Advertisement

ಲಾಕ್‌ಡೌನ್‌ನಲ್ಲೂ ನರೇಗಾ ಆಶಾವಾದ

03:11 PM Apr 24, 2020 | Naveen |

ಶಿವಮೊಗ್ಗ: ಕೋವಿಡ್ ಲಾಕ್‌ಡೌನ್‌ ಇದ್ದರೂ ದುಡಿಯುವ ಕೈಗಳಿಗೆ ಕೆಲಸ ಕೊಡಲು ಸರಕಾರ ಯಶಸ್ವಿಯಾಗಿದೆ. ಕೆಲಸ ಮಾಡಲು ಆಕಸ್ತಿಯುಳ್ಳ ಎಲ್ಲರಿಗೂ ನರೇಗಾ ಮೂಲಕ ಕೆಲಸ ಕೊಡಲಾಗಿದೆ. ನಿರೀಕ್ಷಿತ ಗುರಿ ತಲುಪದಿದ್ದರೂ ಆಶಾದಾಯಕವಾಗಿದೆ.

Advertisement

ಜಿಲ್ಲೆಯಲ್ಲಿ 2,14,996 ಜಾಬ್‌ ಕಾರ್ಡ್ಗಳಿದ್ದು ಇದರಲ್ಲಿ 486434 ಮಂದಿ ಸದಸ್ಯರಿದ್ದಾರೆ. ಇದರಲ್ಲಿ 1,30 ಲಕ್ಷ ಜಾಬ್‌ ಕಾರ್ಡ್‌ಗಳು ಸಕ್ರಿಯವಾಗಿದ್ದು 2.39 ಲಕ್ಷ
ಮಂದಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಜಿಲ್ಲೆಯಲ್ಲಿ 18734 ಜನರು ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿದ್ದು ಎಲ್ಲರಿಗೂ ಕೆಲಸ ಕೊಡಲಾಗಿದೆ.

18 ಸಾವಿರ ಮಂದಿ: ಏ.1ರಿಂದ ಏ.22ರವರೆಗೆ ಜಿಲ್ಲೆಯಲ್ಲಿ 18734 ಮಂದಿ ಉದ್ಯೋಗ ಬೇಕೆಂದು ಬೇಡಿಕೆ ಸಲ್ಲಿಸಿದ್ದು ಎಲ್ಲರೂ ಕೆರೆ ಹೂಳೆತ್ತುವ, ವೈಯಕ್ತಿಕ ಕಾಮಗಾರಿಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ವರ್ಷ ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತಿತ್ತು. ಈ ಬಾರಿ ಹೆಚ್ಚಿನ ಬೇಡಿಕೆ ಬಂದಿಲ್ಲ. ಮಾರ್ಚ್‌ ತಿಂಗಳಲ್ಲಿ ಒಂದಿಷ್ಟು ಕೆಲಸ ಚುರುಕಾಗಿತ್ತು. ಏಪ್ರಿಲ್‌ ನಂತರ ಅಷ್ಟೇನು ಬೇಡಿಕೆ ಬಂದಿಲ್ಲ. ಆದರೂ ಕೇಳಿದವರಿಗೆಲ್ಲ ಕೆಲಸ ಸಿಕ್ಕಿದೆ. ಜತೆಗೆ 1.55 ಕೋಟಿ ರೂ. ವೇತನ ಪಾವತಿ ಮಾಡಲಾಗಿದೆ.

ಗುರಿ ಹೆಚ್ಚಳ: ನರೇಗಾ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆ 2019-20ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದನ್ನು ಪರಿಗಣಿಸಿ ಈ ಬಾರಿ ಗುರಿಯನ್ನು 45 ಲಕ್ಷ ಮಾನವ ದಿನಗಳಿಗೆ ಏರಿಕೆ ಮಾಡಲಾಗಿದೆ. 2018-19ನೇ ಸಾಲಿನಲ್ಲಿ ಸತತ ಚುನಾವಣೆಗಳಿದ್ದ ಕಾರಣ ಗುರಿ ಮುಟ್ಟಿರಲಿಲ್ಲ. 2019-20ರಲ್ಲಿ ಗುರಿ ತಲುಪಿತ್ತು. 2020-21ನೇ ಆರ್ಥಿ ವರ್ಷಕ್ಕೆ ಗುರಿ ಹೆಚ್ಚಿಸಲಾಗಿದೆ. ಬೇಸಿಗೆ ಸಮಯದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಬೇಡಿಕೆ ಬರುತ್ತದೆ. ಕೊರೊನಾ ಕಾರಣ ಜನರು ಮನೆಯಿಂದ ಹೊರಬರದ ಕಾರಣ ಏಪ್ರಿಲ್‌ ತಿಂಗಳಲ್ಲಿ ಹಿನ್ನಡೆಯಾಗಿದೆ.

ಸಾಮಾಜಿಕ ಅಂತರ
ಕೆಲಸದ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಕೆಲಸಗಾರರಿಗೆ ಪ್ರತಿಜ್ಞಾ ವಿಧಿ  ಬೋಧಿಸಲಾಗಿದೆ. ಪ್ರತಿಯೊಬ್ಬರಿಗೂ ಗ್ರಾಪಂ ವತಿಯಿಂದ ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಕೆರೆ ಹೂಳೆತ್ತುವ ಕಾಮಗಾರಿಗಳಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿದ್ದು, 5 ಜನರ ಒಂದು ಗುಂಪು ಮಾಡಲಾಗಿದೆ. ಪ್ರತಿಯೊಬ್ಬರಿಗೂ 1 ಕ್ಯೂಬಿಕ್‌ ಮೀಟರ್‌ ಕೆಲಸದ ಸ್ಥಳ ನಿಗದಿ ಮಾಡಿದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಜಿಪಂ ಯೋಜನಾ ನಿರ್ದೇಶಕ ಕೆ.ಬಿ. ವೀರಾಪುರ.

Advertisement

ಹೂಳೆತ್ತುವ ಕಾಮಗಾರಿ
ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಜತೆಗೆ ವೈಯಕ್ತಿಕ ಕಾಮಗಾರಿಗಳಾದ ಕೊಟ್ಟಿಗೆ, ಮನೆ, ಅಡಕೆ ತೋಟ ನಿರ್ಮಾಣ ಕಾಮಗಾರಿಗಳನ್ನು ನೀಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next