ಶಿವಮೊಗ್ಗ: ಈ ಬಾರಿಯ ಶಿವಮೊಗ್ಗ ವಿಭಿನ್ನವಾಗಿ ನಡೆಯಲಿದೆ. ಜಂಬೂ ಸವಾರಿಗೆ ಬಂದಿದ್ದ ಭಾನುಮತಿ ಆನೆ ಮರಿ ಹಾಕಿದ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿಯನ್ನು ವಾಹನದಲ್ಲಿ ಮೆರವಣಿಗೆ ಮಾಡಲು ಶಿವಮೊಗ್ಗ ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಸಾಗರ, ಹೇಮಾವತಿ ಆನೆಗಳು ಮೆರವಣಿಗೆಯಲ್ಲಿ ಸಾಗಲಿವೆ.
ಪ್ರತಿ ವರ್ಷ ಸಾಗರ ಆನೆಯು ಅಂಬಾರಿ ಹೊರುತಿತ್ತು ಅದರ ಜತೆಗೆ ಎರಡು ಆನೆಗಳು ಸಾಥ್ ನೀಡುತ್ತಿದ್ದವು. ಕುಂತಿ ಆನೆ ಮರಿ ಹಾಕಿದ್ದು ಭಾನುಮತಿ ಗರ್ಭಿಣಿಯಾಗಿದ್ದ ಕಾರಣಕ್ಕೆ ಹೇಮಾವತಿ, ನೇತ್ರಾವತಿ ಆನೆಗಳನ್ನು ಸಾಗರ ಆನೆಗೆ ಸಾಥ್ ನೀಡಲು ಕರೆತರಲಾಗಿತ್ತು. ಆದರೆ ಇದೀಗ ನೇತ್ರಾವತಿ ಗರ್ಭ ಧರಿಸಿದ ಯಾವುದೇ ಲಕ್ಷಣ ಬಿಟ್ಟು ಕೊಡದೆ ಮರಿ ಹಾಕಿದೆ.
ಈಗ ನೇತ್ರಾವತಿ ಆನೆಯನ್ನು ಸಕ್ರೆಬೈಲು ಬಿಡಾರಕ್ಕೆ ಕಳುಹಿಸಲಾಗಿದ್ದು ಸಾಗರ ಆನೆ ಮೇಲೆ ಅಂಬಾರಿ ಹೊರಿಸದೆ ಮೆರವಣಿಗೆಯಲ್ಲಿ ಕೊಂಡೊಯ್ಯಲು ತೀರ್ಮಾನಿಸಲಾಗಿದೆ.
ಮೆರವಣಿಗೆ ಮಾರ್ಗ: ಕೋಟೆ ಅರಮನೆಯಿಂದ ಹೊರಟು ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ಸರ್ಕಲ್, ನೆಹರು ರಸ್ತೆ, ಜೈಲ್ ಸರ್ಕಲ್, ಲಕ್ಷ್ಮಿ ಟಾಕೀಸ್ ಮೂಲಕ ಸಾಗಿ ಫ್ರೀಡಂ ಪಾರ್ಕ್ನಲ್ಲಿ ಸಮಾರೋಪಗೊಳ್ಳಲಿದೆ.