Advertisement
ಪ್ರೇಮ್‌ಸಿಂಗ್‌ಗೆ ಚಾಕು ಇರಿದಿದ್ದ ಆರು ಆರೋಪಿಗಳ ಪೈಕಿ ನಾಲ್ವರು ಬಲೆಗೆ ಬಿದ್ದಿದ್ದಾರೆ. ಜೆ.ಸಿ.ನಗರದ ನದೀಮ್ (25), ಅಬ್ದುಲ್ ರೆಹಮಾನ್ (25), ಆರ್‌ಎಂಎಲ್ ನಗರದ ತನ್ವೀರ್ ಅಹಮ್ಮದ್, ಪ್ರಮುಖ ಆರೋಪಿ ಮೊಹಮ್ಮದ್ ಜಬೀವುಲ್ಲಾ (30) ಬಂಧಿತರು.
Related Articles
Advertisement
ವೈಯಕ್ತಿಕ ದ್ವೇಷಕ್ಕೆ ಭದ್ರಾವತಿಯಲ್ಲಿ ಹಲ್ಲೆಭದ್ರಾವತಿಯಲ್ಲಿ ನಡೆದ ಹಲ್ಲೆ ವಿಚಾರ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾವಚಿತ್ರ ವಿವಾದ ಇರಬಹುದೆಂದು ಶಂಕಿಸಲಾಗಿತ್ತು. ಆದರೆ ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಘಟನೆಯಾಗಿದೆ. ಅದಕ್ಕೆ ಪೂರಕವಾಗಿ ಹಲ್ಲೆಗೆ ಒಳಗಾದ ಸುನಿಲ್ ಕುರಿತಾದ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ನಡೆದಿದ್ದ ಗಲಾಟೆ ಕಾರಣದಿಂದ ಜೈಲಿನಿಂದ ಹೊರಬಂದ ಮುಬಾರಕ್ ಎಂಬಾತ ಈಗ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರಾವತಿ ಹಳೇಟೌನ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಘಟನೆ ಹಿನ್ನೆಲೆಯಲ್ಲಿ ಐಜಿಪಿ ತ್ಯಾಗರಾಜನ್ ಸೋಮವಾರ ರಾತ್ರಿಯೇ ನಗರಕ್ಕಾಗಮಿಸಿದ್ದು ನಗರದ ಹಲವು ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಎನ್‌ಟಿ ರಸ್ತೆ, ನ್ಯೂ ಮಂಡ್ಲಿ, ಊರಗಡೂರು, ಸೀಗೆಹಟ್ಟಿ, ಗಾಂಧಿ ಬಜಾರ್‌ನಲ್ಲಿ ಸಂಚರಿಸಿದರು. ಈ ಪ್ರದೇಶಗಳ ಸೂಕ್ಷ್ಮ ಪಾಯಿಂಟ್‌ಗಳಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿದ್ದಾರೆ. ಡಬಲ್ ರೈಡ್ ಕ್ಯಾನ್ಸಲ್
ಗುರುವಾರ ರಾತ್ರಿ 10ರವರೆಗೆ ನಗರದಲ್ಲಿ ನಿಷೇಧಾಜ್ಞೆ ಮುಂದುವರೆಸಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕುಮಾರ್ ಸೋಮವಾರ ರಾತ್ರಿ ನಗರಕ್ಕಾಗಮಿಸಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. 40 ವರ್ಷಕ್ಕಿಂತ ಕೆಳಗಿನವರು ಬೈಕ್‌ನಲ್ಲಿ ಡಬಲ್ ರೈಡ್‌ನಲ್ಲಿ ಹೋಗುವಂತಿಲ್ಲ. ಈ ನಿಯಮದಿಂದ ಮಹಿಳೆಯರಿಗೆ ವಿನಾಯಿತಿ ನೀಡಲಾಗಿದೆ. ರಾತ್ರಿ 9ರಿಂದ ಬೆಳಗಿನ 5ರವರೆಗೆ ದ್ವಿಚಕ್ರ ವಾಹನ ಸಂಚಾರ ನಿಷೇಧಿ ಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಂಗಳವಾರ ಭದ್ರಾವತಿ ಮತ್ತು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿ ಸಲಾಗಿತ್ತು. ಇಂದಿನಿಂದ ಶಾಲೆಗಳು ಪುನಾರಂಭ
ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಶಾಲೆಗಳು ಆ.17ರಿಂದ ಎಂದಿನಂತೆ ಪುನಾರಂಭವಾಗಲಿವೆ. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಆ.16, 17ರಂದು ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ಘೋಷಿಸಿದ್ದರು. ಆದರೆ ಪರಿಸ್ಥಿತಿ ತಹಬದಿಗೆ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗಲಿವೆ. ತುಮಕೂರಲ್ಲೂ ಕಿಡಿಗೇಡಿಗಳ ದುಷ್ಕೃತ್ಯ
ತುಮಕೂರು ನಗರದಲ್ಲಿಯೂ ವೀರ ಸಾವರ್ಕರ್ ಭಾವಚಿತ್ರ ಹರಿದು ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಆ.15ರ ಸ್ವಾತಂತ್ರ್ಯ ದಿನದ ಕಾರ್ಯಕ್ರಮಕ್ಕಾಗಿ ಶಾಸಕ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರು ಭಾವಚಿತ್ರ ಹಾಕಿಸಿದ್ದರು. ಅವುಗಳನ್ನು ತೆರವುಗೊಳಿಸುವ ಮೊದಲೇ ಅವುಗಳನ್ನು ಹರಿದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರಿಗೆ ದೂರು ನೀಡಿದ್ದಾರೆ. ಸುದ್ದಿ ತಿಳಿದ ಕೂಡಲೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಟೌನ್ ಹಾಲ್ ಬಿಜಿಎಸ್ ವೃತ್ತದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಶಿವಮೊಗ್ಗದಲ್ಲಿ ಮಂಗಳವಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಕ್ರಿಯೆ ನಡೆಯುವಾಗ ಹೇಳಿಕೆ ನೀಡುವುದು ಸರಿಯಲ್ಲ. ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ತನಿಖೆ ಮಾಡಲು ಆದೇಶಿಸಲಾಗಿದೆ. ಪೊಲೀಸರು ತಮ್ಮ ಕರ್ತವ್ಯ ಮಾಡಲಿದ್ದಾರೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ