂರುವುದಿಲ್ಲ ಪ್ರತಿಭಟನೆ ಮಾಡುತ್ತೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರದಲ್ಲಿ ಮಾತನಾಡಿದ್ದ ಅವರು, ಎಸ್ಐಟಿ ಪಾರದರ್ಶಕವಾಗಿ ತನಿಖೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಮಾಡಿದೆ. ಸಮಯಕ್ಕಾಗಿ ಕಾದು ಪೆನ್ ಡ್ರೈವ್ ಬಿಟ್ಟಿದ್ದಾರೆ. ಪ್ರಜ್ವಲ್ ರೇವಣ್ಣನ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ. ರಾಜಕಾರಣಕ್ಕೆ ಈ ತರಹದ ಘಟನೆ ಬಳಸಿಕೊಳ್ಳಬಾರದು. ಇದು ನೀಚತನದ ಪರಮಾವಧಿ. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪೆನ್ ಡ್ರೈವ್ ಹಂಚಿದವರ ಮೇಲೆ ಸಹ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next