Advertisement

ಶಿವಮೊಗ್ಗ: ಮನೆ ಗೋಡೆ ಕುಸಿದು ನಾಲ್ವರಿಗೆ ಗಾಯ

07:25 PM Aug 09, 2022 | Shwetha M |

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಮಳೆಗೆ ಮನೆಯೊಂದರ ಗೋಡೆ ಕುಸಿದು ನಾಲ್ವರು ಗಂಭಿರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಸಮೀಪದ ಗೌಳಿ ನಗರದಲ್ಲಿ ನಡೆದಿದೆ.

Advertisement

ಗೋಡೆ ಕುಸಿತದಿಂದ ಬಿಬಿ ಜಾನ್ (55), ಸಾಧಿಕ್ (6), ಉಮರ್ (7) ಹಾಗೂ ಅಬ್ದುಲ್ ಗಾಯಗೊಂಡಿದ್ದಾರೆ.

ಗೌಳಿನಗರದ ನಿವಾಸಿ, ಬಿಬಿ ಜಾನ್ ಎಂಬುವರಿಗೆ ಸೇರಿದ್ದು, ಮನೆಯಲ್ಲಿ ಮಲಗಿದ್ದ  ವೇಳೆ ಅವಘಡ ಸಂಭವಿಸಿದ್ದು, ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next