ಶಿವಮೊಗ್ಗ: ಕೋವಿಡ್ ತಡೆಯುವ ನಿಟ್ಟಿನಲ್ಲಿ ಕ್ವಾರಂಟೈನ್‌ನಲ್ಲಿರುವವರು ಸೇರಿದಂತೆ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಅನುರಾಧಾ ಹೇಳಿದರು.
ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಕೊರೊನಾ ಶಂಕಿತರ ನಿಗಾವಣೆ ಕೇಂದ್ರಕ್ಕೆ ರೆಡ್‌ಕ್ರಾಸ್ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿ, ಬೇರೆ ಜಿಲ್ಲೆ ಜನರು ಹಾಗೂ ಕಾರ್ಮಿಕರು ಕ್ವಾರಂಟೈನ್ ನಲ್ಲಿ ಇನ್ನೂ ಕೆಲವು ದಿನ ಇರುವುದು ಅನಿವಾರ್ಯವಾಗಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳಲು ಪ್ರಸ್ತುತ ಅವಕಾಶವಿಲ್ಲ. ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ನಿಗಾ ಮುಂದುವರೆಯಲಿದೆ ಎಂದರು.
ಕ್ವಾರಂಟೈನ್ ಅವಧಿ ಪೂರ್ಣಗೊಂಡಿರುವ ಬೇರೆ ಜಿಲ್ಲೆಯ ಜನರು ಹಾಗೂ ಕಾರ್ಮಿಕರು ಊರಿಗೆ ಕಳುಹಿಸುವಂತೆ ಮನವಿ ಮಾಡಿದಾಗ, ಅವರಿಗೆ ಅಪರ ಜಿಲ್ಲಾಧಿಕಾರಿ ತಿಳಿಹೇಳಿದರು. ರೆಡ್‌ಕ್ರಾಸ್ ರಾಜ್ಯ ಉಪಾಧ್ಯಕ್ಷ ಡಾ| ವಿ.ಎಲ್.ಎಸ್.ಕುಮಾರ್ ಮಾತನಾಡಿದರು. ರೆಡ್‌ಕ್ರಾಸ್ ವತಿಯಿಂದ ಮಾಸ್ಕ್ಗಳನ್ನು ವಿತರಿಸಲಾಯಿತು. ರೆಡ್‌ಕ್ರಾಸ್ ಪ್ರಮುಖರಾದ ಆರ್. ಗಿರೀಶ್, ಜಿ.ವಿಜಯ್‌ಕುಮಾರ್,
ಅಣ್ಣಪ್ಪ, ಕೋಟ್ರೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.