Advertisement
ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ನಡೆದ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಅಡಕೆ ಬೆಳೆಗಾರರ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆಯಾಯಿತು. ಜತೆಗೆ, ಸಂಘ ಮತ್ತು ಸರಕಾರದಿಂದಾಗಬೇಕಾದ ಕೆಲಸಗಳ ಕುರಿತು ಸದಸ್ಯರು ತಿಳಿಸಿದರು. ಸಣ್ಣ ಪ್ರಮಾಣದ ಅಡಕೆ ಬೆಳೆಗಾರರು ತಾವು ಬೆಳೆದ ಅಡಕೆಯನ್ನು ದೂರದ ಸ್ಥಳಗಳಿಂದ ತಂದು ಮಾಮ್‌ಕೋಸ್‌ಗೆ ನೀಡಲು ಸಾಗಣೆ ವೆಚ್ಚ ಸೇರಿ ದುಬಾರಿಯಾಗುತ್ತಿದೆ. ಹೀಗಾಗಿ, ಸಾಗಣೆಗೆ ಮಾಮ್ ಕೋಸ್‌ನಿಂದ ವಾಹನ ವ್ಯವಸ್ಥೆ ಮಾಡಬೇಕೆಂದು ಎಚ್. ಆರ್. ಬಸವರಾಜಪ್ಪ ಸೇರಿದಂತೆ ಸಂಘದ ಇನ್ನಿತರ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ (ಮಾಮ್‌ಕೋಸ್)ದ ಉಪಾಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ ಅವರು, ಸಂಘಕ್ಕೆ ಇದರಿಂದ ನಷ್ಟವಾಗುವ ಸಾಧ್ಯತೆ ಇದೆ ಎಂದರು.
ನಿಯಮಗಳ ಮತ್ತು ಉಪವಿ ಗಳ ಮೇರೆಗೆ ಸದಸ್ಯನಾಗಿ ಕರ್ತವ್ಯ ನೆರವೇರಿಸುವಲ್ಲಿ ಸತತ ಮೂರು ವರ್ಷ ವಿಫಲನಾದರೆ, ಅವನು ಅಂತಹ ಅವಧಿ ಮುಗಿದಾಗ ಸದಸ್ಯನಾಗಿರುವುದು ನಿಂತು ಹೋಗುತ್ತದೆಂದು ಮಾಹಿತಿ ನೀಡಿದರು.
Related Articles
Advertisement
ಇದಕ್ಕೆ ಉತ್ತರಿಸಿದ ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್, ವಿಮೆ ಹಣ ಬಿಡುಗಡೆಯಾಗಿರುವ ಬಗ್ಗೆ ಗೊತ್ತಿಲ್ಲ. ಅದನ್ನು ಪರಿಶೀಲಿಸಲಾಗುವುದು. ಸಮಸ್ಯೆಗಳಿದ್ದಲ್ಲಿ ಬಗೆಹರಿಸಲಾಗುವುದು. ಜತೆಗೆ, ರೈತರ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಲಾಗುವುದು. ಮುಂದಿನ ವಾರ ವಿಮೆಕುರಿತು ಚರ್ಚಿಸುವುದಕ್ಕಾಗಿಯೇ ಸಭೆ ಕರೆಯಲಾಗಿದ್ದು, ಮಾಮ್‌ಕೋಸ್‌ನ ನಿರ್ದೇಶಕರಿಗೂ ಆಹ್ವಾನಿಸಲಾಗಿದೆ. ಅಲ್ಲಿ ಸಮಸ್ಯೆಗಳನ್ನು ವ್ಯಕ್ತಪಡಿಸುವಂತೆ ತಿಳಿಸಿದರು. ಬಹುಮಾನ ಹಣ ಏರಿಕೆ ಮಾಡಿ: ಪ್ರತಿಭಾ ಪುರಸ್ಕಾರಕ್ಕಾಗಿ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ನೀಡಲಾಗುತ್ತಿರುವ ಬಹುಮಾನ ರೂಪದ ಹಣದಲ್ಲಿ ಏರಿಕೆ ಮಾಡಬೇಕು. ನಿಗದಿಸಿರುವ ಹಣ ಪೂರ್ಣ ಪ್ರಮಾಣದಲ್ಲಿ ಖರ್ಚಾಗುತ್ತಿಲ್ಲ. ಹೀಗಾಗಿ, ಪ್ರತಿಭಾ ಪುರಸ್ಕಾರದಲ್ಲಿ ನೀಡಲಾಗುವ ಬಹುಮಾನದಲ್ಲಿ ನೀಡುವ ಹಣದ ಪ್ರಮಾಣ ಏರಿಕೆ ಮಾಡಿ ಎಂದು ಸದಸ್ಯರೊಬ್ಬರು ಮನವಿ ಮಾಡಿದರು. ಆ ರೀತಿ ಮಾಡಿದರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾದರೆ ತೊಂದರೆ ಆಗುವ ಸಾಧ್ಯತೆಯೂ ಇದೆ. ಆದ್ದರಿಂದ, ಮಾಡಲು ಆಗುವುದಿಲ್ಲ ಎಂದು ಸುಬ್ರಹ್ಮಣ್ಯ ಹೇಳಿದರು. ಕಾಡುಪ್ರಾಣಿಗಳಿಂದಾಗುವ ಹಾನಿ ಕುರಿತು ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಾಧ್ಯಕ್ಷರು, ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಅಲ್ಲಿಂದ ಬಂದಿರುವ ಪ್ರತಿಯಂತೆ, ಹಾನಿ ತಡೆಗೆ ಅರಣ್ಯ ಇಲಾಖೆಯಿಂದ ಸೋಲಾರ್ ಫೆನ್ಸಿಂಗ್‌ಗೆ ಅವಕಾಶವಿದೆ ಎಂದರು. ನಿರ್ದೇಶಕರ ಅಧ್ಯಯನ ಪ್ರವಾಸಕ್ಕೆ 6.03 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ, ಇದರಿಂದ ಸಂಘಕ್ಕೇನು ಲಾಭವಾಗಿದೆ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಬ್ರಹ್ಮಣ್ಯ, ಅಂಡಮಾನ್‌ಗೆ ಭೇಟಿ ನೀಡಲಾಗಿತ್ತು. ಅಲ್ಲಿ ತೆಂಗು ಬೆಳೆಯುವುದು ಸೇರಿದಂತೆ ವಿವಿಧ ಕೃಷಿ ಪದ್ಧತಿ ಬಗ್ಗೆ ತಿಳಿದುಕೊಳ್ಳಲಾಯಿತು ಎಂದರು. ಬರುವ ಅಧ್ಯಯನ ಪ್ರವಾಸಕ್ಕೆ ಹೋಗುವಾಗ ಪ್ರಗತಿಪರ ರೈತರು ಮತ್ತು ಯುವಪೀಳಿಗೆಯನ್ನೂ ಪರಿಗಣಿಸುವಂತೆ ಮನವಿ ಮಾಡಲಾಯಿತು. ಕೊಳೆ ಔಷಧ ಸಾಲವನ್ನು ಗುಂಟೆಗೆ 150 ರೂ.ನಂತೆ ಕೊಡುತ್ತಿದ್ದು, ಅದನ್ನು 300 ರೂ.ಗೆ ಹೆಚ್ಚಿಸಬೇಕು. ಪ್ರಸ್ತುತ ಕೊಳೆ ಔಷಧ ಸಾಲವನ್ನು ಮಾತ್ರ ಪಡೆದಲ್ಲಿ ಗುಂಟೆಗೆ 250 ರೂ. ನೀಡುತ್ತಿದ್ದು, ಇದು ಸೂಕ್ತವಾಗಿರುವುದಾಗಿ ಸಭೆಯಲ್ಲಿ ಸದಸ್ಯರು ತಿಳಿಸಿದರು. ಗೋದಾಮುಗಳಿಗೆ ಪಾವತಿಸಿರುವ ಹಣ, ಕಾವಲು ಮತ್ತು ಭದ್ರತೆ ಹೆಸರಿನಲ್ಲಿವ್ಯಯ ಮಾಡಲಾಗುತ್ತಿರುವ ದುಬಾರಿ ಹಣ ಹಾಗೂ ಸಾಗರದಲ್ಲಿ ಇತ್ತೀಚೆಗೆ ಆದ 6 ಲಕ್ಷ ರೂ. ನಗದು ದರೋಡೆ ಮತ್ತಿತರ ವಿಷಯ ಕುರಿತು ಸಭೆಯಲ್ಲಿ ಪ್ರಶ್ನಿಸಲಾಯಿತು. ಮಾಮ್‌ಕೋಸ್ ನಿರ್ದೇಶಕರಾದ ಎಚ್.ಸಿ. ನಾಗೇಶ್‌ರಾವ್, ಜೆ. ವಿರೂಪಾಕ್ಷಪ್ಪ, ಎಚ್.ಆರ್. ಅಶೋಕ್ ನಾಯಕ, ಬಿ.ಸಿ. ನರೇಂದ್ರ, ಜಿ.ಆರ್. ವೆಂಕಪ್ಪ ಮತ್ತಿತರರು ಇದ್ದರು.