Advertisement

ಕೋವಿಡ್ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

01:38 PM Jun 08, 2020 | Naveen |

ಶಿವಮೊಗ್ಗ: ಕೋವಿಡ್‌-19 ವೈರಸ್‌ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಜಾಗೃತಿ ವಹಿಸುವುದು ತೀರಾ ಅವಶ್ಯಕ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್‌.ವಾಸುದೇವ್‌ ಹೇಳಿದರು.

Advertisement

ನಗರದ ಗಾರ್ಡನ್‌ ಏರಿಯಾದಲ್ಲಿ ನಟರಾಜ ಸಮೂಹ ಸಂಸ್ಥೆ ವತಿಯಿಂದ ಜಿಲ್ಲಾ ಹಾರ್ಡ್‌ವೇರ್ ವರ್ತಕರಿಗೆ ಉಚಿತವಾಗಿ 500 ಸ್ಯಾನಿಟೈಸರ್‌ ಕಿಟ್‌ ಗಳನ್ನು ವಿತರಿಸಿ ಮಾತನಾಡಿದ ಅವರು, ಕೋವಿಡ್‌-ಹರಡುವಿಕೆ ತಡೆಗಟ್ಟಲು ಪ್ರತಿಯೊಬ್ಬರು ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಸಲಹೆ ನೀಡಿದರು. ಸಾರ್ವಜನಿಕ ವಲಯದ ಉದ್ಯಮದಲ್ಲಿ ನಿರಂತರ ಸಂಪರ್ಕದಲ್ಲಿರುವ ಹಾರ್ಡ್ ವೇರ್ಸ್ ವರ್ತಕರು ಮಹಾಮಾರಿ ವೈರಸ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಪಾಲಿಸಬೇಕು. ನಟರಾಜ ಸಮೂಹ ಸಂಸ್ಥೆಯವರು ಎಲ್ಲ ವರ್ತಕರಿಗೂ ಸ್ಯಾನಿಟೈಸರ್‌ ಕಿಟ್‌ಗಳನ್ನು ವಿತರಿಸುತ್ತಿರುವುದು ಅಭಿನಂದನಾರ್ಹ ಎಂದರು. ಪ್ರತಿನಿತ್ಯ ವರ್ತಕರು ವ್ಯಾಪಾರ ವಹಿವಾಟು ಮಾಡುವುದರಿಂದ ಕೋವಿಡ್‌ ವೈರಸ್‌ ಹೇಗೆ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಡಿಜಿಟಲ್‌ ಪೇಮೆಂಟ್‌ ಮೂಲಕ ವ್ಯವಹರಿಸಬೇಕು. ಸಾಮಾಜಿಕ ಅಂತರದೊಂದಿಗೆ ಕೆಲಸ ಮಾಡಬೇಕು ಎಂದರು.

ನಟರಾಜ ಮಾರ್ಕೆಟಿಂಗ್‌ ಮಾಲೀಕ ಡಿ.ಎಲ್‌.ಮಂಜುನಾಥ್‌ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ವರ್ತಕರು ವ್ಯಾಪಾರ ಮಾಡುವ ಸ್ಥಳದಲ್ಲಿ ಅತ್ಯಂತ ಜಾಗರೂಕರಾಗಿ ಇರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂದು ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಡಿ.ಪಿ.ಸಂದೀಪ್‌, ಶ್ರೀಮಾತಾ ಎಂಟರ್‌ಪ್ರ„ಸಸ್‌ ಮಾಲೀಕ ಡಿ.ಎಂ.ಅರ್ಜುನ್‌, ಎಸ್‌ಎಲ್‌ಆರ್‌ ಇಂಡಸ್ಟ್ರೀಸ್‌ ಮಾಲೀಕ ಸಿ.ಎನ್‌. ಶ್ರೀನಿವಾಸ್‌, ಸ್ಮಾರ್ಟ್‌ ಕಲೆಕ್ಷನ್‌ ಮಾಲೀಕ ಡಿ.ಎಲ್‌.ನಟರಾಜ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಎಸ್‌.ಎಸ್‌.ಉದಯ್‌ಕುಮಾರ್‌, ಕಾರ್ಯದರ್ಶಿ ಬಿ.ಗೋಪಿನಾಥ್‌, ನಿರ್ದೇಶಕರದ ಎ.ಎಂ.ಸುರೇಶ್‌, ಜಿ.ವಿಜಯ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next