Advertisement

ಮತ್ತೆ ಇಬ್ಬರಲ್ಲಿ ಕೋವಿಡ್ ದೃಢ

12:58 PM Jun 22, 2020 | Naveen |

ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಎರಡು ಹೊಸ ಕೋವಿಡ್ ಪಾಸಿಟಿವ್‌ ಪ್ರಕರಣಗಳು ಬೆಳಕಿಗೆ ಬಂದಿವೆ. ವಿವೇಕಾನಂದ ಬಡಾವಣೆಯ 35 ವರ್ಷದ (ಪಿ-8818) ವ್ಯಕ್ತಿಗೆ ಸೋಂಕು ತಗುಲಿದ್ದು, ಈತನಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲ. ಸೋಂಕಿತ ವ್ಯಕ್ತಿ ನಗರದ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಶೀತ, ಜ್ವರ ಕಾಣಿಸಿಕೊಂಡಿದೆ. ಕೋವಿಡ್ ಲಕ್ಷಣದಿಂದಾಗಿ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಪಾಸಿಟಿವ್‌ ಬಂದಿದೆ.

Advertisement

ಸೋಂಕಿನ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿಗೆ ಹೋಂ ಕ್ವಾರಂಟೈನ್‌ನಲ್ಲೇ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಶೋರೂಂನಿಂದ ಫೋನ್‌ ಬರಬಹುದೆಂಬ ಕಾರಣಕ್ಕೆ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದ. ಈ ವೇಳೆ ಆರೋಗ್ಯ ಇಲಾಖೆಯವರು ಕರೆ ಮಾಡಿದಾರೆ. ಆದರೆ, ಫೋನ್‌ಗೆ ಸಿಗದ್ದಕ್ಕೆ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದಾನೆಂಬ ವದಂತಿ ಹರಡಿಕೊಂಡಿದೆ. ತಕ್ಷಣ ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ.

ವಿವೇಕಾನಂದ ಬಡಾವಣೆ ಸೀಲ್‌ಡೌನ್‌: ಪಿ-8818 ಈತನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದರಿಂದ ವಿವೇಕಾನಂದ ಬಡಾವಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಜತೆಗೆ, ಬಡಾವಣೆಗೆ ಸ್ಯಾನಿಟೈಸರ್‌ ಸಿಂಪಡಣೆ ಮಾಡಲಾಗಿದೆ.

ಸಾಗರ: ತಾಲೂಕಿನ ಭಾನುಕುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಿಗಾರು ಬಳಿಯ ಕೌತಿ ಗ್ರಾಮದಲ್ಲಿ 25 ವರ್ಷದ (ಪಿ-8817) ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್‌ ಬಂದಿದೆ. ಈತ ಮಹಾರಾಷ್ಟ್ರದಿಂದ ವಾಪಸ್‌ ಬಂದಿದ್ದು, ಕ್ವಾರಂಟೈನ್‌ ಮಾಡಲಾಗಿತ್ತು. ಗಂಟಲು ದ್ರವದ ಮಾದರಿ ಪರೀಕ್ಷೆ ಬಳಿಕ ಸೋಂಕು ತಗುಲಿರುವುದು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next