Advertisement
ಕುವೆಂಪು ವಿಶ್ವವಿದ್ಯಾಲಯವು ಶನಿವಾರ ವಿವಿಯ ಪ್ರೊ| ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ಅವರ 115ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮನುಜಮತವೇ ಮುಖ್ಯ ಎಂಬ ಆದರ್ಶ ಕ್ಷೀಣಿಸಿ ಇಂದು ಜಾತಿ, ಧರ್ಮಗಳ ಸಂಕುಚಿತತೆ ಹೆಚ್ಚಿದೆ. ಮನುಷ್ಯ ಊರು, ರಾಜ್ಯ, ದೇಶಗಳಿಗೆ ಅಂಟಿಕೊಂಡು ವಿಶ್ವಪಥವನ್ನು ಮರೆತಿದ್ದಾನೆ. ಹೀಗಾಗಿ ಈ ಶತಮಾನದ ಮೊದಲ ವರ್ಷವೇ (2001 ಸೆ. 11) ಅಮೆರಿಕಾದ ಅವಳಿ ಕಟ್ಟಡಗಳ ಮೇಲೆ ಭಯೋತ್ಪಾದನಾ ದಾಳಿ ನಡೆಯಿತು. ವಿಜ್ಞಾನ ತಂತ್ರಜ್ಞಾನದಲ್ಲಿ ಜಗತ್ತು ಮುಂದುವರಿದರೂ ನಾವು ಮಾನವೀಯತೆಯ ಸಂವೇದನಗಳಲ್ಲಿ ವೈಫಲ್ಯ ಕಂಡಿರುವುದನ್ನು ಇದು ತೋರುತ್ತದೆ ಎಂದರು.
Related Articles
ವಿಷಯ ಕುರಿತು ಮಾತನಾಡಿದ ಪುತ್ರಿ ತಾರಿಣಿ, ಅಪ್ಪನೊಂದಿಗೆ ಕಳೆದ ತಮ್ಮ ಬಾಲ್ಯದ ದಿನಗಳು, ಅಧ್ಯಯನ, ಸಾಹಿತ್ಯದ ಪ್ರಭಾವ ಮತ್ತು ಕುವೆಂಪು ಅವರ ಯೋಗಕ್ಷೇಮ ನೋಡಿಕೊಂಡ ಅನುಭವಗಳನ್ನು ಹಂಚಿಕೊಂಡರು. ಕುವೆಂಪು ಅವರ ಸಾಹಿತ್ಯ ಕೃಷಿಯಲ್ಲಿ ತಮ್ಮ ಪಾತ್ರದ ಬಗ್ಗೆ ಕೇಳಿದಾಗ ಮುಂದಿನ ಪ್ರಸಂಗವೊಂದನ್ನು ಹಂಚಿಕೊಂಡರು.
Advertisement
ಕುವೆಂಪು ಅವರು ಮೈಸೂರು ವಿವಿಯಿಂದ ನಿವೃತ್ತಿ ಹೊಂದಿದ ದಿನಗಳಲ್ಲಿ ಕಾದಂಬರಿ ಬರೆಯಲು ತುಡಿಯುತ್ತಿದ್ದರು. ಕಾದಂಬರಿಯ ಕೆಲವು ಅಧ್ಯಾಯಗಳನ್ನು ಹಿಂದೆ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸಿದ್ದು, ಆ ಪ್ರತಿಗಳನ್ನು ಸಂಗ್ರಹಿಸಿಕೊಡಲು ಕೋರಿದ್ದರು. ಜೊತೆಗೆ ಕಾದಂಬರಿ ಕುರಿತು “ಮ್ಯಾಪ್’ ಒಂದನ್ನು ರಚಿಸಿ ಬೀರುವಿನಲ್ಲಿ ಇಟ್ಟು ಮರೆತಿದ್ದು, ಹುಡುಕಿಕೊಡಲು ತಿಳಿಸಿದ್ದರು. ಮನೆಯ ಎಲ್ಲ ಕೋಣೆ, ಕಪಾಟುಗಳನ್ನು ಹುಡುಕಿಯೂ ಸಿಗದೇ ನಾನು ಸುಮ್ಮನಾಗಿದ್ದಾಗ,ಒಂದು ದಿನ ಅವರ ಗ್ರಂಥಾಲಯದ ಬೀರುವಿನ ಪುಸ್ತಕವೊಂದರಲ್ಲಿ ಅದು ದೊರೆತು ಖುಷಿಯಿಂದ ನನ್ನನ್ನು ಕೂಗಿ ಕರೆದಿದ್ದರು. ತುಂಬಾ ಜೋಪಾನವಾಗಿ ಹಳೆಯ ಹಾಳೆಯ ಮಡಿಕೆಗಳನ್ನು ನಿಧಾನವಾಗಿ ಬಿಡಿಸಿ ತೋರಿದಾಗ ಅದರ ತುಂಬಾ ಕೆಲವು ವ್ಯಕ್ತಿಗಳ ಮತ್ತು ಊರುಗಳ ಹೆಸರುಗಳಿದ್ದವು. ಅವುಗಳ ನಡುವೆ ಗಣಿತದ ಕೂಡಿ, ಕಳೆಯುವ ಚಿಹ್ನೆಗಳು ಹಾಗೂ ಬಾಣದ ಗುರುತುಗಳು ಮಾತ್ರವಿದ್ದವು. ನನಗೆ ಏನೊಂದು ಅರ್ಥವಾಗದೇ ಸುಮ್ಮನಾಗಿದ್ದೆ. ಇನ್ನು ನನ್ನ ಕಾದಂಬರಿ ಮುಂದುವರಿಯುತ್ತದೆ ಎಂದ ಅಣ್ಣ (ಕುವೆಂಪು) ಕೆಲವೇ ದಿನಗಳಲ್ಲಿ “ಮಲೆಗಳಲ್ಲಿ ಮದುಮಗಳು’ ಕಾದಂಬರಿ ಬರೆದು ಮುಗಿಸಿದರು ಎಂದರು. ವಿವಿಯ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಮಾತನಾಡಿ, ಕುವೆಂಪು ಅವರ ಸಾಹಿತ್ಯ, ತತ್ವಾದರ್ಶಗಳ ಅಧ್ಯಯನ, ಪ್ರಕಟಣೆ ಮತ್ತು ಪ್ರಸರಣೆಗಾಗಿ ವಿವಿಯಿಂದ ಕುವೆಂಪು ಅಧ್ಯಯನ ಪೀಠವನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. ವಿವಿಯ ಕುಲಸಚಿವ ಪ್ರೊ| ಎಸ್. ಎಸ್. ಪಾಟೀಲ್, ಪರೀಕ್ಷಾಂಗ ಕುಲಸಚಿವ ಪ್ರೊ| ವೆಂಕಟೇಶ್ವರುಲು, ಪ್ರೊ| ರಮೇಶ್, ಪ್ರೊ| ಕೇಶವಶರ್ಮ, ಪ್ರೊ| ಪ್ರಶಾಂತನಾಯ್ಕ ಮತ್ತಿತರರು ಇದ್ದರು.