ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರೈತರು ದೇಶದ ಬೆನ್ನೆಲುಬಾಗಿದ್ದು, ರೈತರು ಬೆಳೆದಿರುವ ಬೆಳೆಗಳನ್ನು, ವ್ಯವಸಾಯ ಉತ್ಪಾದನೆಗಳನ್ನು (ಮೆಕ್ಕೆಜೋಳ, ತರಕಾರಿ, ಹಣ್ಣುಗಳು, ಹೂವು) ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಅವರು ತಮ್ಮ ಬೆಳೆಗಳನ್ನು, ಹಣ್ಣುಗಳನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಿ ಮುಂದಿನ ಬೆಳೆಗಳನ್ನು ಬೆಳೆಯಲು ಉತ್ತಮ ಆರ್ಥಿಕತೆ ಹೊಂದಲಾಗದಿದ್ದರೆ ರೈತರು ತಂಬಾ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ತಿಳಿಸಿದರು.
ಜಿಲ್ಲೆಯೊಂದರಲ್ಲಿ ಸಾವಿರಾರು ಹೆಕ್ಟೇರ್‌ಗಳಲ್ಲಿ ಅನಾನಸ್, ಕರಬೂಜ, ಬೂದಗುಂಬಳ, ತರಕಾರಿಗಳು ಹೊರ ರಾಜ್ಯಗಳಿಗೆ ರವಾನೆ ಮಾಡದೆ ರೈತರು ಕಂಗಾಲಾಗಿರುತ್ತಾರೆ. ರೈತರು ಬೆಳೆದಿರುವ ಬೆಳೆಗಳನ್ನು, ವ್ಯವಸಾಯ ಉತ್ಪಾದನೆಗಳನ್ನು ಅಂದರೆ ಮೆಕ್ಕೆಜೋಳ, ತರಕಾರಿ, ಹಣ್ಣುಗಳು, ಹೂವುಗಳನ್ನು ಹೊರ ರಾಜ್ಯಗಳಿಗೆ ಸಾಗಾಟ ಮಾಡಲು ವಿಶೇಷ ಪರವಾನಗಿ ಅಥವಾ ಅನುಮತಿಯನ್ನು ಸರ್ಕಾರ ಹಾಗು ಜಿಲ್ಲಾಡಳಿತ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಅದೇ ರೀತಿ ಅಡಿಕೆ ಬೆಳೆಯನ್ನು ಬೆಳೆದ ರೈತರು, ವರ್ತಕರು, ಅಡಿಕೆ ಬೆಳೆ ಕಾರ್ಮಿಕರು ಅಡಿಕೆ ಬೆಳೆ ಹೊರ ರಾಜ್ಯಗಳಿಗೆ ರವಾನೆಯಾಗದೆ, ಮಾರಾಟವಾಗದೆ ಅ ಧಿಕ ರೀತಿಯ ಆರ್ಥಿಕ ಸಂಕಷ್ಟದಲ್ಲಿದ್ದು, ಮುಂದಿನ ಬೆಳೆಗಳನ್ನು ಬೆಳೆಯಲು ಆರ್ಥಿಕತೆಯ ಅನುಕೂಲ ಹೊಂದಲಾಗದಿದ್ದರೆ ಮುಂದಿನ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸರ್ಕಾರ ಈ ಕೂಡಲೇ ರೈತರ ಕಷ್ಟಗಳಿಗಳಿಗೆ ಸ್ಪಂದಿಸಲು ಅಗತ್ಯ ತುರ್ತು ಕ್ರಮ ಕೈಗೊಂಡು ಹೊರ ರಾಜ್ಯಗಳಿಗೆ ರೈತರ ಬೆಳೆಗಳನ್ನು ಸಾಗಾಟ ಮಾಡಲು ವಿಶೇಷ ಪರವಾನಗಿ ಅಥವಾ ಅನುಮತಿಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕೊರೊನಾ ಲಾಕ್‌ಡೌನ್‌ನಿಂದ ಸಮಸ್ಯೆಗೆ ಒಳಗಾಗಿರುವ ಬಡವರಿಗೆ ಮತ್ತು ನಿರ್ಗತಿಕರಿಗೆ ಮಹಾನಗರ ಪಾಲಿಕೆ ವತಿಯಿಂದ ನೀಡುತ್ತಿರುವ 1000 ಆಹಾರದ ಕಿಟ್ ಸಾಕಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಆಹಾರ ಕಿಟ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೆಲವೇ ಕೆಲವು ಆಹಾರದ ಕಿಟ್ ವಿತರಿಸುವುದರಿಂದ ನಿಜವಾದ ಬಡವರಿಗೆ ಅನ್ಯಾಯವಾಗುವ ಸಾಧ್ಯತೆಯಿದೆ. ಹೀಗಾಗಿ ಯಾವ ವಾರ್ಡ್‌ಗಳಲ್ಲಿ ಆಹಾರದ ಕಿಟ್ ಅಭಾವ ಉಂಟಾಗುತ್ತದೋ ಅಲ್ಲಿ 1000ಕ್ಕೆ ಬದಲಾಗಿ ಒಂದೂವರೆ ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಹಾರದ ಕಿಟ್ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಮುಖರಾದ ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು .