Advertisement

ಎಂಪಿಎಂ ಕಾರ್ಖಾನೆಗೆ ನೀಡಿದ್ದ ಅರಣ್ಯ ಭೂಮಿ ಹಿಂಪಡೆಯಲು ಒತ್ತಾಯ

07:11 PM Jun 05, 2020 | Naveen |

ಶಿವಮೊಗ್ಗ: ಎಂಪಿಎಂ ಕಾರ್ಖಾನೆಗೆ ನೀಡಿದ್ದ 60 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿಯನ್ನು ಸರ್ಕಾರ ಈ ಕೂಡಲೇ ವಾಪಸ್‌ ಪಡೆಯಬೇಕು ಎಂದು ಪ್ರಗತಿ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

Advertisement

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಪಶ್ಚಿಮ ಘಟ್ಟದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಸುಮಾರು 75 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿಯನ್ನು 40 ವರ್ಷಗಳ ಅವಧಿಗೆ ಲೀಸ್‌ಗೆ ನೀಡಲಾಗಿತ್ತು. ಕೆಲವು ವರ್ಷಗಳ ನಂತರ 15 ಸಾವಿರ ಹೆಕ್ಟೇರ್‌ ಪ್ರದೇಶವನ್ನು ಹಿಂಪಡೆದು 60 ಸಾವಿರ ಹೆಕ್ಟೇರ್‌ ಪ್ರದೇಶವನ್ನು ಲೀಸ್‌ನಲ್ಲಿ ಮುಂದುವರಿಸಲಾಗಿತ್ತು. ಅದು ಈಗ 2020ರ ಆಗಸ್ಟ್‌ ವೇಳೆಗೆ ಅಂತ್ಯವಾಗಲಿದೆ. ಹಾಗಾಗಿ ಸರ್ಕಾರ ಅದನ್ನು ವಾಪಸ್‌ ಪಡೆಯಬೇಕು ಎಂದು ಮನವಿದಾರರು ಒತ್ತಾಯಿಸಿದ್ದಾರೆ. ಈಗಾಗಲೇ ಮೈಸೂರು ಕಾಗದ ಕಾರ್ಖಾನೆ ಸ್ಥಗಿತಗೊಂಡಿದೆ.

ಕಾರ್ಖಾನೆ ಮತ್ತೆ ಮುಂದುವರಿಯುವ ಲಕ್ಷಣಗಳು ಇಲ್ಲ. ಸರ್ಕಾರ ಆ ಬಗ್ಗೆ ಈಗಾಗಲೇ ತಟಸ್ಥವಾಗಿದೆ. ಹೀಗಿರುವಾಗ ಈ ಅರಣ್ಯ ಭೂಮಿಯ ಅವಶ್ಯಕತೆ ಕಾರ್ಖಾನೆಗೆ ಇರುವುದಿಲ್ಲ. ಅಲ್ಲದೇ ಅದನ್ನು ಖಾಸಗಿಯವರಿಗೆ ಮಾರಾಟ ಮಾಡಲು ಎಂಪಿಎಂ ಆಡಳಿತ ಮಂಡಳಿಗೆ ಅವಕಾಶ ಇಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಈ ಭೂಮಿಯನ್ನು ನೀಡುವಂತಿಲ್ಲ ಎಂದು ಮನವಿದಾರರು ಹೇಳಿದರು.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಕೆ.ಟಿ. ಗಂಗಾಧರ್‌, ಕೆ.ಪಿ. ಶ್ರೀಪಾಲ್‌, ಎಂ. ಗುರುಮೂರ್ತಿ, ರಾಜೇಂದ್ರ ಕಂಬಳಗೆರೆ, ನಾಗೇಶನ್‌, ಮಾಲತೇಶ್‌ ಬೊಮ್ಮನಕಟ್ಟೆ, ಆದರ್ಶ ಹುಂಚದಕಟ್ಟೆ, ಪ್ರಸನ್ನ ಹಿತ್ತಲಗದ್ದೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next