Advertisement

ಇಬ್ಬರಿಗೆ ಸೋಂಕು: ಎರಡು ರಸ್ತೆ ಸೀಲ್‌ಡೌನ್‌

12:43 PM Jun 28, 2020 | Naveen |

ಶಿವಮೊಗ್ಗ: ನಗರದಲ್ಲಿ ಶನಿವಾರ ಎರಡು ರಸ್ತೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಇಬ್ಬರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರ ಮನೆಗಳಿರುವ ರಸ್ತೆಗಳಲ್ಲಿ ಜನ ಸಂಚಾರ ನಿರ್ಬಂಧಿಸಲಾಗಿದೆ.

Advertisement

ಗೋಪಾಲಗೌಡ ಬಡಾವಣೆಯ ಮತ್ತೊಂದು ರಸ್ತೆಯನ್ನು ಇವತ್ತು ಸೀಲ್‌ಡೌನ್‌ ಮಾಡಲಾಗಿದೆ. ಇಲ್ಲಿನ ಡಿ ಬ್ಲಾಕ್‌ನ ರಸ್ತೆಯನ್ನು ಬ್ಯಾರಿಕೇಡ್‌ ಹಾಕಿ ಸೀಲ್‌ಡೌನ್‌ ಮಾಡಲಾಗಿದೆ. ನಿವಾಸಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಬ್ಯಾರಿಕೇಡ್‌ ಹಾಕಿ ರಸ್ತೆಯನ್ನು ಬಂದ್‌ ಮಾಡಲಾಗಿದೆ. ಗೋಪಾಳದ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಎದುರಿನ ವಿವೇಕಾನಂದ ಬಡಾವಣೆಯ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಇಲ್ಲಿನ ನಿವಾಸಿಯೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಈ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next