Advertisement
ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ 36 ಗ್ರಾಮ ಕೂಡುವಳಿಕೆಗಳ ವ್ಯಾಪ್ತಿಯನ್ನು ಹೊಂದಿರುವ ಶ್ರೀಗುರು ಕಾಷ್ಠ ಶಿಲ್ಪ ಸಮಿತಿಯ ಉದ್ಘಾಟನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಯಾವ ಕೆಲಸವೂ ಸಣ್ಣದಲ್ಲ, ನಮ್ಮ ನಮ್ಮ ಪಾಲಿಗೆ ಬಂದ ಕರ್ಮವನ್ನು ಶ್ರದ್ಧೆಯಿಂದ ನಡೆಸೋಣ; ಪಂಚಕಸುಬುಗಳ ಮಂದಿ ಪಾರಸ್ಪರಿಕವಾಗಿ ಉತ್ತಮ ಬಾಂಧವ್ಯ ವಿರಿಸಿಕೊಳ್ಳೋಣ. ಅನ್ಯ ಎಲ್ಲ ಬಗೆಯ ವೃತ್ತಿಯವರನ್ನೂ ಪ್ರೀತಿಸೋಣ, ಗೌರವಿಸೋಣ, ಆದರೆ, ನಮ್ಮತನ, ಪರಂಪರೆಯನ್ನು ತಿಳಿದು ಅದನ್ನು ಬಿಟ್ಟುಕೊಡದಿರೋಣ ಎಂದರು.
Related Articles
Advertisement
ಮುಖ್ಯ ಅತಿಥಿ, ಕಾಳಿಕಾಂಬಾ ದೇವಸ್ಥಾನದ ಮೂರನೇ ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ ಅವರು ಮಾತನಾಡಿ, ಶಿಲ್ಪಕಾರ್ಯದಿಂದ ತೊಡಗಿ ಎಲ್ಲ ನಿರ್ಮಾಣ ಕಾರ್ಯಗಳನ್ನು ಕಾಂಟ್ರಾಕ್ಟ್ ಪದ್ಧತಿಯಿಂದ ಯಾರೋ ಉದ್ಯಮ ಸ್ವರೂಪಿ ವ್ಯಕ್ತಿಗಳು ನಡೆಸುವ ಕೆಟ್ಟ ಬೆಳವಣಿಗೆಗೆ ತಡೆಹಾಕಲೇಬೇಕು’ ಎಂದು ಕರೆ ನೀಡಿದರು.
ಮುಖ್ಯಅತಿಥಿಗಳಾಗಿ ಕಾಳಿಕಾಂಬಾ ದೇವಸ್ಥಾನದ ಎರಡನೇ ಮೊಕ್ತೇಸರ ಉಳಿಯ ಬಾಲಕೃಷ್ಣ ಆಚಾರ್ಯ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಪ್ರಭಾವತಿ ಗೋಪಾಲ ಆಚಾರ್ಯ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ ಭಾಗವಹಿಸಿ ಶುಭ ಹಾರೈಸಿದರು.ಸಭಿಕರ ಪರವಾಗಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಬೆಳುವಾಯಿ ಭಾಸ್ಕರ ಆಚಾರ್ಯ, ಮಹಿಳಾ ಸಮಿತಿ ಕಾರ್ಯದರ್ಶಿ ಗೀತಾ ಯೋಗೀಶ ಆಚಾರ್ಯ ಮಾತನಾಡಿದರು.ಶ್ರೀ ಗುರು ಕಾಷ್ಠ ಶಿಲ್ಪ ಸಮಿತಿ ಅಧ್ಯಕ್ಷ ಎಂ.ಎಸ್. ಜಗದೀಶ ಆಚಾರ್ಯ ಸ್ವಾಗತಿಸಿದರು. ಹೊಸ್ಮಾರು ಗಣೇಶ ಆಚಾರ್ಯ ಪ್ರಸ್ತಾವನೆಗೈದರು. ಸಚ್ಚೆರಿಪೇಟೆ ಗಣೇಶ ಆಚಾರ್ಯ , ಪುರೋಹಿತ ಮುನಿಯಾಲು ಪುರಂದರ ಆಚಾರ್ಯ ನಿರೂಪಿಸಿದರು.