Advertisement

‘ನನ್ನ ಪತಿ ನಿರಪರಾಧಿ, ಆತ ಮುಗ್ದ’ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

05:18 PM Jul 24, 2021 | Team Udayavani |

ಮುಂಬೈ : ನೀಲಿ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಪ್ರಕರಣದಡಿ ಬಂಧಿತರಾಗಿರುವ ತಮ್ಮ ಪತಿ ಕುರಿತು ಕೊನೆಗೆ ನಟಿ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ. ನನ್ನ ಪತಿ ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.

Advertisement

ತನ್ನ ಪತಿ ರಾಜ್ ಕುಂದ್ರಾ ನಿರಪರಾಧಿ ಎಂದು ಅಪರಾಧ ವಿಭಾಗ ಪೋಲಿಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಹಾಟ್‌ಶಾಟ್‌ಗಳ ಅಪ್ಲಿಕೇಶನ್‌ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ.ರಾಜ್ ಕುಂದ್ರಾ ಯಾವುದೇ ರೀತಿಯ ಅಶ್ಲೀಲ ಚಿತ್ರ ನಿರ್ಮಾಣ ದಲ್ಲಿ ಭಾಗಿಯಾಗಿರಲಿಲ್ಲ ಎಂದಿದ್ದಾರೆ.

ಶುಕ್ರವಾರ ಮುಂಬೈ ಕ್ರೈಂ ಬ್ರ್ಯಾಂಚ್ ನ ಪೊಲೀಸರು ಜುಹು ಪ್ರದೇಶದಲ್ಲಿರುವ ಶಿಲ್ಪಾ ಶೆಟ್ಟಿ ಮನೆಗೆ ತೆರಳಿ ಸುದೀರ್ಘ ಕಾಲ ವಿಚಾರಣೆಗೆ ಒಳಪಡಿಸಿದ್ದರು.

ಶಿಲ್ಪಾ ಶೆಟ್ಟಿ ವಯಾನ್ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಇತ್ತೀಚಿಗೆ ಈ ಕಂಪನಿ ಮೇಲೆ ದಾಳಿ ನಡೆಸಿದ್ದ ಮುಂಬೈ ಪೊಲೀಸರು, ಅಶ್ಲೀಲ ಸಿನಿಮಾಗಳ ಕುರಿತಾದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಮೊಬೈಲ್ ಆಯಪ್‌ಗಳ  ಮೂಲಕ ಪ್ರಸಾರ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಈವರೆಗೆ ಕುಂದ್ರಾ ಅವರೊಂದಿಗೆ 10 ಜನರನ್ನು ಬಂಧಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮುಂಬೈ ಕ್ರೈಂ ಬ್ರಾಂಚ್ ನಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೊಬೈಲ್ ಅಪ್ಲಿಕೇಶನ್‌ನ ಹಾಟ್‌ಶಾಟ್‌ಗಳ ಮೂಲಕ ಅಶ್ಲೀಲ ಕಂಟೆಂಟ್ ಸ್ಟ್ರೀಮಿಂಗ್ ಮಾಡುವಲ್ಲಿ ತೊಡಗಿದ್ದ ಲಂಡನ್ ಮೂಲದ ಸಂಸ್ಥೆಯೊಂದಿಗೆ ಕುಂದ್ರಾ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next