Advertisement

ಮತ್ತೆ 8 ಮಂದಿಗೆ ಕೋವಿಡ್

12:47 PM Jun 27, 2020 | Naveen |

ಶಿವಮೊಗ್ಗ: ಜಿಲ್ಲೆಯಲ್ಲಿ ಶುಕ್ರವಾರ 8 ಕೋವಿಡ್ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 131ಕ್ಕೆ ಏರಿದೆ. ಈವರೆಗೆ 96 ಮಂದಿ ಗುಣಮುಖರಾಗಿದ್ದು, 33 ಸಕ್ರೀಯ ಪ್ರಕರಣಗಳಿವೆ.

Advertisement

ಇಬ್ಬರು ವೈದ್ಯರಿಗೆ ಕೋವಿಡ್ : ಪ್ರತಿಷ್ಠಿತ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಕ್ಯಾನ್ಸರ್‌ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವಾಗ ವೈದ್ಯರಿಗೆ ಸೋಂಕು ತಗುಲಿದೆ. ಆತನಲ್ಲಿ ಕೋವಿಡ್‌ ಲಕ್ಷಣಗಳು ಇದ್ದುದ್ದರಿಂದ ಇಬ್ಬರೂ ವೈದ್ಯರು ಆಸ್ಪತ್ರೆಯಲ್ಲೇ ಕ್ವಾರಂಟೈನ್‌ ಆಗಿದ್ದರು. ಇನ್ನೊಬ್ಬರು ಮನೆಗೆ ಹೋಗಿದ್ದಾರೆ. ಹೀಗಾಗಿ, ಸ್ವಾಮಿ ವಿವೇಕಾನಂದ ಬಡಾವಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ವೈದ್ಯರಲ್ಲಿ ಶೀತ ಮತ್ತು ಕೆಮ್ಮು
ಕಂಡುಬಂದಿದ್ದು, ಜೂ.23ರಂದು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 25ರಂದು ಸೋಂಕಿರುವುದು ದೃಢಪಟ್ಟಿದೆ.

ಶುಕ್ರವಾರ ಸ್ವಾಮಿ ವಿವೇಕಾನಂದ ಬಡಾವಣೆಯನ್ನು ಸ್ಯಾನಿಟೈಸರ್‌ ಮಾಡಲಾಗಿದೆ. ಅದೃಷ್ಟವಷಾತ್‌ ವೈದ್ಯರು ಯಾರ ಸಂಪರ್ಕಕ್ಕೂ ಬಂದಿಲ್ಲ ಎಂಬುವುದು ಪರಿಶೀಲನೆ ವೇಳೆ ತಿಳಿದುಬಂದಿದೆ. ಭದ್ರಾವತಿ ಮೂಲದ ಬಸ್‌ ಏಜೆಂಟ್‌ ಒಬ್ಬರಿಗೆ ಕೋವಿಡ್ ತಗುಲಿದೆ. ಈಗಾಗಲೇ ಕುಟುಂಬದ ಸದಸ್ಯರು ಸೇರಿ ಎಂಟು ಮಂದಿಗೆ ಕ್ವಾರಂಟೈನ್ ‌ ಮಾಡಲಾಗಿದೆ. ಇನ್ನೂ 35 ಜನ ಪ್ರಾಥಮಿಕ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಹೀಗಾಗಿ, ಇದು ಜಿಲ್ಲಾಡಳಿತಕ್ಕೆ ತಲೆನೋವು ಸೃಷ್ಟಿಸಿದೆ. ಇತ್ತೀಚೆಗೆ ನಿಧನರಾಗಿದ್ದ ಶಿಕಾರಿಪುರ ಮೂಲದ ಅಜ್ಜಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಗ ಮತ್ತು ಮೊಮ್ಮಗನಿಗೂ ಕೋವಿಡ್ ಇರುವುದು ದೃಢಪಟ್ಟಿದೆ.

ಚನ್ನಪ್ಪ ಲೇಔಟ್‌ಗೆ ತರೀಕೆರೆ ನಂಜು: ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೋಸ್ಕರ ತರೀಕೆರೆಯಿಂದ ಬಂದಿದ್ದ ವ್ಯಕ್ತಿಯಲ್ಲೂ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಈತ ಆಸ್ಪತ್ರೆಯಲ್ಲಿ ದಾಖಲಾದಾಗ ಆಹಾರವನ್ನು ಈತನ ಸ್ನೇಹಿತ ಪೂರೈಸಿದ್ದಾನೆ. ಜತೆಗೆ, ನಗರದ ಚನ್ನಪ್ಪ ಲೇಔಟ್‌ನಲ್ಲಿರುವ ಸ್ನೇಹಿತ ಮನೆಯಲ್ಲಿ ಉಳಿದುಕೊಂಡಿದ್ದ. ಹೀಗಾಗಿ, ಇದನ್ನು ಸೀಲ್‌ ಡೌನ್‌ ಮಾಡಲಾಗಿದೆ.

ಇಬ್ಬರು ಕೆಎಸ್‌ಆರ್‌ಪಿ ಪೇದೆಗಳಿಗೆ ಕೋವಿಡ್
ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ವಾಪಸ್‌ ಬಂದಿದ್ದ ಇಬ್ಬರು ಕೆಎಸ್‌ಆರ್‌ಪಿ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಈ ಮೂಲಕ ಕೆಎಸ್‌ಆರ್‌ಪಿವೊಂದರಲ್ಲೇ ಸೋಂಕಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next