Advertisement

ಆನ್‌ಲೈನ್‌ನಲ್ಲೇ ಪೊಲೀಸ್‌ ಅಧಿಕಾರಿಗಳ ಸಭೆ

06:06 PM May 01, 2020 | Naveen |

ಶಿವಮೊಗ್ಗ: ಸರ್ಕಾರ, ಜಿಲ್ಲಾಡಳಿತದ ಸೂಚನೆಯನ್ನು ಚಾಚು ತಪ್ಪದೆ ಪಾಲಿಸುವಂತೆ ಇಲಾಖೆಯ ಪ್ರತಿ ಸಿಬ್ಬಂದಿಗೂ ಮನವರಿಕೆ ಮಾಡುವುದು ಅಂದುಕೊಂಡಷ್ಟು ಸರಾಗವಲ್ಲ. ಇದೇ ಕಾರಣಕ್ಕೆ ಶಿವಮೊಗ್ಗ ಪೊಲೀಸ್‌ ಇಲಾಖೆ ಆನ್‌ ಲೈನ್‌ ಮಾರ್ಗ ಕಂಡುಕೊಂಡಿದೆ. ಕೊರೊನಾ ಲಾಕ್‌ಡೌನ್‌ ಆರಂಭವಾಗುತ್ತಿದ್ದಂತೆ ಫೀಲ್ಡಿಗಿಳಿದು ಕೆಲಸ ಆರಂಭಿಸಿದ್ದ ಪೊಲೀಸರು, ಈಗಲು ಆನ್‌ ಡ್ನೂಟಿಯಲ್ಲಿದ್ದಾರೆ.

Advertisement

ನಿಗದಿಗಿಂತಲೂ ಹೆಚ್ಚು ಗಸ್ತು ತಿರುಗುತ್ತಿದ್ದಾರೆ. ಸರ್ಕಲ್‌, ಪ್ರಮುಖ ರಸ್ತೆಗಳಲ್ಲಿ ವಾಹನಗಳ ತಪಾಸಣೆ, ಚೆಕ್‌ಪೋಸ್ಟ್ ನಲ್ಲಿ ಹಗಲು, ರಾತ್ರಿ ಕೆಲಸ. ಈ ನಡುವೆ ನಿರಂತರ ಮೀಟಿಂಗ್‌ಗಳನ್ನು ನಡೆಸುವುದು ಅಸಾಧ್ಯ. ಹಾಗಾಗಿ ಜಿಲ್ಲಾ ಪೊಲೀಸ್‌ ಇಲಾಖೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರತಿದಿನದ ಸಭೆ ನಡೆಸುತ್ತಿದೆ. ಕೋವಿಡ್ ಲಾಕ್‌ಡೌನ್‌ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಆಗಿಂದಾಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತಿವೆ. ಇದನ್ನು ಪರಿಪೂರ್ಣವಾಗಿ ಜಾರಿಗೊಳಿಸಬೇಕಾದ್ದು ಪೊಲೀಸ್‌ ಇಲಾಖೆ. ಇದೇ ಕಾರಣಕ್ಕೆ ನಿರಂತರ ಸಭೆಗಳನ್ನು ನಡೆಸಬೇಕಾಗುತ್ತದೆ.

ಜಿಲ್ಲಾ ಪೊಲೀಸ್‌ ಕಚೇರಿಯಿಂದ ಜಿಲ್ಲೆಯ ಮೂಲೆ ಮೂಲೆಯಲ್ಲಿರುವ ಪೊಲೀಸ್‌ ಠಾಣೆಗಳಿಗೂ ಸೂಚನೆಗಳು ತಲುಪಬೇಕಿದೆ. ಇದೇ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೊರೆ ಹೋಗಲಾಗಿದೆ. ಜಿಲ್ಲೆಯ ಎಲ್ಲಾ ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳು, ಸಬ್‌ಇನ್ಸ್‌ಪೆಕ್ಟರ್‌ ಗಳು ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಭಾಗವಹಿಸುತ್ತಾರೆ. ಬಂದೋಬಸ್ತ್ ಡ್ನೂಟಿಯಲ್ಲಿ ಇರುವ ಸ್ಥಳದಿಂದಲೇ ಅಪ್ಲಿಕೇಷನ್‌ ಮೂಲಕ ಸಭೆಗೆ ಹಾಜರಾಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next