Advertisement

ಲಾಕ್‌ಡೌನ್‌ ಪಾಲಿಸಿ; ಕೋವಿಡ್ ಓಡಿಸಿ

01:46 PM Apr 15, 2020 | Naveen |

ಶಿವಮೊಗ್ಗ: ಕೋವಿಡ್ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ-ರಾಜ್ಯ ಸರಕಾರ ಲಾಕ್‌ ಡೌನ್‌ ವಿಸ್ತರಿಸಿ ಆದೇಶಿಸಿದೆ. ಸಾರ್ವಜನಿಕರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಜಿಲ್ಲಾ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟ ಸಮಸ್ಯೆಯಲ್ಲ. ಇಡೀ ಜಗತ್ತಿನಾದ್ಯಂತ ಸಮಸ್ಯೆ ಕಂಡುಬಂದಿದೆ. ಸಾಕಷ್ಟು ಜೀವಹಾನಿ ಮಾಡಿದೆ. ಈ ಸಂದರ್ಭದಲ್ಲಿ ವೈರಸ್‌ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತಿಮುಖ್ಯ ಎಂದರು. ಯಾವುದೇ ಜೀವಹಾನಿ ಆಗದ ರೀತಿಯಲ್ಲಿ, ಕುಟುಂಬಕ್ಕೆ ಹಾಗೂ ದೇಶಕ್ಕೆ ಅನ್ಯಾಯ ಆಗದ ಹಾಗೆ ನಮ್ಮ ನಡೆ ಇರಬೇಕು. ಸರ್ಕಾರದ ತೀರ್ಮಾನಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಹೇಳಿದರು.

ಲಾಕ್‌ಡೌನ್‌ನಿಂದ ವೈಯಕ್ತಿಕವಾಗಿ ಕೆಲವೊಂದು ತೊಂದರೆ ಉಂಟಾಗುತ್ತಿದೆ ನಿಜ. ಆದರೆ ಇದನ್ನು ಸಹಿಸಿಕೊಳ್ಳಲೇಬೇಕಿದೆ. ಮೇ 3 ರವರೆಗೆ ಲಾಕ್‌ ಡೌನ್‌ ಮುಂದುವರಿಸಿದ್ದು, ವೈರಸ್‌ ಹರಡದಂತೆ ತಡೆಗಟ್ಟಲು ದೇಶವಾಸಿಗಳೆಲ್ಲರೂ ಸಹಕಾರ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟವಾಗಿ ಹೇಳಿದ್ಧಾರೆ. ಆದೇಶವನ್ನು ಪ್ರತಿಯೊಬ್ಬರು ಪಾಲಿಸಲೇಬೇಕು ಎಂದು ಹೇಳಿದರು. ಏಪ್ರಿಲ್‌ 20ರಂದು ಪರಿಸ್ಥಿಯ ಅವಲೋಕನ ನಡೆಸಲಾಗುತ್ತದೆ. ನಂತರ ರಾಜ್ಯ ಹಾಗೂ ಜಿಲ್ಲೆಯ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು. ಮುಖ್ಯಮಂತ್ರಿ ಬಿ.ಎಸ…. ಯಡಿಯೂರಪ್ಪನವರು ಕೂಡ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾ ರೆ ಎಂದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಕೈಗೊಂಡ ಬಿಗಿಯಾದ ಕ್ರಮದಿಂದಾಗಿ ಜಿಲ್ಲೆಯಲ್ಲಿ ಇದುವರೆಗೂ ವೈರಸ್‌ ಹರಡದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕೆ ಜಿಲ್ಲೆಯ ಜನತೆಯೂ ಸಂಪೂರ್ಣ ಸಹಕಾರ ನೀಡಿದ್ದಾರೆ. ದೇವರ ದಯೆಯಿಂದ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ವೈರಸ್‌ ಒಂದೇ ಒಂದು ಪಾಸಿಟಿವ್‌ ಪ್ರಕರಣ ಕಂಡು ಬಂದಿಲ್ಲ. ಮುಂದಿನ ಕೆಲ ದಿನಗಳು ಕೂಡ ಕಠಿಣ ವಾಗಿರಬಹುದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಜನ ಗಾಬರಿಗೊಳ್ಳಬೇಕಿಲ್ಲ. ಪೊಲೀಸ್‌ ಇಲಾಖೆ ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕೈಗೊಳ್ಳುವ ಕ್ರಮಕ್ಕೆ ಜಿಲ್ಲೆ ಯ ಜನ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ವೈದ್ಯಕೀಯ ಶಿಕ್ಷಣ ಸಚಿವ ಡಾ|ಸುಧಾಕರ್‌ ತಮ್ಮ ಕುಟುಂಬದವರೊಂದಿಗೆ ಈಜುಕೊಳದಲ್ಲಿ ಈಜುತ್ತಿರುವುದರ ಫೋಟೋ ಪ್ರಕಟಿಸಿದ್ದರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಈಶ್ವರಪ್ಪ ನಿರಾಕರಿಸಿದರು. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next